ಕಲಬುರಗಿ| ಕೇಂದ್ರ ಕಾರಾಗೃಹದಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮಕ್ಕೆ ಚಾಲನೆ

Date:

Share post:

ಕಲಬುರಗಿ: ಒಳ ಮತ್ತು ಹೊರ ಆವರಣದಲ್ಲಿ ಅರವಟಿಕೆ ಮೂಲಕ ಪಕ್ಷಿಗಳಿಗೆ ನೀರು ಕುಡಿಸುವ (ಉಣಿಸುವ) ಕಾರ್ಯಕ್ರಮವನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು.

ಈ ಸಂಸ್ಥೆಯ ಮುಖ್ಯಸ್ಥ ಡಾ|| ಅನಿತಾ ಆರ್. ಅವರು ಎಲ್ಲಾ ಅಧಿಕಾರಿ/ ಸಿಬ್ಬಂದಿಗಳೊಂದಿಗೆ ಸೇರಿ ಕೆಲಸದ ಒತ್ತಡದ ಮಧ್ಯೆಯೂ ಸಹ ಪಕ್ಷಿಗಳಿಗೆ ನೀರು ಉಣಿಸುವ (ಕುಡಿಸುವ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವನ ಸುಂದರ ಬದುಕಿಗೆ ಸ್ಫೂರ್ತಿದಾಯಕವಾದ ವಾತಾವರಣವನ್ನು ಪಶು-ಪಕ್ಷಿಗಳಿಂದ ಸಿಗಲಿದ್ದು, ನಾವು ಬದುಕುವುದಕ್ಕೆ ಆಹಾರ ನೀರು ಎಷ್ಟು ಮುಖ್ಯವೋ ಅದೇ ರೀತಿ ಮೂಕ ಪಶು-ಪಕ್ಷಿಗಳಿಗೂ ಕೂಡ ಆಹಾರ ನೀರು ಅಷ್ಟೆ ಅವಶ್ಯಕವಾಗಿದೆ. ನಾನು ಅವುಗಳ ಸಂರಕ್ಷಣೆಯನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಹಾಗಾಗೀ ಪಕ್ಷಿಗಳಿಗೆ ಪ್ರತಿಯೊಬ್ಬರು ಆಹಾರ ಮತ್ತು ನೀರನ್ನು ನೀಡುವುದರ ಮೂಲಕ ಅವುಗಳನ್ನು ಕಾಪಾಡಬೇಕು ಎಂದರು.

ಸುಮಾರು 100 ಅರವಟಿಕೆ ಮೂಲಕ ಪಕ್ಷಿಗಳಿಗೆ ನೀರು ಒದಗಿಸುವುದಕ್ಕೆ ಗಿಡಗಳಿಗೆ ಕಟ್ಟಿ ನೀರನ್ನು ಕುಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕ ಎಮ್. ಹೆಚ್. ಆಶೇಖಾನ್, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತ ಪಾಟೀಲ್, ಶಾಮ ಬಿದರಿ ಹಾಗೂ ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಹಾಗೂ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿ ಅರವಟಿಕೆಗಳನ್ನು ಕಟ್ಟಿದರು.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...