ಕಲಬುರಗಿ| ಜಿಮ್ಸ್‌ ನಲ್ಲಿ ಲಿಫ್ಟ್ ದೋಷ; ಪ್ರಾಣಾಪಾಯದಿಂದ 9 ಮಂದಿ ಪಾರು 

Date:

Share post:

ಕಲಬುರಗಿ: ನಗರದ ಜಿಮ್ಸ್ (GIMS) ಆಸ್ಪತ್ರೆಯಲ್ಲಿ ಮತ್ತೊಂದು ನಿರ್ಲಕ್ಷ್ಯದ ಸುದ್ದಿ ಬದಿದ್ದು, ಆಸ್ಪತ್ರೆಯ ಮೂರನೆ ಮಹಡಿಯಲ್ಲಿ ಹಠಾತ್‌ವಾಗಿ ಲಿಫ್ಟ್ ನಿಂತು, ಒಟ್ಟು 9 ಜನ ಒಂದುವರೆ ಗಂಟೆ ಕಾಲ ಲಿಫ್ಟ್ ಒಳಗೆ ಸಿಲುಕಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಸಿಲುಕಿದವರಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಗಳು ಇದ್ದಾರೆ. ವಿದ್ಯುತ್ ಪೂರೈಕೆ ಬಂದ್‌ ಆಗಿ, ಲಿಫ್ಟ್ ಫ್ಯಾನ್ ಕೂಡ ನಿಂತ ಪರಿಣಾಮ ಬಿಸಿಲಿನಲ್ಲಿ (41 ಡಿಗ್ರಿ ಸೆಲ್ಸಿಯಸ್‌ ತಾಪಮಾನ) ಉಸಿರಾಟದ ತೀವ್ರ ತೊಂದರೆ ಉಂಟಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಗೋಡೆ ಒಡೆದು ಜನರ ರಕ್ಷಣೆ:

ಲಿಫ್ಟ್ ದ್ವಾರ ತೆರೆಯುತ್ತಿದ್ದಂತೆ ಎದುರಿಗೆ ಗೋಡೆ ಇದ್ದ ಕಾರಣ ಎಲ್ಲರೂ ಮತ್ತೆ ಸಿಲುಕಿದ ಸ್ಥಿತಿಗೆ ತಲುಪಿದರು. ಆಸ್ಪತ್ರೆಯ ಸಿಬ್ಬಂದಿ ಕೊನೆಗೆ ಡ್ರಿಲ್‌ ಯಂತ್ರದ ಸಹಾಯದಿಂದ ತಡೆಗೋಡೆ ಒಡೆದು ಸಿಲುಕಿದವರನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.

ತಾಂತ್ರಿಕ ವೈಫಲ್ಯಕ್ಕೂ ಮೊದಲು ನಿರ್ಲಕ್ಷ್ಯ ಕಾರಣ:

ಲಿಫ್ಟ್ ಹಿಂದಿನ ಜಯದೇವ ಆಸ್ಪತ್ರೆಯ ಸಮಯದಲ್ಲಿ ಬಳಸಲಾಗುತ್ತಿತ್ತೆಂಬ ಮಾಹಿತಿ ಲಭಿಸಿದೆ. ಜಿಮ್ಸ್‌ ಪದಾಧಿಕಾರಿಗಳು ಮಗು ಕಳ್ಳತನ ಪ್ರಕರಣದ ಬಳಿಕ ಭದ್ರತೆಗಾಗಿ ಗೋಡೆ ಕಟ್ಟಿದರೂ, ಆ ಲಿಫ್ಟ್ ಬಳಕೆಯಲ್ಲೇ ಇರುವುದು ಈಗ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಜನರಲ್ಲಿ ಮತ್ತೆ ಅತಂಕ:

ಕಳೆದ ಕೆಲವು ತಿಂಗಳಿನಿಂದ ಮಗು ಕಳ್ಳತನದಿಂದ ಹಿಡಿದು ಇತ್ತೀಚಿನ ಲಿಫ್ಟ್ ದುರಂತದ ತನಕ ಜಿಮ್ಸ್ ಆಸ್ಪತ್ರೆ ನಿರಂತರವಾಗಿ ಸುದ್ದಿ ಮೂಲಕ್ಕಾಗುತ್ತಿದೆ. ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಗಳು ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಇಂಥ ದುರಂತಗಳು ಮತ್ತೆ ನಡೆಯದಂತೆ ಸೂಕ್ತ ತಾಂತ್ರಿಕ ತಪಾಸಣೆ, ನಿರ್ವಹಣೆ ಹಾಗೂ ಭದ್ರತಾ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Share post:

spot_imgspot_img

Popular

More like this
Related

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...