ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು ಹೈದರಾಬಾದ್ ಮತ್ತು ಸೋಲಾಪುರ ರೈಲ್ವೆ ವಿಭಾಗದಿಂದ ಹೈದ್ರಾಬಾದ್ ಹಾಗೂ ವಾಡಿ ನಡುವೆ 4 ಕಾಯ್ದಿರಿಸದ ವಿಶೇಷ ರೈಲುಗಳು ನಾಲ್ಕು ಟ್ರಿಪ್‍ಗಳಲ್ಲಿ ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೈದರಾಬಾದ್-ವಾಡಿ (ರೈಲು ಸಂಖ್ಯೆ 07175) ವಿಶೇಷ ರೈಲುಗಳು ಜುಲೈ 9 ರಂದು ಬೆಳಿಗ್ಗೆ 9 ಕ್ಕೆ ಹೈದರಾಬಾದ್‍ದಿಂದ ಹೊರಟು ಅದೇ ದಿನ ಮಧ್ಯಾಹ್ನ 2.30 ಕ್ಕೆ ವಾಡಿಗೆ ತಲುಪಿಲಿದೆ. ವಿಶೇಷ ರೈಲು (ರೈಲು ಸಂಖ್ಯೆ 07176) ಜುಲೈ 9 ರಂದು ಸಂಜೆ 4 ಕ್ಕೆ ವಾಡಿಯಿಂದ ಹೊರಟು ಅದೇ ದಿನ ರಾತ್ರಿ 21:00 ಕ್ಕೆ ಹೈದರಾಬಾದಿಗೆ ಆಗಮಿಸಲಿದೆ.
ವಿಶೇಷ ರೈಲು (ರೈಲು ಸಂಖ್ಯೆ 07177 ರೈಲು) ಜುಲೈ 11 ರಂದು 5:00 ಗಂಟೆಗೆ ಹೈದರಾಬಾದ್‍ದಿಂದ ಹೊರಟು ಅದೇ ದಿನ 10:00 ಗಂಟೆಗೆ ವಾಡಿಯನ್ನು ತಲುಪಲಿದೆ. ರೈಲು ಸಂಖ್ಯೆ. 07178 ಕಾಯ್ದಿರಿಸದ ವಿಶೇಷ ರೈಲು ಜುಲೈ 11 ರಂದು 11:35 ಗಂಟೆಗೆ ವಾಡಿಯಿಂದ ಹೊರಟು ಅದೇ ದಿನ 16:35 ಗಂಟೆಗೆ ಹೈದರಾಬಾದಿಗೆ ಆಗಮಿಸಲಿದೆ.
ಈ ರೈಲು ಬೇಗಂಪೇಟೆ, ಸನತ್ ನಗರ, ಹಫೀಜಪೇಟ್, ಲಿಂಗಂಪಲ್ಲಿ, ನಾಗುಲಪಲ್ಲಿ, ಶಂಕರಪಲ್ಲಿ, ಗುಲ್ಲಗುಡ, ವಿಕಾರಾಬಾದ್, ಗೊಡಮಗೂರ, ಧಾರೂರು, ರುಕ್ಮಾಪುರ, ತಾಂಡೂರು, ಮಂತಟ್ಟಿ, ನಾವಂದಗಿ, ಕುರಕುಂಟಾ, ಸೇಡಂ, ಮಳಖೇಡ ರಸ್ತೆ ಮತ್ತು ಚಿತ್ತಾಪುರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಕಾಯ್ದಿರಿಸದ ರೈಲ್ವೆ ಟಿಕೇಟ್‍ನ್ನು ನಿಲ್ದಾಣಗಳಲ್ಲಿ ಬುಕಿಂಗ್ ಕೌಂಟರ್‍ಗಳ ಮೂಲಕ ಮತ್ತು ಯುಟಿಎಸ್ ಅಪ್ಲಿಕೇಶನ್ ಮೂಲಕವೂ ಬುಕ್ ಮಾಡಬಹುದು. ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ಟಿಕೇಟ್ ಪಡೆದು ಪ್ರಯಾಣಿಸಬೇಕು.
ಈ ವಿಶೇಷ ರೈಲುಗಳ ಸಮಯ ಮತ್ತು ನಿಲುಗಡೆ ಕುರಿತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಲು ಅಥವಾ NTES ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.