ಮೇ.31 ರಂದು ನಾರಾಯಣಸ್ವಾಮಿ, ರವಿಕುಮಾರ್ ವಿರುದ್ಧದ ಪ್ರತಿಭಟನೆಗೆ ಮಾದಿಗ ಸಮುದಾಯ ಬೆಂಬಲ: ನಾಗರಾಜ ಗುಂಡಗುರ್ತಿ

Date:

Share post:

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರಿಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಹಗುರವಾಗಿ ಕೀಳು ಮಟ್ಟದ ಹೇಳಿಕೆ ನೀಡಿದನ್ನು ಹಾಗೂ ಜಿಲ್ಲಾಧಿಕಾರಿಗಳಿಗೆ ಅಪಮಾಣಿಸಿದ ಎನ್.ರವಿಕುಮಾರ್ ಹೇಳಿಕೆ ಖಂಡಿಸಿ ಮೇ 31 ರಂದು ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಮಾದಿಗ ಸಮಾಜದ ಹೋರಾಟಗಾರರು ಬೆಂಬಲಿಸದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ೦ತೆ ಮಾದಿಗ ಸಮಾಜದ ಮುಖಂಡರಾದ ನಾಗರಾಜ ಗುಂಡಗುರ್ತಿ ಮನವಿ ಮಾಡಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರ ಮೆಚ್ಚಿಸಲು ಪದೇ ಪದೇ ಖರ್ಗೆ ಅವರ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಕೀಳು ಮಟ್ಟದ ಹೇಳಿಕೆ ನೀಡುವುದನ್ನು ದಲಿತ ಸಮುದಾಯವನ್ನು ಸಹಿಸಿಕೊಳ್ಳುವುದಿಲ್ಲ. ಛಲವಾದಿ ನೀನೊಬ್ಬ ದಲಿತ ವಿರೋಧಿ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್ ವಿರೋಧಿ ಎಂದು ಭಾವಿಸಿ ರಾಜ್ಯದಲ್ಲಿ ಯಾವುದೇ ಜಿಲ್ಲೆಗೆ ಹೋದರು ಕೂಡಾ ನಿನ್ನ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ, ಮೊದಲನೇ ಹಂತವಾಗಿ ಮೇ 31 ರಂದು ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...

ಕಲಬುರಗಿ| ಐರಾವತ – ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ; ಇಬ್ಬರು ಚಾಲಕರ ಮೃತ್ಯು

ಕಲಬುರಗಿ: ಐರಾವತ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿ...

ಕಲಬುರಗಿ–ಮೈಸೂರು, ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಚಾಲನೆ

ಮೂರು ತಿಂಗಳಲ್ಲಿ‌ 120 ಹೊಸ ಬಸ್ ಸೇರ್ಪಡೆ: ಅರುಣಕುಮಾರ ಪಾಟೀಲ ಕಲಬುರಗಿ: ಕಲ್ಯಾಣ...