ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ತೊಗರಿ, ಹತ್ತಿ, ಹೆಸರು, ಉದ್ದು ಹಾಗೂ ಕಬ್ಬು ಬೆಳೆಗಳು ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಈ ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪೋಶಕಾಂಶಗಳನ್ನು ಗಮನಿಸಿದಾಗ ಸಮತೋಲನವಾದ ಸಾರಜನಕ, ರಂಜಕ ಹಾಗೂ ಪೋಟಾಷ ಪೋಷಕಾಂಶಗಳ ಜೊತೆಗೆ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಕ್ಯಾಲ್ಸಿಯಂ ಹಾಗೂ ಮ್ಯಾಗ್ನೇಷಿಯಂ ಕೂಡ ಬಳಸುವ ಅವಶ್ಯಕತೆ ಇದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ತಿಳಿಸಿದ್ದಾರೆ.
ಈಗಾಗಲೇ ಸುಮಾರು ವರ್ಷಗಳಿಂದ DAP ರಸಗೊಬ್ಬರ ಬಳಸುತ್ತಿರುವುದರಿಂದ ಹೇರಳವಾಗಿ ರಂಜಕ ಪೋಷಕಾಂಶ ಭೂಮಿಯಲ್ಲಿ FIXED FORM ನಲ್ಲಿ ಇದ್ದು, DAP ರಸಗೊಬ್ಬರ ಬದಲಾಗಿ ಸಂಯುಕ್ತ ರಸಗೊಬ್ಬರಗಳಾದ 20:20:0:13 ಹಾಗೂ 14:35:14 ಬಳಕೆ ಮಾಡಬಹುದಾಗಿದೆ. ಹಾಗೂ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10, 15:15:15, 15:15:15:9(S) ಇತ್ಯಾದಿ ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿಗೆ ಸಮತೋಲನ ಪೋಶಕಾಂಶಗಳನ್ನು ನೀಡಿದಂತಾಗುತ್ತದೆ.
ತಾಂತ್ರಿಕವಾಗಿ ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ: ರಂಜಕ: ಪೊಟ್ಯಾಷ ರಸಗೊಬ್ಬರಗಳನ್ನು 4:2:1ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಪ್ರಸ್ತುತ ರೈತರು ಯಥೇಚ್ಚವಾಗಿ ಸಾರಜನಕ ಹಾಗೂ ರಂಜಕ ಹೋಂದಿರುವ (DAP) ಹಾಗೂ UREA ರಸಗೊಬ್ಬರವನ್ನು ಮಾತ್ರ ಬಳಸುತ್ತಿರುವ ಕಾರಣ ಸದರಿ ರಸಗೊಬ್ಬರಗಳ ಜಿಲ್ಲೆಯ ಅನುಪಾತವು 5.08:2.83:1 ಆಗಿರುತ್ತದೆ. ಇದನ್ನು ಸರಿಪಡಿಸಲು ಹಾಗೂ ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲನಾತ್ಮ ಕರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿರುತ್ತದೆ.
DAP ರಸಗೊಬ್ಬರಕ್ಕೆ ಪರ್ಯಾಯವಾಗಿ ರೈತರು ತೊಗರಿ, ಉದ್ದು, ಹೆಸರು, ಹತ್ತಿ ಮತ್ತು ಕಬ್ಬು ಬೆಳೆಗೆ ಗಂಧಕ ಅಂಶ ಒದಗಿಸುವ ಸಂಯುಕ್ತ ರಸಗೊಬ್ಬರಗಳಾದ 20:20:0:13 ಹಾಗೂ ಸಮತೋಲನ ಪೆÇೀಷಕಾಂಶ ನೀಡುವ ಮತ್ತು ಭೂಮಿಯ ಆರೋಗ್ಯಕ್ಕೆ ಹಿತವಾದ ಸಂಯುಕ್ತಗೊಬ್ಬರಗಳಾದ 14:35:14, 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10, 15:15:15, 15:15:15:9(S) ಇತ್ಯಾದಿ ರಸಗೊಬ್ಬರಗಳನ್ನು ಬಳಸಬಹುದಾಗಿದೆ. ಇದರಿಂದ ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ ಮತ್ತು ಬೆಳೆಗಳ ಆರೋಗ್ಯ ಕಾಪಾಡಲು ರೈತಬಾಂದವರು DAP ಮತ್ತು UREA ರಸಗೊಬ್ಬರಗಳ ಜೊತೆಗೆ ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಉತ್ತಮ ಇಳುವರಿ ಪಡೆಯಲು ಜೊತೆಗೆ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.