ತನ್ನ ಮಗಳಿಗೆ ಮದ್ವೆಯಾದ್ರೆ, ಬ್ಲ್ಯಾಂಕ್ ಚೆಕ್ ನೀಡುವೆ ಎಂದ ಅಪ್ಪ.. ಬಿಗ್ ಆಫರ್!

Date:

Share post:

ಸೋಷಿಯಲ್ ಮೀಡಿಯಾಗಳಲ್ಲಿ ದಿನನಿತ್ಯವೂ ಸಾಕಷ್ಟು ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಲ್ಲೊಂದು ವಿಡಿಯೋದಲ್ಲಿ ವರನಿಗೆ ಬಿಗ್ ಆಫರ್ ನೀಡಲಾಗಿದೆ.

‘ತನ್ನ ಮಗಳನ್ನು ಒಂದು ವಾರದೊಳಗೆ ಮದುವೆಯಾಗಲು ಮುಂದೆ ಬರುವ ವರನಿಗೆ ಬ್ಲ್ಯಾಂಕ್ ಚೆಕ್ ನೀಡುವೆ’ ಎಂದು ವ್ಯಕ್ತಿಯೊಬ್ಬ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ತಂದೆ ತನ್ನ ಮಗಳೊಂದಿಗೆ ಥಾರ್ ಜೀಪ್​​ ಮುಂದೆ ನಿಂತುಕೊಂಡು ವಿಡಿಯೋ ಮಾಡಿದ್ದಾನೆ. ಆದರೆ ಈ ವಿಡಿಯೋ ನಕಲಿಯೋ ಅಸಲಿಯೋ ಈವರೆಗೂ ತಿಳಿದುಬಂದಿಲ್ಲ.

ತಂದೆಯ ಒಂದು ಕೈಯಲ್ಲಿ ಚೆಕ್ ಬುಕ್ ಇದೆ. “ನನ್ನ ಮಗಳನ್ನು ಮದುವೆಯಾಗಲು ವರ ಬೇಕಾಗಿದ್ದಾನೆ. ಒಂದೇ ವಾರದೊಳಗಾಗಿ ನನ್ನ ಮಗಳನ್ನು ಮದುವೆಯಾಗಬೇಕು ಎಂದಿದ್ದಾನೆ. ಅದರ ಪ್ರಯಾರ್ಥವಾಗಿ ಆತನಿಗೆ ಬ್ಲ್ಯಾಂಕ್ ಚೆಕ್ ನೀಡುವೆ, ಎಷ್ಟಾದರೂ ಹಣ ಬರೆದುಕೊಳ್ಳಬಹುದು ಎಂದು ಹೇಳಿದ್ದಾನೆ.

@shadi_karne_wali_girls ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಾ.18ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಗೆ ಲಕ್ಷಾಂತರ ವೀವ್ಸ್ ಕೂಡ ಬರುತ್ತಿವೆ. ಸದ್ಯ ಈ ವಿಡಿಯೋ ಹರಿಯಾಣ ವ್ಯಾಪ್ತಿಯದ್ದು ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಓದಿ:

>  ನಾಡಿನ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಇನ್ನಿಲ್ಲ!

> ಬಿಗ್​ಬಾಸ್ ವಿನ್ನರ್ ಮುನಾವರ್ ಫಾರೂಖಿಯನ್ನು ಪೊಲೀಸರು ಬಂಧಿಸಿದ್ದೇಕೆ?

ಈ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆ ಇದೊಂದು ನಕಲಿ ವಿಡಿಯೋ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಹಲವಾರು ತಮ್ಮ ಗೆಳೆಯರ ಹೆಸರುಗಳನ್ನೂ ಕಾಮೆಂಟ್ ಮಾಡುತ್ತಿದ್ದಾರೆ.

> ಆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

Share post:

spot_imgspot_img

Popular

More like this
Related

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...

ಕಲಬುರಗಿ| ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹತ್ಯೆಗೈದು ನದಿಗೆ ಎಸೆದಿದ್ದ ಮೂವರ ಆರೋಪಿಗಳ ಬಂಧನ: ಪೊಲೀಸ್ ಕಮಿಷನರ್

ಕಲಬುರಗಿ: ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಸ್ಟೇಶನ್ ಬಜಾರ್ ಪೊಲೀಸರು, ಕ್ಷೀಪ್ರ...