ಕಲಬುರಗಿ : ಜಿಲ್ಲೆಯ ಸಮಾಜದ ಅಂದರೆ ಕುರುಬ ಗೊಂಡ, ಕಾಡುಕುರುಬ ಜನಾಂಗದ ಬಾಲಕರ ವಸತಿ ನಿಲಯಕ್ಕೆ ಮೆಟ್ರಿಕ ನಂತರದ (ಪಿ.ಯು.ಸಿ. ಹಾಗೂ ಎಲ್ಲಾ ಪದವಿದರ) ಓದುತ್ತಿರುವ ಕೋರ್ಸಗಳ ಅರ್ಹ ವಿದ್ಯಾರ್ಥಿಗಳಿಗಾಗಿ ನಗರ ಬೀರಲಿಂಗೇಶ್ವರ ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ಆಸಕ್ತ ಅಭ್ಯರ್ಥಿಗಳಿಗಾಗಿ ಅರ್ಜಿ ಆವ್ಹಾನಿಸಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ.ಎಸ್. ಪೂಜಾರಿ ತಿಳಿಸಿದ್ದಾರೆ.
ಜೂನ್ 1 ರಿಂದ 20 ರವರೆಗೆ ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಅರ್ಜಿಗೆ ಅಂಕಪಟ್ಟಿ ಹಾಗೂ ಜಾತಿ ಪ್ರಮಾಣ ಪತ್ರ, 3 ಪೋಟೋ ಹಾಗೂ ಆಧಾರ ಕಾರ್ಡ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧ್ಯಕ್ಷ ಗುರುನಾಥ.ಎಸ್. ಪೂಜಾರಿ ನಂ. 994587128, ಮೇಲ್ವಿಚಾರಕ ಶಿವಲಿಂಗಪ್ಪ .ಎಮ್ ವಗ್ಗಿ ಸಾವಳಗಿ 9902158317, ಖಜಾಂಚಿ ರವಿಗೊಂಡ ಕಟ್ಟಿಮನಿ 9482424064, ರಾಜ್ಯ ನಿರ್ದೇಶಕರಾದ ಭಗವಂತರಾಯಗೌಡ ಪಾಟೀಲ 9972785325, ಗಣಪತಿ ಮಿಣಜಿಗಿ 9845615491 ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.