ಕಲಬುರಗಿ: ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಯಾವುದೇ ಕ್ರೀಡೆ ಪರಿಣಾಮಕಾರಿ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ ಅಲಿ ರಜಾ ಮೂಸ್ವಿ ಹೇಳಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಮನಸ್ಸನ್ನು ತಾಜಾಗೊಳಿಸುತ್ತವೆ. ಕ್ರೀಡೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಕ್ರೀಡಾಂಗಣ ಪ್ರವೇಶಿಸಿದಾಗ ಜಗತ್ತನ್ನು ಮರೆತುಬಿಡುತ್ತೀರಿ ಮತ್ತು ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಲು ಕರೆ ನೀಡಿದರು. ಆಯೋಜನೆ ಗಾಗಿ ಶ್ರಮಿಸಿದ ಎಲ್ಲರಿಗೆ ಅಭಿನಂದಿಸಿದರು. ಇದು ಟೀಮವರ್ಕ್. ಭಾಗವಹಿಸಿದ ಎಲ್ಲರಿಗೂ ನಾನು ಶುಭ ಹಾರೈಸಿದರು.
ಕೆಬಿಎನ್ ವಿವಿಯ ಕುಲಸಚಿವ ಮಿರ ವಿಲಾಯತ ಅಲಿ ಇವರು ಮಾತನಾಡುತ್ತ, ಆಟಗಳಲ್ಲಿ ಗೆಲ್ಲುವುದು ಅಥವಾ ಸೋಲುವುದು ಮಹತ್ವ ಅಲ್ಲ. ನ್ಯಾಯೋಚಿತ ಆಟ ಅರ್ಥಪೂರ್ಣ. ನಿಜವಾದ ಗೆಲುವು ಎಂದರೆ ಭಾಗವಹಿಸುವಿಕೆ. ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಇಂತಹ ಅವಕಾಶಗಳು ಅವಶ್ಯಕವಾಗಿವೆ.
ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸಂಚಾರದ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧೀಸಲಾಯಿತು.
7 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕ್ಯಾರಮ, ಚೆಸ, ಬ್ಯಾಡ್ಮಿಂಟನ, ವಾಲಿಬಾಲ, ಥ್ರೋ ಬಾಲ, ಶಾಟ ಪುಟ, ರಂಗೋಲಿ, ಮೆಹಂದಿ, ಪೇಂಟಿಂಗ, ಪೋಸ್ಟರ, ಗಾಯನ, ನೃತ್ಯ ಸೇರಿದಂತೆ ವಿವಿಧ ಕ್ರೀಡೆ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸೂಫಿಯನ ಪ್ರಾರ್ಥಿಸಿದರೆ, ವಿದ್ಯಾರ್ಥಿ ಕಲ್ಯಾಣ ಡೀನ ಡಾ ಅನೂಪ ಸ್ವಾಗತಿಸಿದರು. ಸಹಾಯಕ ಪ್ರಧ್ಯಪಾಕ ಡಾ. ಮಾರೂಫ ವಂದಿಸಿದರೆ, ಗಣಿತ ವಿಭಾಗದ ಮುಖ್ಯಸ್ಥೆ ಡಾ. ಸನಾ ಇಜಾಜ್ ನಿರೂಪಿಸಿದರು.
ಕೆಬಿಎನ್ ವಿವಿಯ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖಾಜಾ ಬಂದಾನವಾಜ ವಿವಿಯ ಅಕ್ಯಡೆಮಿಕ ಡೀನ ಡಾ ಜಮಾ ಮೂಸ್ವಿ, ಮೆಡಿಕಲ ಡೀನ ಡಾ. ಗುರು ಪ್ರಸಾದ, ಇಂಜಿನಿಯರಿಂಗ ಡೀನ ಪ್ರೊ ಸುಭಾಸ ಕಮಲ, ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಮತ್ತು ಕಾನೂನು ಡೀನ ಡಾ. ನಿಶಾತ ಆರೀಫ್ ಹುಸೇನಿ, ಶಿಕ್ಷಣ ಡೀನ ಮೊಹ್ಮದ ಇಕ್ಬಲ, ವಾಣಿಜ್ಯ ಡೀನ ಪ್ರೊ ಶ್ರೀನಿವಾಸ ಹಾಗೂ ಎಲ್ಲ ಮುಖ್ಯ ಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


