ಕಲಬುರಗಿ| ಆದಿಬಣಜಿಗರು ಜಾತಿ ಲಿಂಗಾಯತ ಎಂದು ನಮೂದಿಸಿ: ಜಗನ್ನಾಥ ಶೇಗಜಿ 

Date:

Share post:

ಕಲಬುರಗಿ: ಹಿಂದುಳಿದ ವರ್ಗಗಳ ಆಯೋಗ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಆದಿ ಬಣಜಿಗರು, ಧರ್ಮದ ಕಾಲಂ ನಲ್ಲಿ ಹಿಂದೂ, ಜಾತಿ ಲಿಂಗಾಯತ ಹಾಗು ಉಪಜಾತಿ ಕಾಲಂನಲ್ಲಿ ಆದಿ ಬಣಜಿಗ ಎಂದು ನಮೂದಿಸಬೇಕು ಎಂದು ಸಮುದಾಯದ ಮಾಜಿ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದರು.

ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ಬಣಜಿಗ ಸಮಾಜದ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ರಾಜ್ಯ ಸರಕಾರ ಕೈಗೊಳ್ಳಲಿರುವ ಸಮೀಕ್ಷೆಯಲ್ಲಿ ಏನನ್ನು ನಮೂದಿಸಬೇಕು ಎನ್ನುವುದು ಗೊಂದಲ ನಿರ್ಮಾಣವಾಗಿದೆ. ಆದರಿಂದ ರಾಜ್ಯ ಮಟ್ಟದ ಸಮಾಜದ ಸಭೆ ನಡೆಸಿ, ಅಂತಮ ತೀರ್ಮಾನ ತೆಗೆದುಕೊಂಡಿದ್ದು, ಧರ್ಮ ಹಿಂದೂ, ಜಾತಿ ಲಿಂಗಾಯತ, ಉಪಜಾತಿ ಆದಿ ಬಣಜಿಗ ಎಂದೇ ಬರೆಸಲು ತಿಳಿಸಲಾಗಿದೆ ಎಂದರು.

ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಮೀಕ್ಷಕರಿಗೆ ಸಹಕರಿಸಬೇಕು. ಸಮಾಜದ ಜನಸಂಖ್ಯೆ ಹೆಚ್ಚಳವಾದರೆ ಹೆಚ್ಚಿನ ಸೌಲಭ್ಯ ದೊರೆಯಲಿವೆ. ಹೀಗಾಗಿ ಕಡ್ಡಾಯವಾಗಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವೀರಣ್ಣ ಮಂಗಾಣೆ, ವಿಶ್ವನಾಥ್ ಗೌನಹಳ್ಳಿ, ಗುಂಡರಾವ್ ಪದ್ಮಾಜಿ, ಗಿರಿರಾಜ್ ಯಳಿಮೇಲಿ, ಗುಪ್ತಲಿಂಗ, ರಾಜೇಂದ್ರ ಕರೆಕಲ್ ಮತ್ತಿತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಏ.15 ರಿಂದ 17ರ ವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ 

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಏಪ್ರೀಲ್ 15 ರಿಂದ 17ರ ವರೆಗೆ...

ಕಲಬುರಗಿ| ಅಂಬೇಡ್ಕರ್ ಜಯಂತಿ: ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ: ಡಿಸಿ ಆದೇಶ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಯಾವುದೇ ಅಹಿತಕರ...

ಕಲಬುರಗಿ| ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ

ಕಲಬುರಗಿ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್...

ಕಲಬುರಗಿ| ಕಲಾ ವಿಭಾಗದಲ್ಲಿ ಸೃಷ್ಟಿ ಮಲ್ಲಿನಾಥ ರಾಜ್ಯಕ್ಕೆ ಪ್ರಥಮ

ಕಲಬುರಗಿ: ಪ್ರಸಕ್ತ ದ್ವಿತೀಯ ಪಿ.ಯು.ಸಿ-1 ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಲಬುರಗಿಯ...