ಕಲಬುರಗಿ| 5.55 ಲಕ್ಷ ಮೌಲ್ಯದ ಗಾಂಜಾ ಜಪ್ತಿ; 6 ಮಂದಿ ಬಂಧನ

Date:

Share post:

ಕಲಬುರಗಿ: ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿ, ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿ ಅವರ ಬಳಿ 5,55,000(5.55ಲಕ್ಷ) ಮೌಲ್ಯದ 6 ಕೆಜಿ 34 ಗ್ರಾಂ ನಿಷೇಧಿತ ಗಾಂಜಾ ಹಾಗೂ 2,300 ನಗದು ಹಣ ವಶಪಡಿಸಿಕೊಳ್ಳುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಹೀರಪೂರ ನಿವಾಸಿ ಜೈಭಿಮ್ ಮಲ್ಲಿಕಾರ್ಜುನ್ ಬಂಡನಾಕಾರ್(35), ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯಾದುಲ್ಲಾ ಕಾಲೋನಿಯ ನದೀಮ್ ಪಾಶಾ(30) ಮತ್ತು ಯಾದುಲ್ಲಾ ಕಾಲೋನಿಯ ಮುಹಮ್ಮದ್ ಇರ್ಷಾದ್ (24), ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಜಾದಪುರ ರಸ್ತೆಯ ನಿವಾಸಿ ಅಬು ಶೇಖ್(30) ಮತ್ತು ಬಷೀರ್ ಖಾನ್(25), ಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೇಖ್ ರೋಜಾ ಪ್ರದೇಶದ ಮೊಹಮ್ಮದ್ ಚಾಂದ್ ಭಗವಾನ್(24) ಎಂಬಾತರೆ ಬಂಧಿತ ಆರೋಪಿಗಳಾಗಿದ್ದು, ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದರಿ ದಾಳಿಯನ್ನು ಯಶಸ್ವಿಯಾಗಿ ಕೈಗೊಂಡಿರುವ ಪೊಲೀಸ್ ಅಧಿಕಾರಿ, ಸಿಬ್ಬದಿಂದಿಯವರನ್ನು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ಶ್ಲಾಘಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Share post:

spot_imgspot_img

Popular

More like this
Related

ಕಲಬುರಗಿ| ಕಾರಾಗೃಹದ ಕೈದಿಗಳಿಗೆ ಯೋಗ ತರಬೇತಿ

ಕಲಬುರಗಿ: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಒಂದು ಭೂಮಿ, ಒಂದು...

ಕಲಬುರಗಿ| ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಾದ ತೊಗರಿ, ಹೆಸರು, ಉದ್ದು,...

ಕಲಬುರಗಿ| 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಸ್.ಡಿ.ಎ 

ಕಲಬುರಗಿ: ಸಿ.ಸಿ ರೋಡ್ ಕಾಮಗಾರಿ ಮಾಡಿರುವುದರ ಬಗ್ಗೆ ಅನುಮತಿ ಪತ್ರ ಕೊಡುವುದಕ್ಕಾಗಿ...

ಕಲಬುರಗಿ| ತಂಬಾಕು ನಿಯಂತ್ರಣ ಕಾಯ್ದೆ-2003ರ ಕುರಿತು ಅರಿವು ಕಾರ್ಯಕ್ರಮ

ಕಲಬುರಗಿ: ಕಲಬುರಗಿ ಜೇವರ್ಗಿ ಕಾಲೋನಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ...