ಕಲಬುರಗಿ| ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸರ್ಕಾರದ ಘೋಷಣೆಗೆ ಶಶೀಲ್ ನಮೋಶಿ ಹರ್ಷ

Date:

Share post:

ಕಲಬುರಗಿ: ಸರ್ಕಾರ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿ ಆದೇಶ ಮಾಡಿರುವದಕ್ಕೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹರ್ಷ ವ್ಯಕ್ತಪಡಿಸಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಬಹುದಿನದ ಬೇಡಿಕೆ ಆಗಿದ್ದ ಪ್ರತ್ಯೇಕ ಸಚಿವಾಲಯ ಸಲುವಾಗಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬೇಡಿಕೆಯಾಗಿತ್ತು ನಾನು ಸಂಘಟನೆಯ ಜೋತೆ ಒಡಗೂಡಿ ಹಾಗೂ ಸದನದಲ್ಲಿ ನಿರಂತರ ಹೋರಾಟ ಮಾಡಿದ್ದೆ ಈಗ ಸರಕಾರ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದರಿಂದಾಗಿ 371 ಜೇ ಇನ್ನುಳಿದ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಅನೂಕೂಲವಾಗಲಿದೆ ಎಂದು ಹೇಳಿದರು.

 

ಇತಿಹಾಸದ ಆ ಸುವರ್ಣ ಕ್ಷಣಗಳ ಮೆಲಕು ಹಾಕಿದರು

ಅಂದು ಮಧ್ಯ ರಾತ್ರಿ 15 ನೆಯ ಆಗಸ್ಟ 1947 ಬ್ರಿಟಿಷರ ಕಪಿಮುಷ್ಠಿ ಬಿಚ್ಚಿತ್ತು. ತಾಯಿ ಭಾರತಿ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಳು ಭಾರತೀಯರೆಲ್ಲರಿಗೆ ಸುಮಾರು 200 ವರ್ಷಗಳ ಲೆಕ್ಕವಿಲ್ಲದಷ್ಟು ಬಲಿದಾನಿಗಳ ದೇಶಭಕ್ತರ ಕನಸು ನನಸಾಗಿ ವಿಜೃಂಭಣೆಯಲ್ಲಿ ನಲಿದಾಡುವ ಸಂದರ್ಭ. ಬ್ರಿಟಿಷರ ಕುಟಿಲ ನೀತಿ 500ರಕ್ಕೂ ಹೆಚ್ಚು ರಾಜ್ಯಗಳು ಭಾರತ ಇಲ್ಲವೇ ಪಾಕಿಸ್ತಾನ ಸೇರಬಹುದು ಅಥವಾ ತಮ್ಮದೇ ಸ್ವತಂತ್ರ ದೇಶ ರಾಜ್ಯ ಮಾಡಿಕೊಂಡು ಹೋಗಬಹುದು ಎಂಬ ಉದ್ಧಟತನದ ಹೇಳಿಕೆ ನೀಡಿ ಅಡ್ಡ ಗೋಡೆಯ ಮೇಲೆ ದೀಪವನ್ನಿಟ್ಟು ಹೊರಟರು, ಆಗಲೇ ಕೆಲವು ರಾಜರು ಭಾರತ ಒಕ್ಕೂಟವನ್ನು ಸೇರಲು ನೀರಾಕರಿಸಿದರೂ ಮುಂದೆ ಭಾರತ ಸರ್ಕಾರ ಮನವೋಲಿಸಲು ತಾಯಿ ಭಾರತೀಯ ಮಡಲಿಗೆ ಸೇರಿದರು.

ಆದರೆ ಲಾತೂರಿನ ಖಾಸಿಂ ರಜವಿ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (MIM) ಸಂಸ್ಥೆಯ ಆಗಿನ ಅಧ್ಯಕ್ಷ, ವಕೀಲನಾಗಿದ್ದ ಇವನು ರಜಾಕಾರರ ಮಿಲಿಟಿಯ ಖಾಸಗಿ ಮಿಲಿಟರಿ ಸ್ಥಾಪಕನಾಗಿದ್ದ, ಇವನು ಹೈದ್ರಾಬಾದ್ ಸಂಸ್ಥಾನದ ದೊರೆ ನಿಜಾಮ ಆಸಿಫ್ ಅಲಿ ಯವರ ತಲೆ ಕೆಡಿಸಿ ಪಾಕಿಸ್ತಾನಕ್ಕೆ ಸೇರುವುದೋ ಇಲ್ಲವಾದಲ್ಲಿ ಭಾರತ ಒಕ್ಕೂಟಕ್ಕೆ ಸೇರದೇ ಸ್ವತಂತ್ರವಾಗಿ ರಾಜ್ಯವಾಗಿ ರಾಜ್ಯಭಾರವ ನಡೆಸುವುದು ಎಂಬ ನನಸಾಗದ ಕನಸನ್ನು ತೋರಿಸಿದ್ದ.

ರಜಾಕಾರರ ಹಾವಳಿಯ ಕುಖ್ಯಾತಿ ಗೋರ್ಟಾದಲ್ಲಿನ ಹತ್ಯಾಕಾಂಡ ಜಲಿಯನ್ ವಾಲಾ ಬಾಗನಷ್ಟೇ ಅಮಾನವೀಯವಾಗಿತ್ತು ಎಂಬುದು ಈಗ ಇತಿಹಾಸ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್, ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್, ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪೂರೆ, ಡಾ. ಅನಿಲಕುಮಾರ ಪಟ್ಟಣ, ಡಾ.ಕಿರಣ್ ದೇಶಮುಖ್, ಡಾ ಗುರುಲಿಂಗಪ್ಪ ಪಾಟೀಲ್, ಆಡಳಿತಾಧಿಕಾರಿ ಪ್ರೊ.ಸಿ.ಸಿ. ಪಾಟೀಲ್ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...