ಕಲಬುರಗಿ: ನಿರಂತರವಾಗಿ ಬದಲಾಗುತ್ತಿರುವ ಕೈಗಾರಿಕಾ ಮಾನದಂಡಗಳನ್ನು ಪೂರೈಸಲು ಕೌಶಲ್ಯ ಆಧಾರಿತ ಇಂಜಿನಿಯರಿಂಗ್ ಶಿಕ್ಷಣವನ್ನು ಉನ್ನತೀಕರಿಸುವ ನಿರಂತರ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ ಶರಣಬಸವ ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಿಂದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೆಷನ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಅನುಸರಿಸುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೌಶಲ್ಯ ವರ್ಧನೆ ಐಚ್ಛಿಕ ಕೋರ್ಸ್ ಪರಿಚಯಿಸಲು ಕೈಗಾರಿಕಾ ಸಂಸ್ಥೆಯಾದ ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ) ಜೊತೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ ಎಸ್ ಜಿ ಡೊಳ್ಳೇಗೌಡರ್ ಮತ್ತು ಎಲ್ & ಟಿಯ ಶೈಕ್ಷಣಿಕ ಪಾಲುದಾರಿಕೆಯ ಮುಖ್ಯಸ್ಥ ಶ್ರೀ ಮಯಾಂಕ್ ರಂಜನ್ ಅವರು ಉನ್ನತ ಶಿಕ್ಷಣದಲ್ಲಿ ಕೈಗಾರಿಕೆ-ವಿಶ್ವವಿದ್ಯಾಲಯ ಭಾಗವಹಿಸುವಿಕೆಯಲ್ಲಿ ಹೊಸ ಆರಂಭವನ್ನು ಸೂಚಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಎಲ್ & ಟಿಯ ವಿಷಯ ತಜ್ಞರಾದ ಡಾ. ಉಮಾ ಪವನ ಮತ್ತು ಇತರರ ಸಮ್ಮುಖದಲ್ಲಿ ಈ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಉದ್ಯಮದ ಅವಶ್ಯಕತೆಗಳನ್ನು ಪೂರೈಸಲು ಮತ್ತು ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಅನುಸರಿಸುವ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಸೂಕ್ತವಾದ ಇಂಜಿನಿಯರಿಂಗ್ ವಿಷಯಗಳೊಂದಿಗೆ ಎಲ್ & ಟಿ “ಎಲ್ & ಟಿ ಎಜುಟೆಕ್” ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿನ ವಿಭಾಗಗಳಿಗೆ ಕೋರ್ಸ್ ಸಾಮಗ್ರಿಗಳನ್ನು ಎಲ್ & ಟಿ ಎಜುಟೆಕ್ ಸಿದ್ಧಪಡಿಸುತ್ತದೆ ಮತ್ತು ಸಂಪೂರ್ಣ ಕೋರ್ಸ್ ಅವಧಿಯಲ್ಲಿ ಎಲ್ & ಟಿ ಎಜುಟೆಕ್‍ನ ಅಧ್ಯಾಪಕರು ಆಯಾ ವಿಶ್ವವಿದ್ಯಾಲಯಗಳಲ್ಲಿಯೇ ಇದ್ದು, ವಿದ್ಯಾರ್ಥಿಗಳಿಗೆ ನೀಡುವ ಕೋರ್ಸ್‍ಗಳಲ್ಲಿ ತರಗತಿಗಳನ್ನು ನಡೆಸುತ್ತಾರೆ.
ವಿಶ್ವವಿದ್ಯಾಲಯ ಮತ್ತು ಎಲ್ & ಟಿ ಎಜುಟೆಕ್ ನಡುವೆ ಸಹಿ ಹಾಕಿದ ಒಪ್ಪಂದದ ಪ್ರಕಾರ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೆಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯ ವರ್ಧನೆ ಆಯ್ಕೆ ಕೋರ್ಸ್‍ಗಳನ್ನು ಪರಿಚಯಿಸಲಾಗಿದೆ. ನೀಡಲಾಗುವ ಹೊಸ ಕಾರ್ಯಕ್ರಮದಲ್ಲಿ “ಇಂಟಿಗ್ರೇಟೆಡ್ ಪೆÇ್ರೀಗ್ರಾಂ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಇಂಟಿಗ್ರೇಟೆಡ್ ಪೆÇ್ರೀಗ್ರಾಂ ಇನ್ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್/ಐಟಿ” ಕೋರ್ಸಗಳು ಸೇರಿವೆ. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್‍ನಲ್ಲಿ ಕನಿಷ್ಠ ವಿದ್ಯಾರ್ಥಿಗಳ ದಾಖಲಾತಿಯನ್ನು 50 ಕ್ಕೆ ನಿಗದಿಪಡಿಸಲಾಗಿದ್ದು, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಕೋರ್ಸ್‍ಗೆ ಕನಿಷ್ಠ ವಿದ್ಯಾರ್ಥಿಗಳ ದಾಖಲಾತಿಯನ್ನು 150 ಕ್ಕೆ ನಿಗದಿಪಡಿಸಲಾಗಿದೆ. ಹೊಸ ಕೌಶಲ್ಯ ವರ್ಧನೆ ಐಚ್ಛಿಕ ಕೋರ್ಸ್ ಮುಂದುವರಿಸಲು ಆಯ್ಕೆ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ಸೆಮಿಸ್ಟರ್‍ಗೆ 8000 ರೂ. ಶುಲ್ಕ ವಿಧಿಸಲಾಗುತ್ತದೆ. ಈ ಹೊಸ ಕೋರ್ಸ್ ಪಡೆಯಲು ವಿದ್ಯಾರ್ಥಿಗಳಿಗೆ ಯಾವುದೇ ಕಡ್ಡಾಯ ಮಾನದಂಡವಿಲ್ಲ, ಇದು ಆಯಾ ವಿಭಾಗಗಳಲ್ಲಿರುವ ಸಾಮಾನ್ಯ ಕೋರ್ಸ್‍ಗೆ ಹೆಚ್ಚುವರಿಯಾಗಿರುತ್ತದೆ.
ಮಾತೋಶ್ರೀ ಪೂಜ್ಯ ಡಾ. ಅವ್ವಾಜಿ ಅವರು ಹೊಸ ಒಪ್ಪಂದವು ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಮತ್ತು ಆಯಾ ಕೋರ್ಸ್‍ಗಳ ಕೊನೆಯಲ್ಲಿ ಅವರನ್ನು ಉದ್ಯಮಕ್ಕೆ ಸಿದ್ಧಪಡಿಸುವಲ್ಲಿ ಬಹಳ ಸಹಾಯ ಮಾಡುತ್ತದೆ ಎಂದು ಈ ಸಂಧರ್ಭದಲ್ಲಿ ಹೇಳಿದರು ಮತ್ತು ಉದ್ಯಮದ ಪ್ರಮುಖ ಸಂಸ್ಥೆ ಎಲ್ & ಟಿ ಜೊತೆ ಒಪ್ಪಂದ ಮಾಡಿಕೊಳ್ಳಲು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಒಪ್ಪಿಗೆ ನೀಡಿದರು. ಒಪ್ಪಂದದ ಪ್ರಕಾರ ಇಡೀ ಕೋರ್ಸ್‍ನ ಪಠ್ಯಕ್ರಮವನ್ನು ಎಲ್ & ಟಿ ಯ ತಜ್ಞರು ಸಿದ್ಧಪಡಿಸುತ್ತಾರೆ ಮತ್ತು ಎಲ್ & ಟಿ ಯ ತಜ್ಞ ಅಧ್ಯಾಪಕರು ಹೊಸ ಕೋರ್ಸ್‍ನಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ ಎಂದು ಅವರು ತಿಳಿಸಿದರು.
ವಿವಿಯ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಅವರು ಈ ಹೊಸ ಕೋರ್ಸ್ ವಿದ್ಯಾರ್ಥಿಗಳಿಗೆ ನೀಡಲು ಹೊಸ ತಂತ್ರಜ್ಞಾನ ಬಳಸುತ್ತಾರೆ ಹಾಗೂ ಎಲ್ & ಟಿ ಎಜುಟೆಕ್ ನೀಡುವ ಈ ಕೋರ್ಸ್, ವಿದ್ಯಾರ್ಥಿಗಳನ್ನು ಕೌಶಲ್ಯಪೂರ್ಣಗೊಳಿಸುವ ಮತ್ತು ಅವರನ್ನು ಉದ್ಯಮಕ್ಕೆ ಸಿದ್ಧಗೊಳಿಸುವ ಪ್ರಯತ್ನಗಳಲ್ಲಿ ವಿಶ್ವವಿದ್ಯಾಲಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದರು.


