ಕಲಬುರಗಿ| ಬಿಜೆಪಿ ಪಕ್ಷಕ್ಕೆ ಸೇರಿದ ಕಾಂಗ್ರೆಸ್ ಹಿರಿಯ ಮುಖಂಡ ಬಾಬುಗೌಡ ಪಾಟೀಲ 

Date:

Share post:

ಕಲಬುರಗಿ: ಆಳಂದ ತಾಲೂಕಿನ ಭೂಸನೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಬಾಬುಗೌಡ ಪಾಟೀಲ ಅವರು ತಮ್ಮ ನೂರಾರು ಬೆಂಬಲಿಗರೊoದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಇತ್ತೀಚಿಗೆ ಭೂಸನೂರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ತಾಲೂಕಿನಲ್ಲಿ ಭೃಷ್ಟಾಚಾರ ಮನೆ ಮಾತಾಗಿದೆ ಇದರಿಂದ ಬೇಸತ್ತು ತಮ್ಮ ಕಾರ್ಯಕರ್ತರೊಂದಿಗೆ ಬೇಷರತ್ತಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಬಾಬುಗೌಡ ಪಾಟೀಲ ಅವರ ಆಗಮನದಿಂದ ನಿಂಬರ್ಗಾ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಗೆ ಆನೆಬಲ ಬಂದoತಾಗಿದೆ. ಬಾಬುಗೌಡ ಪಾಟೀಲರು ಈ ಭಾಗದ ಹಿರಿಯ ಮುಖಂಡರಾಗಿದ್ದು ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ವ್ಯವಸ್ಥಿತವಾಗಿ ಸಾಗಲಿ ಅಲ್ಲದೇ ಹಿರಿಯ, ಕಿರಿಯ, ಮೂಲ, ಹಳೆಯ ಕಾರ್ಯಕರ್ತರನ್ನು ಸೇರಿಸಿಕೊಂಡು ಪಕ್ಷ ಸಂಘಟಿಸಲಿ ಎಂದು ಸಲಹೆ ನೀಡಿದರು.

ಬಾಬುಗೌಡ ಪಾಟೀಲ ನೇತೃತ್ವದಲ್ಲಿ ಶಾಂತಯ್ಯ ಸ್ಥಾವರಮಠ, ದಸ್ತಗೀರಸಾಬ್ ಗೌಂಡಿ, ಮಹಿಬೂಬ್‌ಸಾಬ್ ನದಾಫ್, ರಾಮ ಕೊಬಾಳೆ, ದತ್ತಣ್ಣಾ ಚೌಲ, ರಾಚಯ್ಯ ಸ್ವಾಮಿ, ಅಶೋಕ ಗುಂಡೆ, ದತ್ತು ಸಾಳುಂಕೆ, ಕಲ್ಯಾಣಿ ನಿಂಬಾಳ, ಸಿದ್ದಾರಾಮ ನೆಲ್ಲೂರ, ಗುಂಡಪ್ಪ ಪ್ಯಾಟಿ, ನೇಮಣ್ಣಾ ಬಳಗಾರ, ಶಿವಶರಣ ಕುಂಬಾರ, ಪಿಂಟು ಕ್ಷತ್ರಿ, ಅಭಿ ಕ್ಷೇತ್ರಿ, ರಾಮ ಕಲಶೆಟ್ಟಿ, ಫತ್ತುಸಾಬ ಬೆಣ್ಣೆಶಿರೂರ, ಗುರುಶಾಂತ ಜಮಾದಾರ, ಬಸವರಾಜ ಸೇರಿದಂತೆ ನೂರಾರು ಜನ ಪಕ್ಷ ಸೇರ್ಪಡೆಯಾದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಶಾಸಕ ಬಿ ಆರ್ ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಮಾಡುತ್ತಿರುವ ಭೃಷ್ಟಾಚಾರದ ವಿರುದ್ಧ ತಾವು ದೂರು ನೀಡುತ್ತಿರುವುದರಿಂದ ಅವರಿಗೆ ಭಯ ಶುರುವಾಗಿ ಹೋದಲ್ಲಿ ಬಂದಲೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಳಂದ ತಾಲೂಕಿನಲ್ಲಿ ರಾಜಕೀಯ ಕ್ರಾಂತಿ ನಡೆಯಲಿದ್ದು 2028ಕ್ಕೆ ಆಳಂದನಲ್ಲಿ ಬಿಜೆಪಿ ಶಾಸಕರಾಗುವುದು ಶತಸಿದ್ಧ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರಾದ ಅಣ್ಣಾರಾವ ಪಾಟೀಲ ಕವಲಗಾ, ಚಂದ್ರಕಾoತ ಭೂಸನೂರ, ಶಿವಪ್ಪ ವಾರಿಕ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಸಂತೋಷ ಗುತ್ತೇದಾರ, ಆನಂದ ಪಾಟೀಲ ಕೋರಳ್ಳಿ, ಶರಣಗೌಡ ಪಾಟೀಲ ದೇವಂತಗಿ, ನಾಗರಾಜ ಶೇಗಜಿ, ಮಹೇಶ ಗೌಳಿ, ಸಂತೋಷ ಹಾದಿಮನಿ, ಶ್ರೀಮಂತ ನಾಮಣೆ, ಗುಂಡಪ್ಪ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...