ಕಲಬುರಗಿ| ‘ಹಸಿರು ಕಲಬುರಗಿ’ ನಿರ್ಮಾಣಕ್ಕೆ ಪಣ: ಸಚಿವ ಪ್ರಿಯಾಂಕ್ ಖರ್ಗೆ

Date:

Share post:

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಹಸಿರು ಹೆಜ್ಜೆ’ ಕಾರ್ಯಕ್ರಮದ ಅಡಿಯಲ್ಲಿ ಸಸಿಗಳ ನೆಡುವ ಮೂಲಕ ಎಲ್ಲೆಡೆ ಹಸಿರು ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಹಸಿರುಪಥ, ಕಲ್ಯಾಣ ಪಥ ಹಾಗೂ ಪ್ರಗತಿಪಥ ಕಾರ್ಯಕ್ರಮಗಳ ಮೂಲಕ ಸಸಿ ನೆಡುವುದು, ಕಲ್ಯಾಣ ಕರ್ನಾಟಕ ಭಾಗದ ಹಾಗೂ ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳ ಹಾಗೂ ಮೂಲಭೂತ ಅಭಿವೃದ್ದಿಗೆ ಕ್ರಮವಹಿಸಲಾಗುತ್ತಿದೆ.‌ ಐದು ಹಂತದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ, ಗ್ರಾಮೀಣಾಭಿವೃದ್ಧಿ ಹಾಗೂ‌‌ ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ, ಕಲಬುರಗಿ ನಗರ ಅಭಿವೃದ್ಧಿ ಪ್ರಾಧಿಕಾರ, ಕಲಬುರಗಿ ‌ಮಹಾನಗರ ಪಾಲಿಕೆ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳು ಕೈಜೋಡಿಸಲಿವೆ ಎಂದರು.

ರಾಜ್ಯದಲ್ಲಿ ಶೇ. 22% ಹಾಗೂ ಕಲ್ಯಾಣ ಕರ್ನಾಟಕ ಭಾಗದದಲ್ಲಿ ಶೇ 2% ಅರಣ್ಯ ಪ್ರದೇಶವಿದೆ. ಅದಕ್ಕಾಗಿ ಅರಣ್ಯ ಇಲಾಖೆ ವತಿಯಿಂದ ಹೆಚ್ಚು ಅರಣ್ಯೀಕರಣ ಮಾಡಲು ಸಸಿ ನೆಡುವ ‘ಹಸಿರು‌ಹೆಜ್ಜೆ’ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಯಲ್ಲಿ ನಾಳೆ ಉದ್ಘಾಟಿಸಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿರಲಿದ್ದಾರೆ.

ವನಮಹೋತ್ಸವ ಯೋಜನೆಯಡಿಯಲ್ಲಿ ಕಕಭಾಗದಲ್ಲಿ ಸುಮಾರು ರೂ 53.55 ಕೋಟಿ‌ ವೆಚ್ಚದಲ್ಲಿ ಅಂದಾಜು 1,848 ಕಿಮಿ ಉದ್ದ ರಸ್ತೆಯಡಿಯಲ್ಲಿ ಸುಮಾರು 9,000 ಹೆಕ್ಟೇರ ಪ್ರದೇಶ ವ್ಯಾಪ್ತಿಯಲ್ಲಿ ಸಸಿ‌ ನೆಡಲಾಗುವುದು ಎಂದರು.

ಹಸಿರು ಪಥ, ಮನೆಗೊಂದು ಮರ, ಪ್ರಗತಿಪಥ, ಉದ್ಯಾನವನಗಳ ಹಾಗೂ ಕೆರೆಗಳ ಪುನರುಜ್ಜೀವನ ಎಂಬ ಪಂಚ ಹಂತಗಳ ಮೂಲಕ ಹಸಿರು ಹೆಜ್ಜೆ:

‘ ಹಸಿರುಪಥ ‘ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ನರೇಗಾ ಯೋಜನೆಯಡಿಯಲ್ಲಿ ಸುಮಾರು 5,000 ಕಿಮಿ ರಸ್ತೆ ಬದಿ ಸಸಿ ನೆಡಲಾಗುವುದು. ಈ ಬಗ್ಗೆ ಆ್ಯಪ್ ಕೂಡಾ ಮಾಡಲಾಗಿದ್ದು, ಜಿಯೋ ಟ್ಯಾಗ್ ಮತ್ತು ಟ್ರ್ಯಾಕಿಂಗ್ ಕೂಡಾ ಮಾಡಲಾಗುತ್ತಿದೆ. ನಂತರ ಸ್ಯಾಟಲೈಟ್ ಮೂಲಕ ನೆಟ್ಟಿದ ಗಿಡಗಳ ಚಿತ್ರಣವನ್ನು ವೀಕ್ಷಿಸಬಹುದು ಎಂದರು.

ಕಲಬುರಗಿ ನಗರದಲ್ಲಿ ‘ ಮನಗೊಂದು ಮರ ‘ ಯೋಜನೆಯಡಿಯಲ್ಲಿ ರೂ 60 ಲಕ್ಷ ವೆಚ್ಚದಲ್ಲಿ 37,100 ಸಸಿಗಳನ್ನು ಮನಮನೆಗಳಿಗೆ ವಿತರಿಸಲಾಗುತ್ತಿದೆ ಎಂದರು.

‘ ಪ್ರಗತಿಪಥ’ ಯೋಜನೆಯಡಿಯಲ್ಲಿ ಸುಮಾರು 8,150 ಕಿಮೀ ಉದ್ದದ ರಾಜ್ಯದಲ್ಲಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಅಂದಾಜು ರೂ 7,000 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಸುಮಾರು ರೂ 5,000 ವೆಚ್ಚದಲ್ಲಿ ಕಕ ಭಾಗದ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.

ಕಲಬುರಗಿ ನಗರದ 30 ಉದ್ಯಾನವನ ಪುನರುಜ್ಜೀವನ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದ ಸಚಿವರು,‌ ಕೆಕೆಆರ್ ಡಿಬಿ, ಮಹಾನಗರ ಪಾಲಿಕೆ ಹಾಗೂ ಕೂಡಾ ಜಂಟಿಯಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮದಡಿಯಲ್ಲಿ ರೂ 38.03 ಕೋಟಿ ವೆಚ್ಚದಲ್ಲಿ ನಗರದ ಕೆರೆಗಳ ಹಾಗೂ ಕಲ್ಯಾಣಿಗಳ ಪುನರುಜ್ಜೀವನ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ರೂ 3 ಕೋಟಿ ವೆಚ್ಚದಲ್ಲಿ ಅಪ್ಪನ ಕೆರೆ ಅಭಿವೃದ್ದಿ, ರೂ 5 ಕೋಟಿ ವೆಚ್ಚದಲ್ಲಿ ಖಾಜಾ‌ಕೋಟನೂರು ಕೆರೆ, ರೂ 10 ಕೋಟಿ ವೆಚ್ಚದಲ್ಲಿ ಕಪನೂರಿನ ಕಲ್ಯಾಣಿ ಅಭಿವೃದ್ದಿ, ರೂ 19 ಕೋಟಿ ವೆಚ್ಚದಲ್ಲಿ ಬಹಮನಿ‌ ಕೋಟೆ ಅಭಿವೃದ್ದಿ ಹಾಗೂ ಪ್ರವಾಸಿ ತಾಣ ನಿರ್ಮಾಣ ಮಾಡುವುದು ಈ ಯೋಜನೆಯಲ್ಲಿ ಸೇರಿವೆ. ಜೊತೆಗೆ ರೂ 30 ಕೋಟಿ ವೆಚ್ಚದಲ್ಲಿ ಕಲಬುರಗಿ ನಗರದ 25 ಜಂಕ್ಷನ್ ಗಳನ್ನು ಹಾಗೂ ಸರ್ಕಲ್ ಗಳನ್ನು ರೂ 30 ಕೋಟಿ ವೆಚ್ಚದಲ್ಲಿ ನಿರ್ಮಾಣ‌ ಮಾಡಲಾಗುತ್ತಿದೆ ಎಂದರು.

 

ಕೇವಲ‌ ಸಸಿಗಳನ್ನು ನೆಡುವುದು ಮಾತ್ರವಲ್ಲ ಅವುಗಳ ಪೋಷಣೆ ಹಾಗೂ ಸಂರಕ್ಷಣೆ ಮಾಡಲು ಕೂಡಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ಹಸಿರು ಕಲಬುರಗಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ್, ಮಝಹರ್ ಖಾನ್ ಆಲಂ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿ ಇ ಒ ಭಾಂವರ್ ಸಿಂಗ್ ಮೀನಾ, ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಸೇರಿದಂತೆ ಮತ್ತಿತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...