ಕಲಬುರಗಿ: ಸ್ಪೀಕರ್ ಯು.ಟಿ. ಖಾದರ್‌, ಹಜರತ ಖಾಜಾ ಬಂದನವಾಜ್ (ರ.ಅ) ದರ್ಗಾಕ್ಕೆ ಭೇಟಿ

Date:

Share post:

ಕಲಬುರಗಿ : ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಶುಕ್ರವಾರ ಹಜರತ್ ಖಾಜಾ ಬಂದನವಾಜ್ (ರ.ಅ) ದರ್ಗಾ ದರ್ಶನ ಪಡೆದು ಸಜ್ಜಾದಾ ನಶೀನ ಅವರೊಂದಿಗೆ ಜುಮಾ ನಮಾಜ ಮಾಡಿದರು. ನಮಾಜಿನ ಬಳಿಕ ಅವರು ಗುಂಬದ್ ಮುಬಾರಕ್ಗೆ ಭೇಟಿ ನೀಡಿ, ಪುಷ್ಪಾರ್ಚನೆ ಸಲ್ಲಿಸಿದರು ಹಾಗೂ ಫಾತಿಹಾ ಖುವಾನಿ ನೆರವೇರಿಸಿತು.

 

ನಂತರ, ಸಜ್ಜಾದಾ ನಶೀನ್ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸೈನೀ ಅವರು ಯು.ಟಿ. ಖಾದರ್ ಅವರಿಗೆ ಸನ್ಮಾನ ಮಾಡಿ, ಪವಿತ್ರ ತಬರುಕ್ಕಾತ್ (ಮಂಗಳ ವಸ್ತುಗಳು) ನೀಡಿದರು. ನಂತರ ದರ್ಗಾ ಶರೀಫ್‌ನ ಸಂಪೂರ್ಣ ಪವಿತ್ರ ದರ್ಶನ (ಜಿಯಾರತ್) ಮಾಡಿಸಿದರು.

 

“ಇಂದು ನನಗೆ ಹಜರತ್ ಖಾಜಾ ಬಂದನವಾಜ್ (ರ.ಅ) ದರ್ಗಾ ಶರೀಫ್‌ಗೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿದೆ. ಬಡಿ ದೇ಼ವಡಿಯಲ್ಲಿ ಸಜ್ಜಾದಾ ನಶೀನ್ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸೈನೀ ಮತ್ತು ಅವರ ತಮ್ಮ ಡಾ. ಸಯ್ಯದ್ ಮುಸ್ತಫಾ ಅಲ್-ಹುಸೈನೀ ಅವರನ್ನು ಭೇಟಿ ಮಾಡಿದೆ. ಇಲ್ಲಿ ಪಡೆದ ದುವೆಗಳೊಂದಿಗೆ ನಾನು ಹೊರಡುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಜನಾಬ್ ಸಯ್ಯದ್ ಶಾಹ್ ತಕಿ ಉಲ್ಲಾ ಹುಸೈನೀ, ಜನಾಬ್ ಸಯ್ಯದ್ ಮುರ್ತಝಾ ಹುಸೈನೀ, ಜನಾಬ್ ಸಯ್ಯದ್ ಆಕಿಬ್ ಹುಸೈನೀ, ಜನಾಬ್ ಆದಿಲ್ ಸುಲೇಮಾನ್ ಸೇಠ್, ಜನಾಬ್ ಶಫೀಕ್ ಅಹ್ಮದ್ (ಶಬ್ಬು) ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಕೂಡ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...