ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ದಾರಿದ್ರ್ಯ ನಿರ್ಮೂಲನ ಹಮ್ಮಿಕೊಳ್ಳಲಾಯಿತು.
ಜೇವರ್ಗಿ ಕಾಲೋನಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಜ್ಯೋತಿ. ಕೆ. ಎಸ್ ಮಾತನಾಡಿ, ಈ ದಿನವನ್ನು ವಿಶ್ವದಾದ್ಯಂತ ದಾರಿದ್ರ್ಯ ನಿವಾರಣೆ, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ಪ್ರೋತ್ಸಾಹಕ್ಕಾಗಿ ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಬಡತನದಲ್ಲಿರುವ ಜನರ ಕಷ್ಟಗಳನ್ನು ಅರಿತುಕೊಳ್ಳುವುದು, ಅವರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಮತ್ತು ಎಲ್ಲರಿಗೂ ಗೌರವಯುತ ಜೀವನವನ್ನು ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿದೆ ಎಂದರು.
ದಾರಿದ್ರ್ಯ ನಿವಾರಣೆ ಒಂದು ಸಾಮಾಜಿಕ ಜವಾಬ್ದಾರಿ ಆಗಿದ್ದು, ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಸೇರಿ ಕಾರ್ಯನಿರ್ವಹಿಸಿದರೆ ಮಾತ್ರ ಸತ್ಯವಾದ ಅಭಿವೃದ್ಧಿ ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಕಿವಿ ಮಾತುಗಳನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್. ಬಿ.ಕೊಂಡಾ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ದಾರಿದ್ರ್ಯ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನದ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.
ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ವಿಭಾಗದ ಮುಖ್ಯಸ್ಥರಾದ ಡಾ. ಶ್ರೀದೇವಿ ಸಿದ್ದಣ್ಣ ಅವರು ಅತಿಥಿ ಪರಿಚಯ ಮತ್ತು ಪ್ರಸ್ತಾವನೆ ಮಾಡಿದರು.ಕು.ಹಾದಿಯ ನಿರೂಪಣೆ ಮಾಡಿದರು, ಸ್ವಾಗತ ಗೀತೆ ಕು.ವೈಷ್ಣವಿ, ಸ್ವಾಗತ ಭಾಷಣ ಸಿಮ್ರನ್, ವಂದನಾರ್ಪಣೆ ಕು.ದಿವ್ಯ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಿವಲೀಲಾ ಧೋತ್ರ, ಡಾ. ಮಹೇಶ ಗoವಾರ ಡಾ. ಜ್ಯೋತಿ ಪ್ರಕಾಶ್ ದೇಶಮುಖ್, ಕವಿತಾ ಎ ಎಂ, ಗೀತಾ ಪಾಟೀಲ್, ಬಸ್ಸಮ್ಮ ಗೊಬ್ಬರ ಹಾಗೂ ಇತರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಮಹಾವಿದ್ಯಾಲಯದ ಮಾಧ್ಯಮ ಸಮಿತಿಯ ಡಾ.ಮಹೇಶ ಗಂವ್ಹಾರ ತಿಳಿಸಿದ್ದಾರೆ.


