ಕಲಬುರಗಿ: ‘ಸವೋನ್ನತ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ’ ಹಾಗೂ ‘ಪ್ರವಾಸಿಗರು ಕಂಡ ಬೌದ್ಧ ಸಂಸ್ಕೃತಿ’ ಗ್ರಂಥಗಳ ಲೋಕಾರ್ಪಣೆ

Date:

Share post:

ಕಲಬುರಗಿ: ಬುದ್ಧ, ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರಭಾವಿತರಾದ ದೇಶದ ಸವೋನ್ನತ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಉನ್ನತ ಸ್ಥಾನದಲ್ಲಿದ್ದು ಸಮಾಜ ಸುಧಾರಣೆಗಾಗಿ ಹೋರಾಡುತಿದ್ದಾರೆ ಎಂದು ವಿಧಾನ ಪರಿಷತ್ತ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅಭಿಪ್ರಾಯಪಟ್ಟರು.

ಪಾಲಿ ಇನಸ್ಟಿಟ್ಯೂಟ್, ನಳಂದ ಆವರಣ ಹಾಗೂ ಸಪ್ನ ಬುಕ್ ಹೌಸ್ ಬೆಂಗಳೂರು ಇವರ ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ಪ್ರೊ. ಎಚ್.ಟಿ ಪೋತೆ ಅವರ ಸವೋನ್ನತ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಪ್ರವಾಸಿಗರು ಕಂಡ ಬೌದ್ಧ ಸಂಸ್ಕೃತಿ ಗ್ರಂಥಗಳ ಲೋಕಾರ್ಪಣೆಗೊಳಿಸಿ ಮಾತನಾಡಿ ದೇವಸ್ಥಾನದ ಮುಂದೆ ಸಾಲುಗಟ್ಟ ಲ್ಲುವುದಕ್ಕಿಂತ ಗ್ರಂಥಾಲಯದ ಮುಂದೆ ಸರದಿ ನಿಂತಾಗ ಜಗತ್ತೇ ಗೌರವಿಸುತ್ತದೆ.  ಖರ್ಗೆ ಅವರ ವಿಚಾರಗಳು ಮತ್ತು ಹೋರಾಟದ ಬದುಕನ್ನು ಅರ್ಥಮಾಡಿಕೊಳ್ಳಬೇಕಿದೆ. ಖರ್ಗೆ ಅವರು 1976 ರಲ್ಲಿ ಶಿಕ್ಷಣ ಸಚಿವರಿದ್ದಾಗ 18 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇಮಕ ಮಾಡಿರುವುದು ಹಿಂದುಳಿದ ಸಮುದಾಯ ಸ್ಮರಿಸಿಕೊಳ್ಳಬೇಕು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಪ್ರೊ. ಕಾ.ವೆಂ. ಶ್ರೀನಿವಾಸ ಮೂರ್ತಿ ಎರಡು ಕೃತಿಗಳನ್ನು ಕುರಿತು ಮಾತನಾಡಿ ಪ್ರೊ. ಎಚ್.ಟಿ ಪೋತೆ ಅವರು ಖರ್ಗೆ ಅವರ ನ್ಯಾಯ, ಸ್ವಾಬಿಮಾನ ಮತ್ತು ಹೋರಾಟದ ಸಾಂಗತ್ಯಗಳನ್ನು ಬರೆದಿದ್ದಾರೆ.

ಒಬ್ಬ ಸಾಮಾನ್ಯ ವ್ಯಕ್ತಿ ಹೋರಾಟದ ಮೂಲಕ ಅತ್ಯುನ್ನತ ಸ್ಥಾನ ಪಡೆಯಲು ಹೋರಾಟಗಳ ಹಿನ್ನಲೆಗಳನ್ನು ಕಟ್ಟಿಕೊಟ್ಟಿದ್ದಾರೆ.  ಖರ್ಗೆ ಅವರ ಕುರಿತ ಕವನ, ಕಥೆ, ಕಾದಂಬರಿ ಮತ್ತು ಆತ್ಮಕಥೆಗಳಲ್ಲಿ ಖರ್ಗೆ ಅವರ ಜೀವನ ಸಾಶಧನೆಗಳನ್ನು ರಾಜ್ಯದ ವಿವಿಧ ಬರಹಗಾರರು ಅಕ್ಷರಕ್ಕಿಳಿಸಿದ್ದಾರೆ ಸಮಜಕ್ಕಾಗಿ ಮತ್ತು ಶೋಷಿತರ ಬದುಕಿಗೆ ಧ್ವನಿಯಾದವರ ಕುರಿತು ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ದಲಿತ ಕವಿ ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಪೋತೆ ಅವರ ಸೃಜನಶೀಲ ಬರಹಗಳಲ್ಲಿ ಖರ್ಗೆ ಅವರ ವ್ಯಕ್ತಿತ್ವವನ್ನು ಕಂಡರಿಸಿದ್ದಾರೆ. ಪಾಲಿ ಸಂಸ್ಥೆ, ಬುದ್ಧ ವಿಹಾರ, 371 ಜೆ ಕುರಿತು ಬರೆದಿರುವ ಲೇಖನಗಳಲ್ಲಿ ಸ್ವಾರಸ್ಯಕರ ಸಂಗತಿಗಳು ಅರಳಿವೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಪ್ರವಾಸಿಗರು ಕಂಡ ಬೌದ್ಧ ಸಂಸ್ಕೃತಿ’ ಕೃತಿಯಲ್ಲಿ ಭಾರತ ಪ್ರವಾಸ ಕೈಗೊಂಡ ವಿದೇಶಿ ಪ್ರವಾಸಿಗರು ಭಾರತ ಮತ್ತು ಬೌದ್ಧ ಸಂಸ್ಕೃತಿಯ ನೈಜ ಘಟನೆಗಳನ್ನು ದಾಖಲಿಸಿದ್ದಾರೆ.  ಬುದ್ಧ ಮತ್ತು ಬೌದ್ಧ ಧರ್ಮ ಅಧ್ಯಯನ ಮಾಡಲು ವಿದೇಶಗಳ ಅನೇಕ ಸಂತರು, ದಾರ್ಶನಿಕರು ಭಾರತಕ್ಕ ಬಂದಿದ್ದಾರೆ. ಸಮುದ್ರ, ಪರ್ವತಗಳಿದ್ದರು ಮುಕ್ತವಾಗಿ ಉತ್ತರ ದಿಕ್ಕಿಗೆ ತೆರೆದುಕೊಂಡ ಭಾರತದಲ್ಲಿ ಸುಮಾರು ವರ್ಷಗಳಿದ ಆರೋಗ್ಯಕರ ಗಾಳಿ ಬೀಸುತ್ತಿದೆ. 6 ಮುಖ್ಯ ಪ್ರವಾಸಿಗರು, 18 ಜನ ಮೈನರ್ ಪ್ರವಾಸಿಗರ ಬರಹಗಳಿವೆ. ಅಥೆನ್ಸ್ನ ಅಲೆಕ್ಸಾಡ್ರಿನಸ್, ಚೀನಾದ  ಪಾಯಿಯಾನ, ಸುಂಗ್‌ಯುನ್ ಮತ್ತು ಹ್ವು ಹಿ-ಸಾಗ್, ಹುಯೆನ್ ತ್ಸಾಂಗ್, ಇ-ತಿಂಗ್ಸ್, ಧರ್ಮಸ್ವಾಮಿಯವರ ಮುಖ್ಯ ಪ್ರವಾಸದ ಕಥೆಗಳು ಹಾಗೂ ಇತರೆ ಪ್ರವಾಸಿಗರ ಟಿಪ್ಪಣ ಗಳನ್ನು ಸರಳವಾಗಿ ಅನುವಾದಿಸಲಾಗಿದೆ ಎಂದು ಪರಿಚಯಿಸಿದರು.

ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಮಾತನಾಡಿ ಮಲ್ಲಿಕಾರ್ಜುನ ಖರ್ಗೆಯವರು ಸರಳತೆ ಮತ್ತು ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಅವರ ನಿಷ್ಠತೆ ಮತ್ತು ಬದ್ಧತೆ ಅವರನ್ನು ಉನ್ನತ ನಾಯಕನ ಪಟ್ಟದವರೆಗೂ ಬೆಳೆಸಿದೆ. ಸೇಡಂ ಪ್ರೆಸ್ ಕ್ಲಬ್ ಉದ್ಘಾಟನೆಗೆ ಬಂದಿದ್ದ ಖರ್ಗೆ ಅವರು ಪತ್ರಕರ್ತರಿಗೂ ಸಹ ಎಜುಕೇಟ್ ಮಾಡುವ ಸಾಮರ್ಥ್ಯವನ್ನು ಬಲ್ಲವರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗೆ ಅವರಿಗೆ ಅಪಾರ ಕಳಕಳಿಯಿದೆ. ಅವರ ಕುರಿತು ಕೃತಿ ಹೊರತಂದಿರುವ ಪ್ರೊ. ಹೆಚ್. ಟಿ. ಪೋತೆಯವರಿಗೆ ಕೃತಜ್ಞತೆ ಹೇಳಿದರು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ  ಬೌದ್ಧ ಸಾಹಿತ್ಯ ಕುರಿತು ಈ ಮೊದಲೇ ಇಂಗ್ಲೀಷ್, ಮರಾಠಿ, ಹಿಂದಿ, ಪ್ರೆಂಚ್, ಭಾಷೆಗಳಲ್ಲಿ ಅನುವಾದಗೊಂಡಿವೆ. ಚೈನಿ ಮತ್ತು ಟಿಬೆಟ್ ಭಾಷೆಗಳಲ್ಲಿ ಬೌದ್ಧ ಸಾಹಿತ್ಯವಿದೆ. ನಳಂದ ವಿಹಾರ ಹೇಗಿತ್ತೆಂದು ತಿಳಿಯಲು ಈ ಕೃತಿ ನೆರವಾಗಬಲ್ಲದು. ಜೀವದ ಹಂಗು ತೊರೆದು ಭಾರತಕ್ಕೆ ಪ್ರವಾಸಿಗರು ಬರುತ್ತಿದ್ದರು ಎಂಬುದಕ್ಕೆ ಪುರಾವೆಯಿದೆ. ಪ್ರೊ. ಹೆಚ್. ಟಿ. ಪೋತೆಯವರು ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಸರ್ವೋನ್ನತ ಸಾಂಸ್ಕೃತಿಕ ನಾಯಕ ಎಂಬ ಕಾದಂಬರಿ ಬರೆಯುತ್ತಿದ್ದಾರೆ. ಬೇಗ ಪ್ರಕಟಗೊಂಡು ಓದುಗರಿಗೆ ತಲುಪಲಿ ಎಂದು ಆಶಿಸಿದರು. ಸನ್ಮಾನಗಳಲ್ಲಿ ಶಾಲು ಹಾರ ಬದಲು ಪುಸ್ತಕ ನೀಡುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸುವ ಕೆಲಸವಾಗಲಿ ಎಂದರು.

ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಧನೆಗಳನ್ನು ಅಸೃಶ್ಯತೆಯನ್ನು ಅಂಟಿಸಿದರು. ದೇಶದ ಸಮಗ್ರತೆ, ಐಕ್ಯತೆಗೆ ಹೋರಾಡಿದರು. ಸಮಾನತೆಗೆ ದುಡಿದರು. ಮಹಿಳೆಯರನ್ನು ಗೌರವದಿಂದ ಕಂಡರು. ಬುದ್ಧ, ಬಸವಣ್ಣ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಮಾನತೆ, ಸಾಧನೆ, ಮಾನವತ್ವ ಗುಣಗಳ ಆದರ್ಶ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿಗಳು, ನಗರದ ನಾಗರೀಕರು ಭಾಗವಹಿಸಿದ್ದರು. ಡಾ. ಎಂ. ಬಿ. ಕಟ್ಟಿ ಸ್ವಾಗತಿಸಿದರು. ಡಾ. ಪ್ರೇಮ ಅಪಚಂದ ನಿರೂಪಿಸಿದರು.

Share post:

spot_imgspot_img

Popular

More like this
Related

ಭೀಕರ ಅಪಘಾತ| ದಂಪತಿ ಸೇರಿ ನಾಲ್ವರು ಸಾವು; ಓರ್ವ ಗಂಭೀರ ಗಾಯ

ಕಲಬುರಗಿ/ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ...

ಕಲಬುರಗಿ| ಡಾ.ಫ.ಗು. ಹಳಕಟ್ಟಿ ಅವರಿಂದ ವಚನ ಸಾಹಿತ್ಯ ಮರು ಹುಟ್ಟು: ಡಾ. ಹೂವಿನಭಾವಿ

ಕಲಬುರಗಿ: ವಚನ ಸಂಶೋಧನಾ ಪಿತಾಮಹ ಡಾ. ಫ ಗು ಹಳಕಟ್ಟಿ ಅವರ...

ಕಲಬುರಗಿ| ಜುಲೈ 7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ...

ಕಲಬುರಗಿ| ಜುಲೈ 8 ರಂದು ಮಿನಿ ಉದ್ಯೋಗ ಮೇಳ

ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜುಲೈ...