ಕಲಬುರಗಿ| ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಸಾಮರಸ್ಯ: ಹಾರಕೂಡ ಶ್ರೀ 

Date:

Share post:

ಕಲಬುರಗಿ: ಆಳಂದ ತಾಲೂಕಿನ ಕೋತನ ಹಿಪ್ಪರಗಾ ಗ್ರಾಮದಲ್ಲಿ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಮಹದೇವಲಿಂಗ ದೇವಸ್ಥಾನದ 28ನೇ ವರ್ಷದ ಭಜನಾ ಮಹಾಮಂಗಳ ಕಾರ್ಯಕ್ರಮ ಸಂಭ್ರಮದ ಮಧ್ಯ ದುರಿಯಾಗಿ ಜರುಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, “ಈ ಭಜನಾ ಮಹಾಮಂಗಳ ಕಾರ್ಯಕ್ರಮವು ಗ್ರಾಮದ ಜನರ ಸಾಮರಸ್ಯ ಮತ್ತು ಧಾರ್ಮಿಕ ಭಾವನೆಯನ್ನು ಬೆಳೆಸುವ ಉದ್ದೇಶದಿಂದ ೨೮ ವರ್ಷಗಳಿಂದ ನಡೆಯುತ್ತಿದೆ. ಶ್ರೀ ಮಹದೇವಲಿಂಗದೇವರ ಆಶೀರ್ವಾದದಿಂದ ಈ ಗ್ರಾಮವು ಶಾಂತಿ ಮತ್ತು ಸೌಭಾಗ್ಯವನ್ನು ಪಡೆದುಕೊಂಡಿದೆ. ಆದರೆ ಇಂದಿನ ಯುವಕರು ದುಷ್ಟ ಚಟಕೆಗಳ ಬಲಿಯಾಗುತ್ತಿದ್ದಾರೆ. ಸಾರಾಯಿ ಡ್ರಗ್ಸ್, ಅಪರಾಧ ಮತ್ತು ಕೆಟ್ಟ ಸಹವಾಸಗಳಿಂದ ದೂರ ಉಳಿಯುವುದು ಮುಖ್ಯ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಜನಾಂಗವು ಸರಿಯಾದ ಮಾರ್ಗದರ್ಶನ ಪಡೆಯಬೇಕು. ಈ ಕಾರ್ಯಕ್ರಮವು ಎಲ್ಲರಿಗೂ ಏಕತೆ ಮತ್ತು ಸೌಭಾಗ್ಯ ತರಲಿ ಎಂದು ಆಶಿಸುತ್ತೇನೆ” ಎಂದು ಹೇಳಿದರು.

 

ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, “ಗ್ರಾಮದಲ್ಲಿ ಸಾಮರಸ್ಯವೇ ಇದ್ದರೆ 28 ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಶ್ರೀಗಳ ಆಶೀರ್ವಾದದಿಂದ ಇದು ಮುಂದುವರಿದಿದೆ. ಆದರೆ ಇಂದಿನ ಯುವಕರು ದುಷ್ಟ ಚಟಕೆಗಳಿಗೆ ಬಲಿಯಾಗುತ್ತಿದ್ದಾರೆ. ಅವರು ಸರಿಯಾದ ಮಾರ್ಗದಲ್ಲಿ ನಡೆಯಬೇಕು” ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಅಸುಭಾಷ್ ಮುರುಡ್ ಮತ್ತು ಇತರರು ಸಾಮರಸ್ಯ ಮತ್ತು ಧಾರ್ಮಿಕತೆಯ ಮಹತ್ವದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಅಸುಭಾಷ್ ಮುರುಡ್, ವೇದ ಮೂರ್ತಿ ಬಸಯ್ಯ ಸ್ವಾಮಿ, ಶಿವಪುಜಪ್ಪ ಇಸ್ರಾಜಿ, ನ್ಯಾಯವಾದಿ ದಿಲೀಪ್ ಕ್ಷೀರ್ ಸಾಗರ, ರಾಜೇಂದ್ರ ಸಾಲೇಗಾoವ್, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಸೇರಿದಂತೆ ಅನೇಕ ಮುಖ್ಯ ಅತಿಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಭಜನೆ ತಂಡಗಳು ಭಾಗವಹಿಸಿ ಭಜನೆ ಕೈಗೊಂಡ ಬೆಳಗಿನ ಜಾವ ಮಹದೇವ ಲಿಂಗಕ್ಕೆ ಪೂಜೆಗಳು ಮತ್ತು ಆಶೀರ್ವಚನಗಳು ನಡೆದು, ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...

ಕಲಬುರಗಿ| ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ಸೂಚನೆ

ಕಲಬುರಗಿ: ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು...