ಕಲಬುರಗಿ: ತಾಡತೆಗನೂರು (ಕಲಬುರಗಿ-01) ಜವಾಹರ ನವೋದಯ ವಿದ್ಯಾಲಯದಲ್ಲಿ 2026-27ನೇ ಸಾಲಿನಲ್ಲಿ 9ನೇ ಹಾಗೂ 11ನೇ ತರಗತಿಗಳ ಖಾಲಿ ಇರುವ ಸೀಟುಗಳ ಪ್ರವೇಶ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2025ರ ಅಕ್ಟೋಬರ್ 21 ರವರೆಗೆ ವಿಸ್ತರಿಸಲಾಗಿದೆ ಎಂದು ತಾಡತೆಗನೂರು (ಕಲಬುರಗಿ-01) ಜವಾಹರ ನವೋದಯದ ಪ್ರಾಚಾರ್ಯರು ತಿಳಿಸಿದ್ದಾರೆ.
ತಾಡತೆಗನೂರು ನವೋದಯ ವಿದ್ಯಾಲಯಕ್ಕೆ ಒಳಪಡುವ ತಾಲೂಕುಗಳಾದ ಆಳಂದ, ಅಫಜಲಪೂರÀ, ಜೇವರ್ಗಿ ಹಾಗೂ ಕಲಬುರಗಿ ಉತ್ತರ ವಲಯ ಮತ್ತು ಕಲಬುರಗಿ ದಕ್ಷಿಣ ವಲಯ ತಾಲೂಕುಗಳಲ್ಲಿ 8ನೇ ತರಗತಿಯಲ್ಲಿ ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
9ನೇ ತರಗತಿಯ ಪ್ರವೇಶ ಪರೀಕ್ಷೆಗೆ https://cbseitms.nic.in/2025/nvsix_9 ಲಿಂಕ್ ಮೂಲಕ ಹಾಗೂ 11ನೇ ತರಗತಿಗೆ ಪ್ರವೇಶ ಪರೀಕ್ಷೆಗೆ https://cbseitms.nic.in/2025/nvsxi_11 ಲಿಂಕ್ ಮೂಲಕ 2025ರ ಅಕ್ಟೋಬರ್ 21 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಾಡತೆಗನೂರು ಜವಾಹರ ನವೋದಯ ವಿದ್ಯಾಲಯಕ್ಕೆ ಸಂಪರ್ಕಿಸಲು ಕೋರಲಾಗಿದೆ.


