ಕಲಬುರಗಿ| ಮೇ.9 ರಂದು ಮಿನಿ ಉದ್ಯೋಗ ಮೇಳ

Date:

Share post:

ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಮೇ 9 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐ.ಟಿ.ಐ. ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಈ ಉದ್ಯೋಗ ಮೇಳದಲ್ಲ್ಲಿ ಭಾಗಹಿಸಲಿರುವ ಕಂಪನಿಗಳ ವಿವರ ಇಂತಿದೆ: ಮಣಪ್ಪುರಂ ಫೈನಾನ್ಸ್‍ದಲ್ಲಿ ಸೆಲ್ಸ್ ಎಕ್ಸಿಕ್ಯೊಟಿವ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಭಾರತ ಫೈನಾನ್ಸ್‍ದಲ್ಲಿ ಟೇಲಿಕಾಲರ್ ಹುದ್ದೆಗೆ ಪಿಯುಸಿ/ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಆಕಾಶ ಇನ್ಸ್‍ಸ್ಟಿಟ್ಯೂಟ್‍ದಲ್ಲಿ ಅಡಮೀಷನ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು. ಸ್ಪಂದನಾ ಸ್ಫೂರ್ತಿ ಫೈನಾನ್ಸ್‍ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ/ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 19 ರಿಂದ 27 ವರ್ಷದೊಳಗಿರಬೇಕು. ರಿಲಿಯಾನ್ಸ್ ನಿಪೋನ್ ಲೈಫ್ ಇನ್ಸೂರೆನ್ಸ್‍ದಲ್ಲಿ ಲೈಫ್ ಪ್ಲಾನಿಂಗ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 30 ರಿಂದ 45 ವರ್ಷದೊಳಗಿರಬೇಕು. ಮಹಿಳಾ ಅಭ್ಯರ್ಥಿಗಳು ಮಾತ್ರ ಭಾಗವಹಿಸಬೇಕು.

ಕಲಬುರಗಿ ಎಸ್.ಆರ್.ಜೆ. ಗ್ರೂಪ್ ಆಫ್ ಇನ್ಸ್‍ಸ್ಟಿಟ್ಯೂಷನ್ಸ್‍ದಲ್ಲಿ ಶಿಕ್ಷಕರ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಮತ್ತು ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು. ದೊಡ್ಲಾದಲ್ಲಿ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಎಕ್ಸಿಕ್ಯೊಟಿವ್ ಹುದ್ದೆ ಹಾಗೂ ಪಿ.ಎಸ್.ಆರ್. ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ಅಕೌಂಟ್ಸ್ ಹುದ್ದೆಗೆ ಬಿ.ಕಾಮ್. ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ) ಭಾವಚಿತ್ರ ಹಾಗೂ ಆಧಾರ್‍ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲ್ಲಿ ಭಾಗವಹಿಸಬೇಕು. ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...