ಕಲಬುರಗಿ| ಉಜನಿ ಡ್ಯಾಂ ನಿಂದ ಭೀಮಾನದಿಗೆ ನೀರು ಹರಿಸಲು ಡಿಸಿಎಂಗೆ ಜನತಾದಳ ನಿಯೋಗ ಮನವಿ

Date:

Share post:

ಕಲಬುರಗಿ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಡ್ಯಾಂ ನಿಂದ ಕರ್ನಾಟಕದ ಭೀಮಾನದಿಗೆ ನೀರು ಹರಿಸುವ ಬೇಕೆಂದು ಜ್ಯಾತ್ಯಾತೀತ ಜನತಾದಳ (ಜಾ) ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಅ.ಬಡವಾಳ ಅವರು ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.

ಕಲಬುರಗಿ ಮತ್ತು ವಿಜಯಪುರ, ಯಾದಗಿರಿ ಜಿಲ್ಲೆಯ ರೈತರು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 1976 ರಲ್ಲಿ ಬಚಾವತ್ ಆಯೋಗದ ತೀರ್ಪಿನಂತೆ ಮಹಾರಾಷ್ಟ್ರಕ್ಕೆ 95 ಟಿ.ಎಂ.ಸಿ ಮತ್ತು ಕರ್ನಾಟಕಕ್ಕೆ 15 ಟಿ.ಎಂ.ಸಿ ನೀರು ಹಂಚಿಕೆ ಮಾಡಲಾಗಿತ್ತು. ಮಹಾರಾಷ್ಟ್ರವು ಕೇಂದ್ರ ಜಲಸಂಪನ್ಮೂಲ ಅನುಮತಿಯನ್ನು ಪಡೆಯದೆ 25 ಕಿ.ಮೀ ಸರುಂಗ ಮಾರ್ಗವನ್ನು ಕರೆದು 15 ಟಿ.ಎಂ.ಸಿ ನೀರನ್ನು ಸೇನಾ ನದಿಗೆ ಬಿಟ್ಟುಕೊಳ್ಳುತ್ತಿದೆ. ಕರ್ನಾಟಕ ಭಾಗದ ರೈತರ ಜೀವನಾಡಿಯಾದ ಭೀಮಾನದಿ ಬೇಸಿಗೆ ಕಾಲದಲ್ಲಿ ಬತ್ತಿಹೋಗಿ ರೈತರು ಕಂಗಾಲಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೃಷಿ ಮತ್ತು ವ್ಯವಸಾಯ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಹಕಾರವನ್ನು ಅನುಭವಿಸುತ್ತಿದ್ದಾರೆ. ಹಾಗೂ ಬೇಸಿಗೆ ಕಾಲದಲ್ಲಿ ಜಲಮೂಲಗಳು ಬತ್ತಿಹೋಗುತ್ತವೆ. ಇಲ್ಲಿನ ಜನರು ನೀರಿಗಾಗಿ ಪರದಾಡುವಂತಾಗುತ್ತದೆ. ಮನವಿಯನ್ನು ಪರಿಗಣಿಸಿ ಮಹಾರಾಷ್ಟ್ರದ ಸರ್ಕಾರದ ಜೊತೆ ಒಪ್ಪಂದ ಮೂಲಕ ಭೀಮಾ ನದಿಗೆ ನೀರು ಹರಿಸುವಂತೆ ಕ್ರಮ ತೆಗೆದುಕೊಂಡು ನಮ್ಮ ಭಾಗದ ಜನ-ಜಾನುವಾರು ಹಾಗೂ ರೈತರಿರ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ ಅವರು ಮನವಿ ಸ್ವೀಕರಿಸಿ ಸಮಸ್ಯೆ ಇತ್ಯಾರ್ಥದ ಮಾಡುವ ಕುರಿತು ಭರವಸೆ ನೀಡಿದ್ದಾರೆ ಎಂದು ನಿಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಸೋಮಶೇಖರ ದೇಶಮುಖ, ಸುನೀಲ ಹೊಸಮನಿ, ನಾಗಣ್ಣ ವಾರದ ಬೈಲಪ್ಪ ಪಟ್ಟೇದಾರ, ಮಾರುತಿ ಚವ್ಹಾಣ ಸೇರಿದಂತೆ ಇತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಜೀಪ್ ಸಫಾರಿ ಮತ್ತು ಬೋಟಿಂಗ್ ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರಗಿ: ಚಂದ್ರಂಪಳ್ಳಿ ಜಲಾಶಯ, ಗೊಟ್ಟಂಗೊಟ್ಟ, ಎತ್ತಿಪೊತ್ತ ಜಲಪಾತ‌ ಸೇರಿದಂತೆ ದಟ್ಟ ಅರಣ್ಯದೊಂದಿಗೆ...

ಕಲಬುರಗಿ| ಮುಂಗನಸು ಕೃತಿ ವರ್ತಮಾನದ ತಲ್ಲಣಗಳ ಪ್ರತಿಬಿಂಬ: ಡಾ. ಚಿದಾನಂದ ಚಿಕ್ಕಮಠ

ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಿರಿಯ ಸಾಹಿತಿ ರೇವಣಸಿದ್ಧಪ್ಪ ದುಕಾನ...

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...