ಕಲಬುರಗಿ| ಆಪರೇಷನ್ ಸಿಂಧೂರ ಯಶಸ್ವಿ ಹಿನ್ನೆಲೆ; ಮೇ 17ರಂದು ತಿರಂಗಾ ಯಾತ್ರೆ 

Date:

Share post:

ಕಲಬುರಗಿ: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಉಗ್ರವಾದಿಗಳನ್ನು ಸದೆಬಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಗಾಗಿ ಸೈನಿಕರನ್ನು ಬೆಂಬಲಿಸಲು ಇದೇ ಮೇ.17ರಂದು ನಗರದಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ಎಂಬ ಘೋಷವಾಕ್ಯದಡಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಶರಣು ಪಪ್ಪಾ ಹೇಳಿದ್ದಾರೆ.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಶನಿವಾರ ಸಂಜೆ 4 ಗಂಟೆಗೆ ಬೃಹತ್ ತಿರಂಗಾ ಯಾತ್ರೆ ಪ್ರಾರಂಭವಾಗಿ, ಜಗತ್ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ. ಪಕ್ಷಭೇದ ಮರೆತು ಸರ್ವ ದೇಶ ಭಕ್ತ ನಾಗರೀಕರು ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ರಾಷ್ಟ್ರ ನಮಗೇನು ಕೊಟ್ಟಿದೆ ಎಂಬುದನ್ನು ಪಕ್ಕಕ್ಕಿಟ್ಟು, ರಾಷ್ಟ್ರಕ್ಕೆ ನಾವೇನೂ ಕೊಡಬಲ್ಲೆವು ಎಂಬ ವಿಚಾರಧಾರೆಯೊಂದಿಗೆ ಈ ದೇಶದ ಸೈನಿಕನ ಬೆನ್ನಿಗೆ, ದೇಶವನ್ನು ಮುನ್ನೆಡೆಸುತ್ತಿರುವ ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾವೆಲ್ಲರೂ ನಿಲ್ಲುವ ಮೂಲಕ ರಾಷ್ಟ್ರದ ರಕ್ಷಣೆಗೆ ಮುಂದಾಗಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಕೋಬಾಳ, ನ್ಯಾಯವಾದಿ ಎಸ್.ವಿ ಪಸಾರ್, ನಾಗಣ್ಣಾ ಪಾಟೀಲ್, ಶಿವಾನಂದ ಇಂಗಿನಶೆಟ್ಟಿ,ಆನಂದ ದಂಡೋತಿ,ಸಿದ್ದು ವಾಡಿ, ಬಾಬುರಾವ್ ಹಾಗರಗುಂಡಗಿ, ವಿರೇಂದ್ರ ಪಾಟೀಲ್ ರಾಯಕೋಡ ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...

ಕಲಬುರಗಿ: 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಗಣೇಶ್ ಬೋಸ್ಲೆ ಫಸ್ಟ್ ರ್ಯಾಂಕ್

ಕಲಬುರಗಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ...

ಕಲಬುರಗಿ: ಗುಂಡಿನ ದಾಳಿ; ವ್ಯಕ್ತಿಯ ಭೀಕರ ಕೊಲೆ

ಕಲಬುರಗಿ: ಬಲರಾಮ ಚೌಕ್ ನಿಂದ ವಾಡಿ ಪಟ್ಟಣಕ್ಕೆ ಸ್ಕೂಟಿ ಮೇಲೆ ಹೋಗುತ್ತಿದ್ದ...

ಕಲಬುರಗಿ| ಏ.15 ರಿಂದ 17ರ ವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ 

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಏಪ್ರೀಲ್ 15 ರಿಂದ 17ರ ವರೆಗೆ...