ಕಲಬುರಗಿ: ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ನಗರದ ಕೆಸರಟಗಿ ಸಾರ್ವಜನಿಕರ ಪರವಾಗಿ ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ ಸ್ಲಂ ಬೋರ್ಡ್ ಕಚೇರಿ ಎದುರು ಫಲಾನುಭವಿಗಳ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಇಲ್ಲಿನ ಹೊರವಲಯದ ಕೆಸರಟಗಿಯ ಸರ್ವೆ ನಂಬರ್ 27 ಹಾಗೂ 28ರ ಅಂಬೇಡ್ಕರ್ ಅವಾಸ್ ಯೋಜನೆ ಅಡಿಯಲ್ಲಿ ಮಂಜುರಾದ 52 ಮನೆಗಳನ್ನು ಹಕ್ಕುಪತ್ರ ಕೊಡುವಂತೆ ಒತ್ತಾಯಿಸಿ ಎರಡು ದಿನಗಳಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದು, 15 ವರ್ಷಗಳಿಂದ ವಾಸವಾಗಿದ್ದೇವೆ. ಅಧಿಕಾರಿಗಳು ಈವರೆಗೂ ಹಕ್ಕು ಪತ್ರ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಹಕ್ಕು ಪತ್ರ ನೀಡುವವರಿಗೆ ಹೋರಾಟ ಕೈಬೀಡೆವು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್, ಮಹಾನಾಯಕ ಬಿಗೇಡ್ ರಾಜ್ಯ ಅಧ್ಯಕ್ಷ ಗುಂಡೇಶ್ ಹಾಗೂ ಮುತ್ತಣ್ಣ ಬಚನ್ ಸೇರಿದಂತೆ ಆಶ್ರಯ ವಂಚಿತ ಫಲಾನುಭವಿಗಳು ಭಾಗವಹಿಸಿದ್ದರು.