ಕಲಬುರಗಿ: ಕಳೆದ ಕೆಲವು ದಿನಗಳಿಂದ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿಯಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತದೆ ಎಂದು ಅಂದುಕೊಳ್ಳುವಂಥದ್ದು ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ಕರ್ನಾಟಕ ರಾಜ್ಯ ವಕ್ತಾರರಾದ ಡಾ. ಸುಧಾ ಹಾಲಕಾಯಿ ಹೇಳಿದ್ದಾರೆ.
ಬಂಡವಾಳ ಹರಿದು ಬರುವಂಥದ್ದು- ಆ ಪ್ರದೇಶದಲ್ಲಿ ಇರುವಂತಹ ಮಾನವ ಸಂಪನ್ಮೂಲ, ವಾತಾವರಣ, ಉದ್ಯೋಗಕ್ಕೆ ಮತ್ತು ಉದ್ಯಮಕ್ಕೆ ಅಗತ್ಯವಿರುವಂತಹ ಪರಿಸರ, ಸರಕಾರದ ಪ್ರೋತ್ಸಾಹ- ಈ ನಾಲ್ಕು ಸಂಗತಿಗಳನ್ನು ಆಧರಿಸಿ ರಾಜ್ಯಕ್ಕೆ ಬಂಡವಾಳ ಹರಿದು ಬರುವುದು ಸಹಜ. ಆದರೆ ಇಲ್ಲಿ ಕರ್ನಾಟಕದ ಇವತ್ತಿನ ಪರಿಸ್ಥಿತಿಯಲ್ಲಿ- ಅಂದರೆ ಒಂದು ಭ್ರಷ್ಟ ಸರಕಾರ, ಪ್ರತಿಯೊಂದರಲ್ಲೂ ಲಂಚ, ಕಮಿಷನ್ ಇಲ್ಲದೆ ಯಾವುದೇ ಕಾರ್ಯ ನಡೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ತನ್ನನ್ನು ತಾನೇ ಸರ್ವಜ್ಞ ಎಂದು ಭಾವಿಸಿಕೊಂಡಿರುವ ಪ್ರಿಯಾಂಕ್ ಖರ್ಗೆಯವರು, ಅವರ ಪಕ್ಷದೊಳಗಿನ ಸತ್ಯವನ್ನು ಅನಾವರಣ ಮಾಡಿದರೆ, ಭ್ರಷ್ಟಾಚಾರ ವ್ಯಾಪಕತೆಯ ಬಗ್ಗೆ ಹಿರಿಯರಾದ ಬಿ.ಆರ್. ಪಾಟೀಲರು, ಅಲ್ಲಮ ಪ್ರಭು ಅವರು, ರಾಜು ಕಾಗೆ ಮತ್ತು ಮಿಕ್ಕೆಲ್ಲಾ ಶಾಸಕರು- ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.