ಆಳಂದ: ಹೆಬಳ್ಳಿ ಗ್ರಾಮದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ 

Date:

Share post:

ಕಲಬುರಗಿ: ಮಾನವೀಯತೆ, ನೈತಿಕ ಮೌಲ್ಯ, ವೈಚಾರಿಕತೆ ಹಾಗೂ ಸ್ವಾಭಿಮಾನದ ಬದುಕಿನ ಅರಿವು ತಂದುಕೊಳ್ಳಲು ನಮಗೆ ಬಿ.ಆರ್. ಅಂಬೇಡ್ಕರ್ ಅವರೇ ಮಾದರಿಯಾಗಬೇಕು ಎಂದು ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಆಳಂದ ತಾಲ್ಲೂಕಿನ ಹೆಬಳ್ಳಿ ಗ್ರಾಮದಲ್ಲಿ ಶುಕ್ರವಾರ ಸಿದ್ಧಾರ್ಥ ತರುಣ ಸಂಘದಿಂದ ಏರ್ಪಡಿಸಿದ ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವದಲ್ಲಿ ಮಾತನಾಡಿದರು.

ಜಾತಿ, ಧರ್ಮ, ಸಂಘಟನೆಗಳ ಶಕ್ತಿ ಪದರ್ಶನಕ್ಕೆ ಮಹಾತ್ಮರ ಜಯಂತಿ ಆಚರಣೆ ಮಾಡುವುದು ಬೇಕಾಗಿಲ್ಲ.ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ ದಂಪತಿಗಳ ಚಿಂತನೆಗಳು ಸ್ಮರಣೆಯಿಂದ ನಮ್ಮ ಜೀವನ ಕಲ್ಯಾಣ ಆಗುತ್ತದೆ. ನಮ್ಮ ಸಮಾಜದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಸಹೋದರತ್ವ ಗುಣಗಳು ಬೆಳಯುತ್ತವೆ ಎಂದರು.

ಬೆಳಮಗಿ ಅಮರಜ್ಯೋತಿ ಬಂತೇಜಿ ಮಾತನಾಡಿ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಶೋಷಿತರ ಬಾಳು ಬೆಳಗಲು ಸಾಧ್ಯವಾಯಿತು. ನಾವೂ ಅವರ ಆದರ್ಶಗಳು ಹಾಗೂ ಅವರು ಕೊಟ್ಟ, ಬೌದ್ಧ ಧರ್ಮದ ಆಚರಣೆಗಳು ಕುಟುಂಬ ಸಮೇತರಾಗಿ ಪಾಲಿಸಬೇಕಿದೆ ಎಂದರು.

ಪ್ರಾಂಶುಪಾಲ ಸಂಜಯ್ ಎಸ್ ಪಾಟೀಲ ಮಾತನಾಡಿ ಅಂಬೇಡ್ಕರ್ ಅವರ ಬಹುಮುಖ ಸಾಧನೆಗಳು ರಾಷ್ಟ್ರವನ್ನು ಸಮೃದ್ಧಗೊಳಿಸಿವೆ, ವಿಶೇಷವಾಗಿ ರಾಷ್ಟ್ರೀಯ ಏಕತೆ, ಪ್ರಗತಿ ಸಾಧಿಸಲು ಸಂವಿಧಾನವೇ ಮೂಲ ಕಾರಣ ಎಂದರು.

ಹೋರಾಟಗಾರ ಬಸವಲಿಂಗಪ್ಪ ಗಾಯಕವಾಡ, ನಿವೃತ್ತ ಮುಖ್ಯ ಶಿಕ್ಷಕ ಪಂಡಿತ ಹೊಸಮನಿ ಮಾತನಾಡಿದರು. ವಕೀಲ ನಾಗೇಂದ್ರ ಕೆ ಜವಳಿ ಅಧ್ಯಕ್ಷತೆವಹಿಸಿದರು. ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಶೇರಿಕಾರ, ಅಂಬಾದಾಸ ಕುಲಕರ್ಣಿ, ಮುಖಂಡ ಆನಂದರಾವ ಗಾಯಕವಾಡ, ವಿಠಲ ಹೊಸಮನಿ, ಮರಪ್ಪ ಜಿಂಗೆ, ದಿಲೀಪ ಕಾಂಬಳ,ಪ್ರದೀಪ ಜಿಂಗೆ, ವಿಲಾಸ ದೇಡೆ, ಮಾರುತಿ ಹೊಸಮನಿ, ಖಾಜಪ್ಪ ಜಿಂಗೆ, ಚಾಂದಸಾಬ ಶೇಖ, ಶಾಣಪ್ಪ ಗಾಯಕವಾಡ, ಆದಿನಾಥ, ರಾಜು ಶೇರಿಕಾರ, ಸಿದ್ದರಾಮ ಜಿಂಗೆ, ಉದಯಕುಮಾರ, ರಾಹುಲ, ಪ್ರಕಾಶ ಗಾಯಕವಾಡ, ಶ್ರೀಕಾಂತ ಕಾಂಬಳೆ ಉಪಸ್ಥಿತರಿದ್ದರು. ಸೈಬಣ್ಣ ಜಮದಾರ ನಿರೂಪಿಸಿದರೆ, ಪ್ರದೀಪ ಸಿ. ಜಿಂಗೆ ಸ್ವಾಗತಿಸಿದರು. ಅನೀಲ ಕಾಂಬಳೆ ವಂದಿಸಿದರು.

ಈ ಮೊದಲು ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖಂಡ ಮಲ್ಲಣ್ಣ ನಾಗೂರೆ ಪೂಜೆ ಸಲ್ಲಿಸಿದರು. ಲಾಯಕಲಿ ಪಟೇಲ್, ಭೀಮಾಶಂಕರ ನಾಗೂರೆ, ಚಂದ್ರಕಾಂತ ಬೆಳಂ, ಕಾಶಿನಾಥ ಒಡೆಯರ್ ಪಾಲ್ಗೋಂಡಿದರು. ಇದೇ ಸಂದರ್ಭದಲ್ಲಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಗ್ರಾಮದ ಮುಖ್ಯಬೀದಿಗಳಲ್ಲಿ ಅಂಬೇಡ್ಕರ್ ಪ್ರತಿಮೆಯ ಭವ್ಯ ಮೆರವಣಿಗೆ ನಡೆಯಿತು.

Share post:

spot_imgspot_img

Popular

More like this
Related

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...

ಕಲಬುರಗಿ| ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ಸೂಚನೆ

ಕಲಬುರಗಿ: ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು...