ಕಲಬುರಗಿ| ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರ

Date:

Share post:

ಕಲಬುರಗಿ: 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಇಲಾಖೆಯು ಎಸ್.ಎಮ್.ವಿ.ಟಿ. (SMVT) ಬೆಂಗಳೂರು ಮತ್ತು ಬೀದರ್ ನಡುವೆ ವಿಶೇಷ ರೈಲು 18 ಟ್ರಿಪ್‍ಗಳಲ್ಲಿ ಸಂಚರಿಸಲಿದೆ. ಈ ರೈಲು ಸೋಲಾಪುರ ವಿಭಾಗದ ಮೂರು ರೈಲ್ವೆ ನಿಲ್ದಾಣಗಳಾದ ಕಲಬುರಗಿ, ಶಹಾಬಾದ್ ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಮ್.ವಿ.ಟಿ. (SMVT) ಬೆಂಗಳೂರು-ಬೀದರ್ ವಿಶೇಷ ರೈಲು (ರೈಲು ಸಂಖ್ಯೆ 06539) ಈಗ ಪ್ರತಿ ಶುಕ್ರವಾರ ಮತ್ತು ಭಾನುವಾರದಂದು 2025ರ ಅಕ್ಟೋಬರ್ 31 ರವರೆಗೆ 9 ಟ್ರಿಪ್‍ಗಳಲ್ಲಿ ಸಂಚರಿಸಲಿದೆ. ಈ ಹಿಂದೆ ಈ ರೈಲು ಸೆಪ್ಟೆಂಬರ್ 28 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.

ಅದೇ ರೀತಿ ಬೀದರ್- ಎಸ್.ಎಮ್.ವಿ.ಟಿ. (SMVT) ಬೆಂಗಳೂರು (ರೈಲು ಸಂಖ್ಯೆ 06540) ವಿಶೇಷ ರೈಲು ಈಗ ಪ್ರತಿ ಶನಿವಾರ ಮತ್ತು ಸೋಮವಾರದಂದು 2025ರ ನವೆಂಬರ್ 1 ರವರೆಗೆ (9 ಟ್ರಿಪ್‍ಗಳಲ್ಲಿ) ಸಂಚರಿಸಲಿದೆ. ಈ ಹಿಂದೆ ಈ ರೈಲು ಸೆಪ್ಟೆಂಬರ್ 29 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.

ವಿಶೇಷ ರೈಲಿಗೆ ಟಿಕೇಟ್ ಕಾಯ್ದಿರಿಸುವಿಕೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.irctc.co.in ವೆಬ್‍ಸೈಟ್‍ನ್ನು, ಯು.ಟಿ.ಎಸ್. (UTS) ಅಪ್ಲಿಕೇಶನ್ ಮೂಲಕ, ಈ ವಿಶೇಷ ರೈಲುಗಳ ನಿಲುಗಡೆಗಳಲ್ಲಿ ವಿವರವಾದ ಸಮಯಕ್ಕಾಗಿ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ವೆಬ್‍ಟೈಟ್‍ಗೆ ಭೇಟಿ ನೀಡಲು ಅಥವಾ ಎನ್.ಟಿ.ಎಸ್.ಇ. (ಓಖಿಇS) ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಪಡೆಯಬಹುದಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...