ಕಲಬುರಗಿ: ಮುಸ್ಲಿಂ ಧರ್ಮದ ಮಹಿಳೆಯರ ಬಗ್ಗೆ ಅವಹೇಳನಕಾರಿ ಮತ್ತು ಕೋಮು ಗಲಭೆ ಸೃಷ್ಟಿಸುವಂತಹ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಚಿಂಚೋಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕು ಮುಸ್ಲಿಂ ಅಭೀವೃದ್ಧಿ ಸಮಿತಿಯಿಂದ ಬೃಹತ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಪ್ರತಿಯೊಂದು ಧರ್ಮ, ಜಾತಿ, ಮತ, ಪಂಥಗಳನ್ನು ಅವರವರ ಧರ್ಮ ಜಾತಿಗಳಿಗಣುವಾಗಿ ಸಂವಿಧಾನದ ಅಡಿಯಲ್ಲಿ ಬದುಕಿ ಬಾಳಲು ಅವಕಾಶ ಇದೆ, ಯಾವುದೇ ಧರ್ಮ ಜಾತಿಗೆ ಕಿಳು ಮಾತನಾಡಲು ಅವಕಾಶವಿಲ್ಲ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಹೇಳಿಕೆ ನೀಡುವ ಯಾವುದೇ ವ್ಯಕ್ತಿ ಇರಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೇಶ ಮತ್ತು ರಾಜ್ಯದ ಗ್ರಾಮೀಣ ಭಾಗದ ಜನರು ಜಾತಿ ಭೇದವನ್ನು ಮರೆತು ಅಣ್ಣ ತಮ್ಮಂದಿರಯಂತೆ, ಅಕ್ಕ ತಂಗಿಯರಂತೆ ಹಿಂದು-ಮುಸ್ಲಿಂ ಧರ್ಮದ ಜನಾಂಗ ಅವರದೇ ಧರ್ಮದ ಆಚರಣೆಗಳನ್ನು ಮೈಗೂಡಿಸಿಕೊಂಡು ಸೌಹಾರ್ದತೆಯಿಂದ ಜೀವನ ಕಟ್ಟಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸದ ಶಿಕ್ಷಣ ಕೊಡಿಸುವುದರ ಜೊತೆಗೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಕೆಲವರು ಹಿಂದು-ಮುಸ್ಲಿಂ ಧರ್ಮಗಳ ಸೌಹಾರ್ದತೆ ಮತ್ತು ಏಕತೆಯಿಂದ ಜೀವನ ನಡೆಸುವುದನ್ನು ಸಹಿಸದೇ ಮತ್ತು ತಮ್ಮ ರಾಜಕೀಯ ಬೇಳೆ ಬೆಳೆಸಿಕೊಳ್ಳಲು ವಿನಃ ಕಾರಣ ಶಾಂತಿ ಕದಡುವಂತಹ ಹೇಳಿಕೆಗಳು ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಿಜಯಪುರ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಮುಸ್ಲಿಂ ಧರ್ಮದ ಯುವತಿಯರನ್ನು ಹಿಂದು ಧರ್ಮದ ಯುವಕರು ಮದುವೆ ಮಾಡಿಕೊಂಡು ಬಂದರೆ ಅವರಿಗೆ ನನ್ನ ಕಡೆಯಿಂದ 5 ಲಕ್ಷ (ಐದು ಲಕ್ಷ ರೂಪಾಯಿ) ಗಳು ಉಚಿತವಾಗಿ ಜೋಡಿಗೆ ನೀಡುತ್ತೇನೆಂದು ಹೇಳಿರುವ ಹೇಳಿಕೆಯ ತುಣಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕೊಮು ಗಲಭೆ ಸೃಷ್ಟಿಸುವಂತಹ ಹೇಳಿಕೆಗಳು ಪದೇ ಪದೇ ಮರುಕಳುಹಿಸುತ್ತಿದ್ದು, ಭಾರತ ಸಂವಿಧಾನ ಪರಿಪಾಲನೆ ಮತ್ತು ಶಾಂತಿ ಕಾಪಾಡಲು ಅಂಥವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆ ನಡೆಸಿದ ಬಳಿಕ ಮುಖಂಡರು, ಅಲ್ಲಿನ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಬ್ದುಲ ಬಾಸೀದ್, ಪುರಸಭೆ ಅಧ್ಯಕ್ಷ ಆನಂದಕಮಾರ ಟೈಗರ್, ಶರಣು ಪಾಟೀಲ ಮೋತಕಪಳ್ಳಿ, ಮತೀನ ಸೌಧಗರ್, ಶಬ್ಬೀರ ಅಹ್ಮದ, ಎಮ್ ಕೆ. ಲಕ್ಷ್ಮಣ, ಅನ್ವರ್ ಖತೀಬ್, ಅಲ್ಲಾವುದ್ದಿನ ಅನ್ಸಾರಿ, ಆರ್.ಗಣಪತರಾವ, ನಾಗೇಶ ಗುಣಾಜಿ , ಹುಸೇನ ಹಶ್ಮಿ , ಸಂತೋಷ ಗುತ್ತೇದಾರ್ ಸೇರಿದಂತೆ ಮತ್ತಿತರರು ಇದ್ದರು.