ಕಲಬುರಗಿ: ನಗರದ ದುಬೈ ಕಾಲೋನಿ ಹತ್ತಿರ ನೂತನವಾಗಿ ಆರಂಭಗೊಂಡ 100 ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಿಷನ್ ನನ್ನು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗರ್ಭಿಣಿ ತಾಯಿಯoದಿರಿಗೆ ದೂರಾದ ಹಾದಿಗೆ ಹೋಗದೆ ಸುಗಮವಾಗಿ ತಾಯಿ ಹೆರಿಗೆ ಆಗಲು ಅವರು ಸಮಸ್ಯೆ – ತೊಂದರೆಗಳಿಗೆ ಈಡಾಗದೆ ಸುಗಮವಾಗಿ ಹೆರಿಗೆ ಆಗಲು ಸಾರ್ವಜನಿಕರು ಹಾಗೆ ಗರ್ಭಿಣಿ ತಾಯಿoದಿರು ಸ್ಕ್ಯಾನಿಂಗ್ ತಪಾಸಣೆ ಅಗತ್ಯವಾಗಿ ಮಾಡಿಕೊಳ್ಳಬೇಕೆಂದು ಹೇಳಿದರು.
ಅಡಳಿತ ವೈದ್ಯಾಧಿಕಾರಿ ಡಾ. ಎಸ್. ಎo. ಸಂಧ್ಯಾರಾಣಿ, ವಿ-ಕಿರಣ ತಜ್ಞರಾದ ಡಾ.ಶರಣೇಶ್ವರಿ, ಸ್ತ್ರೀ ರೋಗ ತಜ್ಞರಾದ ಡಾ.ತಲಾತ್ ಆಯಿಷಾ, ಮಕ್ಕಳ ತಜ್ಞರಾದ ಡಾ. ಪ್ರಶಾಂತ್, ಡಾ.ದೀಪಾ, ಶುಶ್ರೂಷಾಧಿಕಾರಿಗಳಾದ ಮೋಹಿನಿ, ಪ್ರೇಮಾ ಸೇರಿದಂತೆ ಸಿಬ್ಬಂದಿಗಳು ಇದ್ದರು.