ಮೇ.20ಕ್ಕೆ ‘ಪಾಶ’ ಕಿರುಚಿತ್ರದ ಟ್ರೈಲರ್ ಬಿಡುಗಡೆ!

Date:

Share post:

ಒಂಬತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಟ್ಟ ‘ಪಾಶ’ ಚಿತ್ರ ಇದೇ ತಿಂಗಳು 20 ರಂದು 11:15 ನಿಮಿಷಕ್ಕೆ ಈ ಕಿರುಚಿತ್ರದ ಅಧಿಕೃತ ಟ್ರೈಲರ್ ಎ ಟು ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಗುತ್ತಿದೆ ಎಂದು ಕಿರುಚಿತ್ರದ ನಿರ್ದೇಶಕರಾದ ಲಕ್ಷ್ಮೀಕಾಂತ ಜೋಶಿ ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಚಿತ್ರ ಕಲಬುರಗಿ ಜಿಲ್ಲೆಗೆ ಪ್ರಪ್ರ ಥಮವಾಗಿ ಒಂಭತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಟ್ಟ ಹೆಗ್ಗಳಿಕೆಯಿದೆ. ಈ ಚಿತ್ರಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ ಜನಪ್ರಿಯ ಸಾಹಿತಿಗಳಾದ “ಜೋಗಿ” ಅವರ ಲೈಫ್ ಇಸ್ ಬ್ಯುಟಿಫುಲ್ ಪುಸ್ತಕದ ಒಂದು ಕಥೆ ಈ ಕಿರುಚಿತ್ರಕ್ಕೆ ಮೂಲಧಾರವಾಗಿದೆ ಎಂದರು.

ಪಾಶ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು

ಗಧಾಗ್ರಜ ಫಿಲಂಸ್ ನ ಅಡಿಯಲ್ಲಿ ಈ ಕಿರುಚಿತ್ರ ನಿರ್ಮಾಣಗೊಂಡಿದ್ದು. ತಮ್ಮ ನಿರ್ದೇಶನದಲ್ಲಿ ಚೊಚ್ಚಲ ಕಿರುಚಿತ್ರವಾಗಿದೆ. ಈ ಚಿತ್ರದ ಮುಖ್ಯಪಾತ್ರದಲ್ಲಿ ಕಿರುತೆರೆಯ ( ಮುಕ್ತ ಮುಕ್ತ , ಮಹಾಸತಿ, ಗಂಗಾ ಧಾರಾವಾಹಿ ಖ್ಯಾತಿಯ ) ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದರೆ, ಕಲರ್ಸ್ ಕನ್ನಡ ವಾಹಿನಿಯ , ಕಾಮಿಡಿ ಕಂಪನಿ ಖ್ಯಾತಿಯ ಸೋಮಶಂಕರ್ ಬಿರಾದಾರ ಅವರು ಪ್ರಮುಖ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ. ರಂಗಾಯಣ ಕಲಾವಿದರಾದ ಉಮೇಶ್ ಪಾಟೀಲ್ , ಶ್ರೀನಿವಾಸ ದೋರನಳ್ಳಿ , ಕೌಶಿಕ್ ಕುಲಕರ್ಣಿ , ಪ್ರದೀಪ ಬೆಳಮಗಿ , ರಿಷಿಕೇಶ ಕುಲಕರ್ಣಿ , ನೀಲಾಂಬಿಕಾ , ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಕುಮಾರಿ ಸ್ಪೂರ್ತಿ ಅಥಣಿ , ಸ್ನೇಹ , ಕಾವ್ಯ , ವೈಷ್ಣವಿ ಬಾಲ ಕಲಾವಿದೆಯರಾಗಿ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪಾಶ ಚಿತ್ರದ ಪೋಸ್ಟರ್

ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೋಮಶಂಕರ್ ಬಿರಾದಾರ , ಸಹಾಯಕ ನಿರ್ದೇಶಕರಾಗಿ ಅಂಬರೀಶ್ ಮರಾಠಾ ಕಾರ್ಯ ನಿರ್ವಹಿಸಿದ್ದಾರೆ. ಛಾಯಾಗ್ರಾಹಕರಾಗಿ ರಾಘು ಮರೆನೂರ , ಸಂಕಲನ ಓಂಕಾರ ಮತ್ತು ಭಾಗ್ಯೇಶ್ ಪಾಟೀಲ್ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೂ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ ಸುಚೀನ್ ಶರ್ಮಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ ಎಂದು ತಿಳಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....