ಕಲಬುರಗಿ: ಹಾಸನ್- ಸೋಲಾಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ದಟ್ಟವಾಗಿ ಹೊಗೆ ಕಾಯಿಸಿಕೊಂಡಿರುವ ಘಟನೆ ಶಹಬಾದ್ ತಾಲೂಕಿನ ಮರತೂರ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ರೈಲು ಸಂಖ್ಯೆ.11312 ಹೊಂದಿರುವ ಹಾಸನ್- ಸೋಲಾಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದೆ, ತಕ್ಷಣ ಪಾಯಿಂಟ್ ಮ್ಯಾನ್ ಗಮನಿಸಿ ರೆಡ್ (ಕೆಂಪು) ಹ್ಯಾಂಡ್ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಿದ್ದಾರೆ.
ರೈಲಿನಲ್ಲಿ ದಟ್ಟ ಹೊಗೆ ಹಿನ್ನಲೆ, ಆತಂಕದಿಂದ ಎಲ್ಲ ಪ್ರಯಾಣಿಕರು ರೈಲಿನಿಂದ ಕೆಳಗಿಳಿಸಿದ್ದಾರೆ. ಬ್ರೇಕ್ ಬೈಡಿಂಗ್ ದೋಷ ಸರಿಪಡಿಸಿದ ಬಳಿಕ ರೈಲು ಮತ್ತೆ ಸಂಚರಿಸಿದೆ ಎಂದು ತಿಳಿದುಬಂದಿದೆ.
ಕೋಚ್ ಸಂಖ್ಯೆ CR 227454 LS-5 ಎಂಜಿನ್ ನಿಂದ 4 ನೇ ಕೋಚ್‌ನಲ್ಲಿ ಬ್ರೇಕ್ ಬೈಂಡಿಂಗ್ ಕಾಣಿಸಿಕೊಂಡಿತ್ತು.