ಕಲಬುರಗಿ| ಗೋದುತಾಯಿ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವರ್ಚುವಲ್ ಎಫ್‌ಡಿಪಿ

Date:

Share post:

ಕಲಬುರಗಿ : ಸಂಶೋಧನಾ ಲೇಖನ ಎಂದರೆ ಒಂದು ನಿರ್ದಿಷ್ಟ ಅಧ್ಯಯನದ ಹೊಸ ಆವಿಷ್ಕಾರಗಳು, ಫಲಿತಾಂಶಗಳು ಮತ್ತು ಮಹತ್ವವನ್ನು ವಿವರಿಸುವ ವೈಜ್ಞಾನಿಕ ವರದಿ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಡಾ.ಎಂ.ಪ್ರೇಮಕುಮಾರ ಹೇಳಿದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ಐಕ್ಯೂಎಸಿ ಮತ್ತು ಐಓಟಿ ಅಕಾಡೆಮಿ ಕೊಯಿಮತ್ತೂರ ಇವರ ಸಂಯುಕ್ತಾಶ್ರಯದಲ್ಲಿ ‘ಸಂಶೋಧನ ಪ್ರಬಂಧ ಬರೆಯುವ ಒಂದು ವ್ಯವಸ್ಥಿತ ವಿಧಾನ’ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವರ್ಚುವಲ್ ಎಫ್‌ಡಿಪಿ (ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ)ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಸಂಶೋಧನಾ ಲೇಖನವು ಸಂಶೋಧನಾ ವಿಧಾನಗಳು, ಫಲಿತಾಂಶಗಳು, ಚರ್ಚೆ ಮತ್ತು ತೀರ್ಮಾನದಂತಹ ಪ್ರಮಾಣಿತ ವಿಭಾಗಗಳನ್ನು ಒಳಗೊಂಡಿರುತ್ತದೆ, ಓದುಗರಿಗೆ ಅಧ್ಯಯನದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಲೇಖನಗಳು ಜರ್ನಲ್‌ಗಳಲ್ಲಿ ಪ್ರಕಟಿತವಾಗಿದ್ದು, ಹೊಸ ಜ್ಞಾನವನ್ನು ನೀಡುವ ಪ್ರಾಥಮಿಕ ಸಾಹಿತ್ಯದ ಒಂದು ರೂಪವಾಗಿದೆ. ಸಂಶೋಧನಾ ಅರಿವು, ಸಂಶೋಧನಗಾಗಿ ಎಐ ಪರಿಕರಗಳು, ಮಾರ್ಗಸೂಚಿಗಳು, ಅದರ ಪ್ರಾಮುಖ್ಯತೆ ತಿಳಿಸಿದರು.

ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ, ಡಾ.ಸೀಮಾ ಪಾಟೀಲ ಮತ್ತು ಎಲ್ಲ ಬೋಧಕರು ಭಾಗವಹಿಸಿದ್ದರು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ.ಸಿದ್ಧಲಿಂಗರೆಡ್ಡಿ ವಂದಿಸಿದರು.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...