ಕಲಬುರಗಿ| ಕಾಳಗಿ ಪಟ್ಟಣ ಪಂಚಾಯತಿಗೆ ಸಾರ್ವತ್ರಿಕ ಚುನಾವಣೆ; ಆಗಸ್ಟ್ 17ಕ್ಕೆ ಮತದಾನ

Date:

Share post:

ಕಲಬುರಗಿ: ಜಿಲ್ಲೆಯ ಕಾಳಗಿ ಪಟ್ಟಣ ಪಂಚಾಯತಿಯ ಒಟ್ಟು 11 ವಾರ್ಡ್ ಗಳ ಕೌನ್ಸಿಲರ್‌ ಭರ್ತಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.

ಚುನಾವಣಾ ಅಧಿಸೂಚನೆಯಂತೆ ನಾಮಪತ್ರ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಉಮೇದುವಾರಿಕೆ ಪಡೆಯಲು ಇಚ್ಚಿಸುವರು ಆಗಸ್ಟ್ 8 ರೊಳಗೆ ಪಡೆಯಬಹುದು. ಅವಶ್ಯಬಿದ್ದರೆ ಆಗಸ್ಟ್ 17 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆ ವರೆಗೆ ಮತದಾನ‌ ನಡೆಯಲಿದೆ. ಅಗತ್ಯವಿದ್ದಲ್ಲಿ ಆಗಸ್ಟ್ 18ಕ್ಕೆ ಮರು ಮತದಾನ ನಡೆಸಲಾಗುತ್ತದೆ. ಅಗಸ್ಟ್ 20 ರಂದು ತಾಲೂಕಾ ಕೇಂದ್ರದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಲಾಗಿದೆ.

ವಾರ್ಡ್ ವಾರು ಮೀಸಲಾತಿ ವಿವರ:

01-ಇಳಗೇರ್ ಗಲ್ಲಿ, 02-ಮಲ್ಲಿಕಾರ್ಜುನ ಗುಡಿ ಏರಿಯಾ, 05-ಬಡಿಗೇರ ಕಟ್ಟಿ ಏರಿಯಾ ವಾರ್ಡ್ ಸಾಮಾನ್ಯ ಕ್ಷೇತ್ರವಾಗಿದೆ. 03-ಬಸವೇಶ್ವರ ಗುಡಿ ಏರಿಯಾ, 06-ಬೇಗಾರ ಗಲ್ಲಿ ಹಾಗೂ 08-ಪೊಲೀಸ್ ಸ್ಟೇಷನ್ ವಾರ್ಡ್ (ಸಾಮಾನ್ಯ ಮಹಿಳೆ) ಗೆ ಮೀಸಲಿರಿಸಿದೆ. 07-ರಾಮನಗರ ಮತ್ತು 10-ನಾಮು ನಾಯ್ಕ ಮತ್ತು ಕಿಂಡಿ ತಾಂಡಾ ವಾರ್ಡ್ ಸ್ಥಾನವು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿದೆ. 09-ಲಚ್ಚು ನಾಯಕ್ ಮತ್ತು ಸುಬ್ಬು ನಾಯಕ್ ತಾಂಡಾ ಮತ್ತು 11-ಕರಿಕಲ್ಲ ಮತ್ತು ದೇವಿಕಲ್ಲ ತಾಂಡಾ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ)ಗೆ ಮೀಸಲಿರಿಸಿದೆ. 04-ಕುರುಬರ ಗಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿಸಿದೆ.

Share post:

spot_imgspot_img

Popular

More like this
Related

ಕಲಬುರಗಿ: ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲು ರೂ 208.67 ಕೋಟಿ. ಬಿಡುಗಡೆ- ಸಚಿವ ಪ್ರಿಯಾಂಕ್ ಖರ್ಗೆ 

ತುರ್ತು ಕಾಮಗಾರಿಗಳಿಗೆ ಪುನಃ 72 ಕೋಟಿ ರೂ.ಬಿಡುಗಡೆ: ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಜ್ಯದ...

ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...