ಕಲಬುರಗಿ: ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ಪಿ ಮತ್ತು ಜೆ.ಎಂ ಬೊಹ್ರಾ ಮಹಾವಿದ್ಯಾಲಯ ಸುರಪುರದ ಪ್ರಾಚಾರ್ಯರಾದ ಡಾ.ಎಂ.ಡಿ.ವಾರೀಸ್ ಅವರನ್ನು ನಾಮ ನಿರ್ದೇಶಿಸಿ ಆದೇಶಿಸಲಾಗಿದೆ.
ಡಾ.ಎಂ.ವಾರೀಸ್ ಅವರನ್ನು ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಕುಲಪತಿಗಳು ಎರಡು ವರ್ಷಗಳ ಅವಧಿಗೆ ಈ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನೂ, ವಿವಿಗೆ ನಾಮನಿರ್ದೇಶನಗೊಂಡ ಡಾ.ಎಂ.ಡಿ ವಾರಿಸ್ ಅವರಿಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ ಪಾಟೀಲ್ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.