ಕಲಬುರಗಿ| ಅಹಮದಾಬಾದ್ ವಿಮಾನ ದುರಂತ ಪ್ರಕರಣ; ನ್ಯಾಯಾಂಗ ತನಿಖೆಗೆ ಸಚಿವ ಎಚ್ ಕೆ ಪಾಟೀಲ್ ಆಗ್ರಹ

Date:

Share post:

ಕಲಬುರಗಿ: ಅಹಮದಾಬಾದ್ ವಿಮಾನ ದುರಂತ ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಸಚಿವ ಎಚ್.ಕೆ ಪಾಟೀಲ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ದೇಶದ ದೊಡ್ಡ ದುರಂತದ ಸಂಧರ್ಭದಲ್ಲಿ ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ್ ಖರ್ಗೆ ಅವರು ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದಾರೆ, ಪ್ರಧಾನಿ ಈ ವಿಚಾರದಲ್ಲಿ ತಕ್ಷಣ ಸ್ಪಂದಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯ ಮಾಡಿದರು.

ಉಳಿದ ರಾಷ್ಟ್ರಕ್ಕಿಂತ ನಮ್ಮಲ್ಲೂ ತಾಂತ್ರಿಕ ಮೇಲ್ವಿಚಾರಣೆ ಕಡಿಮೆ ಇದೆ ಎಂದು ಟೆಕ್ನಿಕಲ್ ಜನ ಮಾತಾಡ್ತಾರೆ, ಆ ಮಾತು ಬರದ ಹಾಗೆ ಅಭಿವೃದ್ಧಿ ಹೊಂದಿದ ದೇಶದಲ್ಲಿ ಟೆಕ್ನಿಕಲ್ ಮಾನಿಟರ್ ಹೇಗೆ ಮಾಡುತ್ತಾರೆ ಎನ್ನುವುದು ನಮ್ಮಲ್ಲಿ ಶುರುವಾಗಬೇಕು ಎಂದ ಅವರು, ವಿಮಾನ ದುರಂತದಲ್ಲಿ ಮಡಿದವರಿಗೆ ಶಾಂತಿ ಸಿಗಲಿ, ಒಬ್ಬ ಮಾತ್ರ ಬದುಕುಳಿದವರು ಆತನಿಗೆ ದೇವರ ವಿಶೇಷ ಆಶಿರ್ವಾದ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಆಗಿರುನಂತಹ ಆರ್ ಸಿಬಿ ಕಾಲ್ತುಳಿತ ಪ್ರತಿಯೊಬ್ಬ ಕನ್ನಡಿಗನಿಗೂ ನೋವಾಗಿದೆ, ಹಲವು ಸಂಧರ್ಭದಲ್ಲಿ ಕಾಲ್ತುಳಿತ ಆಗುತ್ತೆ, ಇಲ್ಲಿ ಬಹಳ ಜನರಿಗೆ ಗಾಯ ಆಗಿ ಸಾವು ಆಗಿವೆ. ಹಾಗಾಗಿ ನಮ್ಮ ಸರಕಾರ ಇಂತಹ ಜನಜಂಗುಳಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿಶೇಷ ಕಾನೂನು ಜಾರಿಗೆ ಮಾಡಲು ಸಿದ್ಧತೆ ನಡೆಸಿದೆ.

ಜನಜoಗುಳಿಯ ನಿರ್ವಹಣೆ ಬಗ್ಗೆ ವಿಶೇಷ ಕಾನೂನು ಮಾಡುವುದಕ್ಕೆ ನಮ್ಮ ಇಲಾಖೆ ಕರಡು ಮಸೂದೆ ಸಿದ್ಧಪಡಿಸಿದೆ. ಮುಂದಿನ‌ ವಾರದಲ್ಲಿ ಕ್ಯಾಬಿನೇಟ್ ಗಮನಕ್ಕೆ ತಂದು ಒಪ್ಪಿದ್ರೆ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು.

ರೇಸ್ ಕೋರ್ಸ್ ಸ್ಥಳಾಂತರ ಮಾಡುವ ಬಗ್ಗೆ ತಿರ್ಮಾನ ಮಾಡಲಾಗುತ್ತಿದೆ, ಸಿಎಂ ಅವರು ರೇಸ್ ಕೋರ್ಸ್ ಅವರನ್ನ ಕರೆದು ಮಾತಾಡಿದ್ದಾರೆ, ಅಲ್ಲದೆ, ಸ್ಟೇಡಿಯಂ ಕೂಡ ಬೇರೆ ಕಡೆ ಸ್ಥಳಾಂತರ ಮಾಡಬೇಕು ಅನ್ನುವ ಚರ್ಚೆ ಕೂಡ ನಡೆದಿದೆ ಎಂದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....