ಕಲಬುರಗಿ| ಸುಲೇಪೇಟ ಗ್ರಾಮದಲ್ಲಿ ಬಾಬೂಜಿ ಮೂರ್ತಿ ಸ್ಥಾಪನೆ: ಡಾ. ಶರಣಪ್ರಕಾಶ ಪಾಟೀಲ ಭರವಸೆ

Date:

Share post:

ಕಲಬುರಗಿ: ಸುಲೇಪೇಟ ಗ್ರಾಮದಲ್ಲಿ ಡಾ.ಬಾಬು ಜಗಜೀವನ ರಾಮ್ ಅವರ ಮೂರ್ತಿಯನ್ನು ಬರುವ ದಿನಗಳಲ್ಲಿ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು.

ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಎಸ್ಟಿ ಭವನದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಲೇಪೇಟ ಗ್ರಾಮದ ಮಾದಿಗ ಸಮಾಜದ ಮುಖಂಡರು ಗ್ರಾಮದಲ್ಲಿ ಒಂದು ಭವನ ಮತ್ತು ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ, ಬರುವ ದಿನಗಳಲ್ಲಿ ಅವರ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.

ನನ್ನ ಮತಕ್ಷೇತ್ರದಲ್ಲಿ ಯಾವುದೇ ಸಮಾಜದ ಮೇಲೆ ದೌರ್ಜನ್ಯ ನಡದಿಲ್ಲ, ನಾನು ಯಾವಾಗಲೂ ಜಾತಿ ಮತ ಪಕ್ಷ ಮಾಡಿಲ್ಲ ನಾನು ಮಾಡಲ್ಲ ನಮ್ಮ ಸರಕಾರ ಕೂಡ ಮಾಡಲ್ಲ, ನಾನು ಬಸವಣ್ಣ ತತ್ವ ಆದರ್ಶ ಮೇಲೆ ನಡೆಯುತ್ತೇನೆ, ಬಸವಣ್ಣ ಅವರ ಹಾಕಿದ ತಳಹಾದಿ ಮೇಲೆ ನಡೆಯುವ ನಮ್ಮ ಸರಕಾರ ಇದೆ. ಬಾಬೂಜಿ ಅವರು ಭಾರತ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಅವರು ತಮಗಾಗಿ ಬೆಳೆಯದೆ ಸಮಾಜಕ್ಕಾಗಿ ಹೋರಾಟ ಮಾಡಿ ನಮಗೆ ಪ್ರೇರಣೆ ನೀಡಿದ್ದಾರೆ ಅವರ ತತ್ವ ಆದಾರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳಬೇಕು ಎಂದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ ಮಾತನಾಡಿ, ಭಾರತದ ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡಿ, ಕೃಷಿಯನ್ನು ಉನ್ನತೀಕರಣ ಸೃಷ್ಟಿಸಿದ ಡಾ. ಬಾಬು ಜಗಜೀವನರಾಂ ಅವರು ಹಸಿರು ಕಾಂತ್ರಿಯ ಹರಿಕಾರರು ಭಾರತ ದೇಶಕ್ಕೆ ಅವರ ಕೊಡಗುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಡಾ ಅವಿನಾಶ್ ಜಾಧವ , ಬಾಲರಾಜ ಗುತ್ತೇದಾರ್, ಗೋಪಾಲರಾವ ಕಟ್ಟಿಮನಿ ಮಾತನಾಡಿದರು.

ದೋಡೇಂದ್ರ ಸ್ವಾಮಿಗಳು, ಜಯಂತಿ ಸಮಿತಿಯ ಅಧ್ಯಕ್ಷ ವಿನೋದ ಕುಮಾರ್, ಗೋಪಾಲರಾವ ಕಟ್ಟಿಮನಿ, ಮಹಾರುದ್ರಪ್ಪ ದೇಸಾಯಿ, ಬಸವರಾಜ ಸಜ್ಜನ, ತಾಹೇರ ಪಟೇಲ, ಅತೀಷ ಪವಾರ, ಮೇಘರಾಜ ರಾಠೋಡ್, ಮಸ್ತಾನ ಅಲಿ ಪಟ್ಟೆದ್ದಾರ, ಬಸವರಾಜ ಬಿರಾದಾರ, ಚಾಂದಪಾಶಾ ಮೋಮಿನ, ಆನಂದ ಟೈಗರ್, ರೇವಣಸಿದ್ದಪ್ಪ ಅಣಕಲ್, ಸಂತೋಷ ರಾಠೋಡ್, ಶಿವಕುಮಾರ್ ಕೊತ್ತಪೇಟ, ಬಾಬಣ್ಣ ಗುಲಗುಂಜಿ, ವಿಜಯಕುಮಾರ್ ಕೋರಡಂಪಳ್ಳಿ, ಸಂಪತ ಬೆಳ್ಳಿಚುಕ್ಕಿ, ಸುನೀಲ ಸಲಗಾರ್, ಅಮರೇಶ ಗೋಣಿ,ನಸೀರ ಹುಸ್ಸೇನ್ ಮದರಗಿ, ರಾಜಕ ಪಟೇಲ್, ಶಿವಕುಮಾರ್ ಸಜ್ಜನ , ಸುನೀಲ ಕಪೂರ್, ಆಕಾಶ ಕೊಳ್ಳೂರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜ್ಞಾನಕ್ಕೆ ಸಮಾನವಾದುದ್ದು ಮತ್ತೊಂದಿಲ್ಲ: ಎನ್.ಎಂ.ಬಿರಾದಾರ

ಕಲಬುರಗಿ: ಜಗತ್ತಿನಲ್ಲಿ ಜ್ಞಾನಕ್ಕಿರುವುಷ್ಟು ಬೆಲೆ ಬೇರೆ ಯಾವ ವಸ್ತುವಿಗೂ ಇಲ್ಲ ಎಂದು...

ಕಲಬುರಗಿ| ದಂತ ವೈದ್ಯಕೀಯ ಕ್ಷೇತ್ರವು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆದಿದೆ: ಡಾ. ಶಿವಶರಣ ಕೆ.

ಕಲಬುರಗಿ: ಇತ್ತಿಚಿನ ದಿನಗಳಲ್ಲಿ ದಂತವೈದ್ಯಶಾಸ್ತ್ರವು ಹೆಚ್ಚು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆಯುತ್ತಿದೆ, ಹಾಗಾಗಿ...

ಕಲಬುರಗಿ| ಯುಪಿಎಸ್ಸಿ, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ತರಬೇತಿಗೆ ಅರ್ಜಿ ಆಹ್ವಾನ

ಕಲಬುರಗಿ: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 2025-26ನೇ ಸಾಲಿಗೆ ಯುಪಿಎಸ್ಸಿ, ಕೆಎಎಸ್ ಸೇರಿದಂತೆ ವಿವಿಧ...

ಬೀದರ್| ಭಿಕ್ಷಾಟನೆ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸಹಕರಿಸಿ : ಡಿ.ಸಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯ ಸಾರ್ವಜನಿಕರು ಭಿಕ್ಷೆ ಬೇಡುತ್ತಿರುವುದು ಕಂಡು ಬಂದರೆ ಅವರಿಗೆ...