ಕಲಬುರಗಿ: ಬಿರು ಬಿಸಿಲಿನ ಬೇಸಿಗೆ ರಜೆ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮರಳುತ್ತಿದ್ದು, ಶುಕ್ರವಾರ ತಾರಫೈಲ್ ನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಲೆಗಳು, ಶಿಕ್ಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು ಇದರಲ್ಲಿ ನಾನು ಸಹ ಸಂತೋಷದಿಂದ ಪಾಲ್ಗೊಂಡೆ ಎಂದು ವಿಧಾನ ಪರಿಷತ್ ಸದಸ್ಯ ನಮೋಶಿ ಅವರು ತಿಳಿಸಿದರು.
ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳಿಗೆ ಸಿಹಿ ನೀಡಿ ಮುಂದಿನ ವಿದ್ಯಾರ್ಥಿಗಳ ಭವಿಷ್ಯದ ಜೀವನ ಉಜ್ವಲವಾಗಿರಲಿ ಎಂದು ಮುಂದಿನ ತರಗತಿಗಳಿಗೆ ಸ್ವಾಗತಿಸಿದ ಶಿಕ್ಷಕ ಸಮುದಾಯಕ್ಕೆ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಸಮಸ್ತ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.