ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಪದಾವಧಿಯು ದಿನಾಂಕ: 11-11-2026ಕ್ಕೆ ಮುಕ್ತಾಯಗೊಳ್ಳಲಿದ್ದು, ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ–2026ಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಹಾಗೂ ಮತದಾರರರಿಗೆ ಮಾಹಿತಿ ನೀಡಲು ಕಲಬುರಗಿ ಮಿನಿ ವಿಧಾನಸೌಧದಲ್ಲಿನ ಕೋಣೆ ಸಂಖ್ಯೆ-11ರಲ್ಲಿನ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ (Complaints Monitoring Cell & Voters helpdesk) ವನ್ನು ಸ್ಥಾಪಿಸಿ ಈ ಕೆಳಕಂಡ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಈ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08472-278606/ 9008440605 ಇದ್ದು, ಸಾರ್ವಜನಿಕರು ಈ ಸಲಹಾ ಕೇಂದ್ರಕ್ಕೆ ಸಂಪರ್ಕಿಸಿ ಮತದಾರರ ನೋಂದಣಿ ಹಾಗೂ ಚುನಾವಣೆ ಕುರಿತಾದ ಮಾಹಿತಿ ಪಡೆಯಬಹುದಾಗಿದೆ. ಯಾವುದೇ ದೂರುಗಳಿದ್ದದಲ್ಲಿ ದಾಖಲಿಸಬಹುದಾಗಿದೆ. ಅರ್ಹತಾ ದಿನಾಂಕ: 01-11-2025ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ವೇಳಾಪಟ್ಟಿಯನ್ನು ಹೊರಡಿಸಿದ್ದು, ನಾಂಕ:25.11.2025 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ, ದಿನಾಂಕ:25.11.2025 ರಿಂದ 10.12.2025ರ ವರೆಗೆ ಆಕ್ಷೇಪಣೆಗಳನ್ನು ಅಹ್ವಾನಿಸಿ, ದಿನಾಂಕ:30.12.2025 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕಾಗಿದ್ದು, ಈ ಕಾರ್ಯಕ್ಕಾಗಿ ಅರ್ಹ ಮತದಾರರು ನೋಂದಣಿಗಾಗಿ ಮಾಹಿತಿ ಕೋರಿದ್ದಲ್ಲಿ ಸೂಕ್ತ ಮಾಹಿತಿಯನ್ನು ನೀಡಿ, ಅವರ ಹೆಸರನ್ನು ನೋಂದಾಯಿಸಲು ಅಲ್ಲದೇ ಈಗಾಗಲೇ ನೋಂದಣಿಯಾಗಿದ್ದಲ್ಲಿ ಅವರ ಮತದಾರರ ಪಟ್ಟಿಯ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿ ನೀಡುವುದು ಇದನ್ನು ಹೊರತುಪಡಿಸಿಯು ಸಹ ಮತದಾರರ ನೋಂದಣಿ ಪ್ರಕ್ರೀಯೆ ಪ್ರಾರಂಭದಿಂದ ಈ ಚುನಾವಣೆಯ ಫಲಿತಾಂಶ ಘೋಷಣೆಯಾಗುವವರೆಗೂ ಲಿಖಿತವಾಗಿ, ಮೌಖಿಕವಾಗಿ ಹಾಗೂ ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ದೂರುಗಳ ಮೇಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮಕೈಗೊಳ್ಳಲು ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸ್ಥಾಪಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.
ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ ನೇಮಿಸಲಾದ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳ ವಿವರ ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನ್ನಾವರ್ ದೌಲಾ ಇವರ ಮೋಬೈಲ್ ಸಂಖ್ಯೆ: 9986108000, ತಹಸೀಲ್ದಾರ ವಿಠಾಬಾಯಿ ಮೋಬೈಲ್ ಸಂ. 9008440605 ಹಾಗೂ ಸಿನಿಯರ್ ಪ್ರೊಗ್ರಾಮರ್ ರಮೇಶ ಸಿಂಗ್ ರಜಪೂತ ಮೋಬೈಲ್ ಸಂ. 8431521983 ಗೆ ಸಂಪರ್ಕಿಸಬೇಕು.
ಅಫಜಲಪೂರ ತಾಲೂಕು: ಗ್ರೇಡ್-2 ತಹಸೀಲ್ದಾರ ಶರಣಬಸವ ಮೋ: 7899132333 ಹಾಗೂ ಶಿರಸ್ತೆದಾರ ಮಂಜುನಾಥ ಜೋಗ ಮೋಬೈಲ್ ಸಂಖ್ಯೆ: 9901755150, ಜೇವರ್ಗಿ ತಾಲೂಕು ಗ್ರೇಡ್-2 ತಹಸೀಲ್ದಾರ ಗೋಪಾಲ ಕಪೂರ ಮೋಬೈಲ್ ಸಂಖ್ಯೆ 9739478018 ಹಾಗೂ ಶಿರಸ್ತೆದಾರ ದೇವಿಂದ್ರ ಮೊಬೈಲ್ ಸಂಖ್ಯೆ 9538560700, ಚಿತ್ತಾಪೂರ ತಾಲೂಕು: ಗ್ರೇಡ್-2 ತಹಸೀಲ್ದಾರ ರಾಜಕುಮಾರ ಎಂ. ಇವರ ಮೊಬೈಲ್ ಸಂಖ್ಯೆ 8105190111 ಹಾಗೂ ಶಿರಸ್ತೆದಾರ ಅಶ್ವಥ ನಾರಾಯಣ ಮೋಬೈಲ್ ಸಂ. 9448652111, ಸೇಡಂ ತಾಲೂಕು: ಗ್ರೇಡ್-2 ತಹಸೀಲ್ದಾರ ಭೀಮಣ್ಣ ಕುದುರಿ ಮೋ: 9901625928 ಹಾಗೂ ಶಿರಸ್ತೆದಾರ ರಾಜಕುಮಾರ ಮೋಬೈಲ್ ಸಂಖ್ಯೆ 6361376408,ಚಿಂಚೋಳಿ ತಾಲೂಕು: ಗ್ರೇಡ್-2 ತಹಸೀಲ್ದಾರ ವೆಂಕಟೇಶ ದುಗ್ಗನ್ ಮೋಬೈಲ್ 9945939641 ಹಾಗೂ ಶಿರಸ್ತೇದಾರ ಅಶೋಕ ಕುಲಕರ್ಣಿ ಇವರ ಮೊಬೈಲ್ ಸಂಖ್ಯೆ 9449437000.
ಗುಲಬರ್ಗಾ ತಾಲೂಕು: ಗ್ರೇಡ್-2 ತಹಸೀಲ್ದಾರ ಗಂಗಾಧರ ಪಾಟೀಲ-8105477749 ಹಾಗೂ ಶಿರಸ್ತೇದಾರ್ ದಯಾನಂದ ರೆಡ್ಡಿ ಮೋ: 9731738788, ಶಹಾಬಾದ ತಾಲೂಕು: ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಮೋಬೈಲ್ ಸಂ. 8147126716 ಹಾಗೂ ಶಿರಸ್ತೇದಾರ್ ರಾಜೇಶ ದೇವಣಿ ಮೋ: 9632410622, ಕಮಲಾಪೂರ ತಾಲೂಕು: ಗ್ರೇಡ್-2 ತಹಶೀಲ್ದಾರ ಶಿವಕುಮಾರ ಸಾಬಾ ಮೋ: 8722584444 ಹಾಗೂ ಶಿರಸ್ತೇದಾರ್ ದೀಪಕಶೆಟ್ಟಿ ಮೋ:9972898112, ಕಾಳಗಿ ತಾಲೂಕು: ಗ್ರೇಡ್-2 ತಹಶೀಲ್ದಾರ ರಾಜೇಶ್ವರಿ ಮೊಬೈಲ್ ಸಂ. 9945454043 ಹಾಗೂ ಶಿರಸ್ತೇದಾರ್ ಸಂತೋಷ ಕೇಶ್ವಾರ ಇವರ ಮೋಬೈಲ್ ಸಂ. 9901164297 ಹಾಗೂ ಯಡ್ರಾಮಿ ತಾಲೂಕು: ಗ್ರೇಡ್-2 ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮೊಬೈಲ್ ಸಂ. 9986518344 ಹಾಗೂ ಶಿರಸ್ತೇದಾರ್ ಇವರ ಮೊಬೈಲ್ ಸಂ. ಮಹಾನಿಂಗ ಮೊಬೈಲ್ ಸಂಖ್ಯೆ: 8310770063.
ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ (Complaints Monitoring Cell & Voters helpdesk) ಕ್ಕೆ ನೇಮಕ ಮಾಡಲಾದ ಅಧಿಕಾರಿ ಹಾಗೂ ಸಿಬ್ಬಂದಿಗಳು ತಕ್ಷಣದಿಂದಲೇ ಕಾರ್ಯನಿರ್ವಹಿಸಿ ಲಿಖಿತವಾಗಿ / ಮೌಖಿಕವಾಗಿ / ದೂರವಾಣಿ ಮುಖಾಂತರ ಸ್ವೀಕೃತವಾಗುವ ಎಲ್ಲಾ ರೀತಿಯ ಸಲಹೆ ಹಾಗೂ ದೂರುಗಳಿಗೆ ದಾಖಲಾಧಾರಿತವಾದ ವಹಿಯನ್ನು ನಿರ್ವಹಿಸಿ ನಿಯಮಾನುಸಾರ ವಿಲೇಗೊಳಿಸಿ ಕಾಲೋಚಿತಗೊಳಿಸಬೇಕೆಂದು ಅವರು ಸೂಚಿಸಿದ್ದಾರೆ.


