ಕಲಬುರಗಿ: ಇಲ್ಲಿನ ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಲೆಪ್ರಸಿ ಕಾಲೊನಿಯಲ್ಲಿ ವಿವಸ್ತ್ರಗೊಳಿಸಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಷ್ಠರೋಗಿಗಳ ಕಾಲೊನಿಯ ನಿವಾಸಿಗಳಾದ ಸೈಬಣ್ಣಾ ಕುಂಬಾರ (25), ಸೈಬಣ್ಣ ಪುರದಾಳ (22) ಹಾಗೂ 16 ವರ್ಷದ ಬಾಲಕ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ಕಾಲೊನಿಯ ನಿವಾಸಿ ಆಗಿರುವ ಆಟೋ ಚಾಲಕ ಚಾಂದ್‌ಸಾಬ್ ಮೂಲಗೆ ಎಂಬಾತನನ್ನು ಆತನ ಮನೆಯಲ್ಲೇ ವಿವಸ್ತ್ರಗೊಳಿಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸರು, ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


