ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮ?

Date:

Share post:

“Every day is mother’s day” ತಾಯಂದಿರ ದಿನವು, ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನಾಂಕಕ್ಕಿಂತ ಹೆಚ್ಚಿನದಾಗಿದೆ. ಇದು ನಮಗೆ ಜೀವನ ಪ್ರೀತಿ ಮತ್ತು ಅಚಲ ಬೆಂಬಲವನ್ನು ನೀಡಿದ ಮಹಿಳೆಯರ ಅರ್ಥಪೂರ್ಣ ಆಚರಣೆಯಾಗಿದೆ, ಅದು ತಾಯಿ, ಅಜ್ಜಿ, ಅತ್ತೆ, ಅಥವಾ ಅಥವಾ ನಮ್ಮ ಜೀವನದಲ್ಲಿ ಬದಲಾವಣೆಯನ್ನು ತಂದ ಮಾತೃತ್ವವಾಗಿರಬಹುದು. ಆದ್ದರಿಂದ ಈ ಮಾತೃತ್ವಕ್ಕೆ, ಒಂದು ಹೃದಯಪೂರ್ವಕ ಕೃತಜ್ಞತೆ ಅರ್ಪಿಸಲು ಇದು ವಿಶೇಷ ಸಮಯವಾಗಿದೆ.

ಅಮ್ಮನ ದಿನಾಚರಣೆಯನ್ನು ಆಚರಿಸುವ ಅಗತ್ಯತೆ ಅಮ್ಮನ ಪ್ರೀತಿ, ಕಾಳಜಿ, ತ್ಯಾಗವನ್ನು ಅರ್ಥ ಮಾಡಿಕೊಳ್ಳಲು.

ಅಮ್ಮನಿಗೆ ಪ್ರಶಂಸೆ ವ್ಯಕ್ತಪಡಿಸಿ, ಅವಳನ್ನು ಸಂತಸದಿಂದಿರಿಸಲು,

ಅಮ್ಮನ ದಿನಾಚರಣೆಯ ಮೂಲಕ ಇತರ ಬಾಂಧವ್ಯಗಳನ್ನು ಗಟ್ಟಿಗೊಳಿಸಲು.

ಬಾಲ್ಯವನ್ನು ನೆನೆದು, ಆಸ್ವಾದಿಸಲು,

ಅಪ್ಪ ಅಮ್ಮನಿಂದ ಪಡೆದ ಸಾಮಾಜಿಕ ಮೌಲ್ಯಗಳನ್ನು ಕಿರಿಯರಿಗೆ ವರ್ಗಾಯಿಸಲು.

ಬದುಕಿನಲ್ಲಿ ತಾಯಿಯ ಪಾತ್ರ:

ಇತರ ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ತಾಯಿ, ಬಹು ಮುಖ್ಯವಾಗಿ, ತಾಯಿಯ ಪಾತ್ರವನ್ನು ಬಹು ಚೆನ್ನಾಗಿ ನಿರ್ವಹಿಸುತ್ತಾಳೆ. ಮೊದಲ ತಾಯ ಹಾಲು ಕುಡಿದು,ಲಲ್ಲೆಯಿಂದ ತೊದಲು ನುಡಿದು ಬೆಳೆದು ಬಂದ ಮಾತದಾವುದು ಅದೇ ತಾಯಿನುಡಿ.

ಮಗುವಿಗೆ ಮಾತು, ನಡಿಗೆ, ಗ್ರಹಿಕೆ, ಬುದ್ಧಿವಿಕಾಸ ಎಲ್ಲವೂ ತಾಯಿಯಿಂಲೇ, ಆರಂಭವಾಗುತ್ತದೆ. ಅದಕ್ಕೇ “ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ” ಎಂದು ಹೇಳುತ್ತಾರೆ.

ತಾಯಿ ವಿದ್ಯಾವಂತೆ ಆಗಿರಲಿ ಅನಕ್ಷರಸ್ಥೆ ಆಗಿರಲಿ ಅವಳು ಉತ್ತಮ ಮಾರ್ಗದರ್ಶಕಳು. ತಮ್ಮ ಮಕ್ಕಳ ಜೀವನ ಎಂದೂ ಸೋಲಲು ಅಮ್ಮ ಬಿಡುವುದಿಲ್ಲ.

*ಅಮ್ಮನ ಕಡೆಗಣನೆ*

ಇಂದಿನ ದಿನಗಳಲ್ಲಿ ಮಕ್ಕಳು ದೊಡ್ಡವರಾದಂತೆ, ಬಹುಪಾಲು ಮಕ್ಕಳು ತಮಗಾಗಿ ತಮ್ಮ ಜೀವನವನ್ನು ತೇದ ತಂದೆ ತಾಯಿಗಳನ್ನು ಹೊರೆ ಎಂದು ಭಾವಿಸಿ, ಅವರನ್ನು ತೊರೆಯುವುದು ಒಂದು ಪರಿಪಾಠವಾಗಿಬಿಟ್ಟಿದೆ.

ಸಣ್ಣವರಿದ್ದಾಗ, ಎಲ್ಲದಕ್ಕೂ ಅಮ್ಮ ಅಮ್ಮ ಎಂದು ಮಾತನಾಡುತ್ತಿದ್ದವರು ಈಗ ಅಮ್ಮ ಮಕ್ಕಳಿಗೆ ಒಂದು ಮಾತು ಹೇಳಲು ಹೊರಟಾಗಲು ಅದನ್ನು ಕೇಳಿಸಿಕೊಳ್ಳಲಾರದಷ್ಟು ಬ್ಯುಸಿಯಾಗಿರುತ್ತಾರೆ.

ಮಕ್ಕಳು ಬರಿಗಾಲಲಿ ನಡೆವಾಗ ಕಾಲುಗಳಿಗೆ ,ಬಿಸಿಯಾಗುವುದೆಂದು ಸಾಲ- ಸೋಲ, ಕೂಲಿ -ನಾಲಿ ಮಾಡಿ ಹೊಸ ಚಪ್ಪಲಿ ತಂದು ತೊಡಿಸಿದ ಅಮ್ಮ ಇಂದು ಅವಳ ಹರಿದ ಚಪ್ಪಲಿಗಳನ್ನು ಸಹ ಹೊಲಿಸಲು ಸಹ ಮಕ್ಕಳಿಗೆ ಸಮಯವಿರುವುದಿಲ್ಲ.

ಚಂದದ ಮನೆ ಮಡದಿ ಮಕ್ಕಳೊಂದಿಗೆ ಆರಾಮಾಗಿರುವ ಮಕ್ಕಳು ಯಾವುದೋ ಹಳೆಯ ಮನೆಯಲ್ಲಿ ಬಿಟ್ಟು ಬಂದಿರುವ ತಾಯಿಯು, ನಗ್ಗು ಹಿಡಿದ ಹಳೆಯ ಪಾತ್ರೆಗಳನ್ನು ಉಜ್ಜಿ ಉಸ್ಸಪ್ಪಾ ಎಂದು ನಡೆದು ತಾನೇ ಅಡುಗೆ ಮಾಡಿ ತಿನ್ನುವ ಸ್ಥಿತಿಗೆ ತನ್ನ ಮಗ ಅಥವಾ ಮಗಳು ಮರುಗುವರೇ!!!??

ಈಗ ಮಗನಷ್ಟು ವೇಗವಾಗಿ ನಡೆಯಲು ಸಾಧ್ಯವಾಗದಿರುವ ಅಂದು ಮಗನ ಬೆರಳಿದು ನಡೆಯುವುದನ್ನು ಕಲಿಸಿದ ಅಮ್ಮನನ್ನು ಅದೆಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದಾಗಿದೆ.

ಹೌದಲ್ಲವೇ!!

ಅಂದು ತನ್ನ ಮಕ್ಕಳಿಗಾಗಿ, ಕುಟುಂಬದ ಸದಸ್ಯರಿಗಾಗಿ ದುಡಿದವಳು ಇಂದು ತಾಯಿಗೆ ಎಷ್ಟು ವಯಸ್ಸಾದರೂ ಹೊಲಗದ್ದೆ, ವ್ಯಾಪಾರ ಎಂದು ದುಡಿಸಿಕೊಳ್ಳುವರು.

ಚಿಕ್ಕವರಿದ್ದಾಗ ರುಚಿ ರುಚಿ ಅಡುಗೆ ಮಾಡಿ ಪ್ರೀತಿಯಿಂದ ಮಕ್ಕಳಿಗೆ ಬಡಿಸುತ್ತಿದ್ದವಳು, ಮಕ್ಕಳು ಒಂದು ಒಳ್ಳೆಯ ಸ್ಥಿತಿಗೆ ಬಂದು ಮೇಲೆ ಅವಳನ್ನು ಮನೆಗೆ ಕರೆ ತಂದು ಒಂದೆರಡು ಬಾರಿ ಅಡುಗೆ ಮಾಡಿ ಹಾಕಿ ಮತ್ತೆ ಊರಿಗೆ ಕಳಿಸಿದರೆ ಮುಗಿಯಿತು. ನೆಮ್ಮದಿ ಸುಖ ಐಶ್ವರ್ಯದಿಂದ ಇರಿ ಆದರೆ ಕರುಳ ಬಳ್ಳಿಯನ್ನು ಕತ್ತರಿಸಿ ಭುವಿಗೆ ತಂದ ಅಮ್ಮನನ್ನು ಅಷ್ಟೇ ಖುಶಿ, ನೆಮ್ಮದಿಯಿಂದ ನೋಡಿಕೊಳ್ಳಬೇಕಲ್ಲವೇ!!? *ತಾಯಿಯನ್ನು ಹೊಂದಿರುವ ಭಾಗ್ಯವಂತ ಮಕ್ಕಳೇ

ಹೇಗೆ ನಿಮ್ಮ ಮಗಳು ಹಾಗೂ ಮಗನನ್ನು ಪ್ರೀತಿ ಕಾಳಜಿ ಮಮತೆಯಿಂದ ಬೆಳೆಸುತ್ತಿರುವಿರೋ ಹಾಗೆಯೇ ನೀವು ಚಿಕ್ಕ ಕಂದರಿರುವಾಗ ಅಷ್ಟೇ ಪ್ರೀತಿ, ಮಮತೆ, ವಾತ್ಸಲ್ಯ ಕಾಳಜಿ ಮುದ್ದಿನಿಂದ ನಿಮ್ಮ ತಂದೆ ತಾಯಿ ಬೆಳೆಸಿದ್ದರು; ನಿಮ್ಮ ಸಲಹಿದ ಅಮ್ಮನ ಪ್ರೀತಿಗೆ, ಅಪ್ಪನ ಕಷ್ಟಕ್ಕೆ ಬೆಲೆ ಕಟ್ಟಲಾಗದ ನೀವು, ಅವರನ್ನು ಉಪಚರಿಸಲು ಹಿಂಜರಿಯುವಿರಲ್ಲ!!!??.

 

       -ಸುಶೀಲಾ ಮಂಜುನಾಥ್

      (ಶಿಕ್ಷಕಿ, ಅರಸನಹಳ್ಳಿ,ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾ ಜಿ)

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...