ಕಲಬುರಗಿ| ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಕೆಸರಿನಲ್ಲಿ ಭತ್ತ ನೆಟ್ಟು ವಿಚಿತ್ರ ಪ್ರತಿಭಟನೆ

Date:

Share post:

ಕಲಬುರಗಿ: ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ, ಯುವಕರು ಹಾಗೂ ಗ್ರಾಮಸ್ಥರು ಸೇರಿಕೊಂಡು ನಡುರಸ್ತೆಯಲ್ಲೇ ಭತ್ತದ ನಾಟಿಯನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲ್ಲೂಕಿನ ವಡಗೇರಿ ಗ್ರಾಮದ ಲ್ಲಿ ನಡೆದಿದೆ.

ಯಡ್ರಾಮಿ ತಾಲೂಕಿನಲ್ಲಿ ಹಳ್ಳಿಯಿಂದ ಹಳ್ಳಿಗೆ ಸಂಪರ್ಕಿಸುವ ಅನೇಕ ರಸ್ತೆಗಳು ಹದಗೆಟ್ಟಿವೆ, ಮಳೆ ಬಂದರೆ ಸಾಕು ರಸ್ತೆಗಳೆಲ್ಲ ಕೆಸರುಗದ್ದೆಯಾಗುತ್ತವೆ. ಹಲವು ಬಾರಿ ರಸ್ತೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರೂ ಈ ವರೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಕೆಸರುಗದ್ದೆಯನ್ನ ನಾವು ರಸ್ತೆ ಎಂದು ತಿರುಗಾಡಬೇಕೆ. ಇಂತಹ ಅಭಿವೃದ್ಧಿಯ ಹರಿಕಾರ ಡಾ.ಅಜಯ್ ಸಿಂಗ್ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ, ಪ್ಲೇ ಕಾರ್ಡ್ ಬಳಸಿ ತಮ್ಮ ಮತಕ್ಷೇತ್ರದ ಶಾಸಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಶರಣು ಬಾನಕಾರ್, ಭೀಮರಾಯ ಅರಿಕೇರಿ, ನಿಂಗಪ್ಪ ಸನ್ನತಿ, ಅನಿಲ್ ಮನೇಲಿ, ಕುಮಾರ್ ತಳವಾರ, ಶಿವಣ್ಣಗೌಡ ಬಿರಾದಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...

ಕಲಬುರಗಿ| ಐರಾವತ – ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ; ಇಬ್ಬರು ಚಾಲಕರ ಮೃತ್ಯು

ಕಲಬುರಗಿ: ಐರಾವತ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿ...

ಕಲಬುರಗಿ–ಮೈಸೂರು, ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಚಾಲನೆ

ಮೂರು ತಿಂಗಳಲ್ಲಿ‌ 120 ಹೊಸ ಬಸ್ ಸೇರ್ಪಡೆ: ಅರುಣಕುಮಾರ ಪಾಟೀಲ ಕಲಬುರಗಿ: ಕಲ್ಯಾಣ...