ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಕೊಠಾರಿ ಭವನದಲ್ಲಿ ಶಿಕ್ಷಕಿ ಶಿಕ್ಷಣದ ಕಣ್ಣು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್ ನವದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಹಾಗೂ ಶ್ರೀ ಚಂದ್ರಶೇಖರ ಗುರೂಜಿಯವರ ಸ್ಮರಣಾರ್ಥ ಮತ್ತು ಸರಳ ವಾಸ್ತು 25ನೇ ವರ್ಷದ ಸಂಭ್ರಮಾಚರಣೆ ರವರ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಾರ್ಥಕ ಜೀವನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಜಿ ಪರಿವಾರ ಹುಬ್ಬಳ್ಳಿಯ ಕುಮಾರಿ ಸ್ವಾತಿ ಅಂಗಡಿ, ಶಾಸಕ ಅಲ್ಲಂಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಸಾವಿತ್ರಿಬಾಯಿ ಶಿಕ್ಷಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ವಂತ ಪಿ ಚವ್ಹಾಣ, ಸಾವಿತ್ರಿ ಶಿಕ್ಷಕರ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಸಿಜಿ ಪರಿವಾರ ಮುಂಬೈ ನಿರ್ದೇಶಕ ಸಂತೋಷ್ ಅಂಗಡಿ, ಸಿಜಿ ಪರಿವಾರ ಹುಬ್ಬಳ್ಳಿ ನಿರ್ದೇಶಕ ಸಂಜಯ್ ಅಂಗಡಿ, ಅಖಿಲ ಕರ್ನಾಟಕ ಬಂಜಾರ ಧರ್ಮಗುಳುಗಳು ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಪ್ರೇಮ್ ಸಿಂಗ್ ಚೌಹಾಣ್ ಸೇರಿದಂತೆ ಇತರರು ಪದಾಧಿಕಾರಿಗಳು ಇದ್ದರು.