ಕಲಬುರಗಿ| ಪಟ್ಟಣ ಗ್ರಾಮದಲ್ಲಿ ಶೀಘ್ರ ಕಾಲೇಜು, ಆಸ್ಪತ್ರೆ, ಪೊಲೀಸ್ ಠಾಣೆ, ಕಂದಾಯ ಕಚೇರಿ ಸ್ಥಾಪನೆ: ಶಾಸಕ ಅಲ್ಲಂಪ್ರಭು ಪಾಟೀಲ್

Date:

Share post:

ಕಲಬುರಗಿ; ಕಂದಾಯ ಕೇಂದ್ರಸ್ಥಾನ, ಜತೆಗೇ ಜಿಲ್ಲಾ ಪಂಚಾಯ್ತಿ ಮತಕ್ಷೇತ್ರದ ಕೇಂದ್ರಸ್ಥಾನವಾಗಿದ್ದರು ಇದುವರೆಗೂ ಅಭಿವೃದ್ಧಿಯಿಂದ ವಂಚಿತವಾಗಿರುವ ಪಟ್ಟಣ ಗ್ರಾಮದಲ್ಲಿ ಕಾಲೇಜು, ಆಸ್ಪತ್ರೆ, ಪೊಲೀಸ್ ಔಟ್ಪೋಸ್ಟ್, ರಸ್ತೆ ಜಾಲ ಅಭಿವೃದ್ಧಿ, ವಸತಿ ಶಾಲೆಗಳಂತಹ ಬಹು ಜನರ ಅಭಿವೃದ್ಧಿಗೆ ಪೂರಕವಾಗಿವುತಂಹ ಯೋಜನೆಗಳನ್ನು ತಂದು ಇಡೀ ಪಟ್ಟಣ ಗ್ರಾಮದ ಸರ್ವತೋಮುಖ ಪ್ರಗತಿಗೆ ತಾವು ಬದ್ಧ ಎಂದು ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಸೆ. 17 ರ ಕಲ್ಯಾಣ ಉತ್ಸವದಲ್ಲಿ ಸಿಎಂ ಹಾಗೂ ಜಿಲ್ಲಾ ಸಚಿವರಿಂದ ಅಡಿಗಲ್ಲಿಡಲಾಗಿರುವ ಅಂಬೇಡ್ಕರ್ ಹಾಗೂ ಮೊರಾರ್ಜಿ ವಸತಿ ಶಾಲೆ ಕಾಮಗಾರಿಗಳಿಗೆ ಸೋಮವಾರ ಪಟ್ಟಣ ಗ್ರಾಮಲ್ಲಿನ ಸರಳ ಸಮಾರಂಭದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಅವರು, ಪಟ್ಟಮದಲ್ಲಿ ಆಸ್ಪತ್ರೆ , ಪೊಲೀಸ್ ಔಟ್ಪೋಸ್ಟ್ ಬೇಕು ಎಂಬ ಬೇಡಿಕೆ ಇದ್ದು ಅದರ ಬಗ್ಗೆ ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುತ್ತಿದೆ. ಈಗಾಗಲೇ ಇಲ್ಲಿಗೆ 110 ಕೆವಿ ವಿದ್ಯುತ್ ಉಪಕೇಂದ್ರ ಮಂಜೂರಾಗಿದೆ. ಜೊತೆಗೇ ರೈತರ ಬೇಡಿಕೆಂತೆ ಕ22 ೆಕರೆ ಜಾಗದಲ್ಲಿ ಕೆರೆ ನಿರ್ಮಾಣ ಯೋಜನೆಯೂ ಮಂಜೂರಾಗಿದ್ದು ಶೀಘ್ರವೇ ಈ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವುದಾಗಿ ಹೇಳಿದರು.

ಪಟ್ಟಣ ಗ್ರಾಮದಲ್ಲಿ ಮಂಜೂರಾಗಿರುವ ಅಂಬೇಡ್ಕರ್ ವಸತಿ ಶಾಲೆ ಯೋಜನೆಯೂ 22 ಕೋಟಿ ರು ಮೊತ್ತದ್ದಾಗಿದ್ದು 250 ಮಕ್ಕಳಿಗೆ ವಸತಿಯುತ ಗುಣಮಟ್ಟದ ಶಿಕ್ಷಣ ದೊರಕಲಿದೆ. ಈಗಾಗಲೇ ಈ ಶಾಲೆ ಬಾಡಿಗೆ ಕಟ್ಟಡದಲ್ಲಿದ್ದು ಇದೀಗ ಸ್ವಂತ ಕಟ್ಟಡ ಹೊಂದುವತ್ತ ಹೆಜ್ಜೆ ಹಾಕಿದೆ. ಅಲ್ಪಸಂಖ್ಯಾತರ ಇಲಾಖೆಯಿಂದ ಮೋರಾರ್ಜಿ ವಸತಿ ಶಾಲೆಯೂ ಮಂಜೂರಾಗಿದ್ದು 17 ಕೋಟಿ ರು ಮೊತ್ತದ ಯೋಜನೆ ಇದಾಗಿದೆ. ಇವೆರಡೂ ಕಟ್ಟಡ ಕಾಮಗಾರಿಗಲು 18 ತಿಂಗಳಲ್ಲಿ ಗುಣಮಟ್ಟದಲ್ಲಿ ಮಾಡಿ ಮುಗಿಸಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಉಭಯ ಸಮಾರಂಭಗಳಲ್ಲಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ರಮೇಶ, ಮಾಜಿ ಜಿಪಂ ಸದಸ್ಯ ಸಂತೋಷ ಪಾಟೀಲ್ ದಣ್ಣೂರ, ನಾಗರಾಜ, ಧರ್ಮಣ್ಣ, ಇಸ್ಮಾಯಿಲ್, ಅಪ್ಪಾರಾವ್, ಸಾವಳಗಿ ಪಂಚಾಯ್ತಿಯ ರಮೇಶ ಗುಂಡಪ್ಪ ಲಂಡನಕರ್, ರವಿ ಮಲಶೆಟ್ಟಿ, ರಾಘವೇಂದ್ರ, ಸೋಮಣ್ಣ ನಿಂಬರಗಿ, ಸತೀಶ, ಅಸ್ಲಾಂ, ಚಂದ್ರಕಾಂತ ಸುಲ್ತಾನಪೂರ್, ಬಸವರಾಜ ಜೀವಣಗಿ, ವಸತಿ ಶಿಕ್ಷಣ ಸಂಸ್ಥೆಯ ಎಂಡಿ ಡಾ. ನಟರಾಜ್ ಹಾಗೂ ಅಂಬೇಡ್ಕರ್ ವಸತಿ ಶಾಲೆಯ ಅಧ್ಯಾಪಕ ವೃಂದದವರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಏ.15 ರಿಂದ 17ರ ವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ 

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಏಪ್ರೀಲ್ 15 ರಿಂದ 17ರ ವರೆಗೆ...

ಕಲಬುರಗಿ| ಅಂಬೇಡ್ಕರ್ ಜಯಂತಿ: ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ: ಡಿಸಿ ಆದೇಶ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಯಾವುದೇ ಅಹಿತಕರ...

ಕಲಬುರಗಿ| ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ

ಕಲಬುರಗಿ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್...

ಕಲಬುರಗಿ| ಕಲಾ ವಿಭಾಗದಲ್ಲಿ ಸೃಷ್ಟಿ ಮಲ್ಲಿನಾಥ ರಾಜ್ಯಕ್ಕೆ ಪ್ರಥಮ

ಕಲಬುರಗಿ: ಪ್ರಸಕ್ತ ದ್ವಿತೀಯ ಪಿ.ಯು.ಸಿ-1 ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಲಬುರಗಿಯ...