ಕಲಬುರಗಿ: ಕಾರು – ಬೈಕ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Date:

Share post:

ಕಲಬುರಗಿ: ಶಹಾಬಾದ್ ಸಮೀಪದ ಸಣ್ಣೂರ ರಸ್ತೆಯ ವಾಡಾ ತಾಂಡಾ ಕ್ರಾಸ್ ಸಮೀಪ ಬೈಕ್, ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಬೈಕ್ ಸವಾರ ಮಾಡಬೂಳ ತಾಂಡಾದ ಸತೀಶ್ ನೇಜು ರಾಠೋಡ (30) ಎಂದು ಗುರುತಿಸಲಾಗಿದೆ.

ಮೃತ ಸತೀಷ ಮಂಗಳವಾರ ಸಂಜೆ ಮನೆಯ ಶಾಂತಿಗೆ ಬಂದಿದ್ದ ಸಹೋದರಿಯನ್ನು ಊರಿಗೆ ಹೋಗಲು ಭಂಕೂರ ಕ್ರಾಸ್‌ಗೆ ಬಿಡಲು ಬಂದಿದ್ದ, ಹಿಂತಿರುಗಿ ಹೋಗುವಾಗ ಎದುರಿಗೆ ಬಂದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...