ಕಲಬುರಗಿ: ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ 33/11 ಅಂಕಲಗಾ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಾಹಕ ಬದಲಾವಣೆ ಕಾರ್ಯಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ 33ಕೆ.ವಿ ಅಂಕಲಗಾ ಲೈನ್ 110ಕೆ.ವಿ. ಚೌಡಾಪೂರ್ ಎಮ್‍ಯುಎಸ್‍ಎಸ್ ದಿಂದ 33/11ಕೆ.ವಿ. ಅಂಕಲಗಾ ಎಮ್‍ಯುಎಸ್‍ಎಸ್‍ವರೆಗೆ ಜೇವರ್ಗಿ ತಾಲೂಕಿನ ಈ ಕೆಳಕಂಡ ವಿತರಣಾ ಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಇದೇ ಮೇ 7 ರಿಂದ 21 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಜೇವರ್ಗಿ ಉಪವಿಭಾಗದ 33/11 ಕೆ.ವಿ. ಅಂಕಲಗಾ ವಿದ್ಯುತ್ ವಿತರಣಾ ಕೇಂದ್ರ: ಜೇವರ್ಗಿ ತಾಲೂಕಿನ ಇಟಗಾ, ಹೂಲ್ಲುರ, ಬಳುಂಡಗಿ, ಬೇಲೂರ್, ಬೊಸಗಾ (ಕೆ), ಬೊಸಗಾ (ಬಿ), ಮೊಗನಟಗಾ, ಹರನಾಳ(ಕೆ), ಸಿದನಾಳ, ನಾರಾಯಣಪುರ್, ಎಲ್‍ಐಎಸ್, ಹಂಚಿನಾಳ ಹಾಗೂ ಅಂಕಲಗಾ.