ಕಲಬುರಗಿ: ವಿಶ್ವ ಪರಿಸರ ದಿನದ ಹಿನ್ನಲೆ ಜಿಲ್ಲಾ ವಿಜ್ಞಾನ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ 

Date:

Share post:

ಕಲಬುರಗಿ: ಜೂನ್ 5 ರಂದು ವಿಶ್ವ ಪರಿಸರ ದಿನದ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರವು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕಲಬುರ್ಗಿ ಇವರ ಸಹಯೋಗದೊಂದಿಗೆ 2025 ರ ಜೂನ್ 3 ರಿಂದ 5 ರವರೆಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ,ಚಿತ್ರಕಲೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 03 ಬೆಳಿಗ್ಗೆ 11 ಗಂಟೆಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ” ವಿಷಯ ಕುರಿತು V ರಿಂದ VII ತರಗತಿಯ ಹಾಗೂ” VIII ರಿಂದ X ತರಗತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ವಿಜ್ಞಾನ ಕೇಂದ್ರದಿಂದ A4 ಹಾಳೆಗಳನ್ನು ಒದಗಿಸುತ್ತಿದ್ದು. ವಿಧ್ಯಾರ್ಥಿಗಳು ಇತರ ಸಾಮಗ್ರಿಗಳನ್ನು ತರಬೇಕು. ಸ್ಪರ್ಧೆ ಅವಧಿ 1 ಗಂಟೆ ಇದ್ದು, ಪ್ರಬಂಧವು 150 ಪದಗಳನ್ನು ಮೀರಬಾರದು.

ಜೂನ್ 4 ರಂದು ಬೆಳಿಗ್ಗೆ 10.30 ಗಂಟೆಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ವಿಷಯ ಕುರಿತು I ರಿಂದ IV ತರಗತಿ, V ರಿಂದ VII ತರಗತಿ ಹಾಗೂ VIII ರಿಂದ X ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ.

ಅಂದು ಮಧ್ಯಾಹ್ನ 2 ಗಂಟೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ವಿಷಯ “ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ” (ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳು) ಕುರಿತು ರೀಲ್ ಮಾಡುವ ಸ್ಪರ್ಧೆ ಆಯೋಜಿಸಲಾಗಿದೆ. ರೀಲ್ ಅವಧಿ 30 ರಿಂದ 60 ಸೆಕೆಂಡುಗಳ ನಡುವೆ ಇರಬೇಕು. MP4 ಅಥವಾ MOV ಯಾವುದೇ ಬೆಂಬಲಿತ ವೀಡಿಯೊ ಸ್ವರೂಪದಲ್ಲಿ, ಗಾತ್ರ: ಗರಿಷ್ಠ 100 MB ಇರಬೇಕು. ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾಡಬೇಕು.

ಆಯ್ದ ರೀಲ್ ರಚನೆಕಾರರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಆಯ್ದ ರೀಲ್‌ಗಳನ್ನು ಜಿಲ್ಲಾ ವಿಜ್ಞಾನ ಕೇಂದ್ರದ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅಪ್‌ ಲೋಡ್ ಮಾಡಲಾಗುತ್ತದೆ.

ಜೂನ್ 05 ರಂದು ಬೆಳಿಗ್ಗೆ 09 ಗಂಟೆಗೆ ತಾರಫೈಲ್ ಸರ್ಕಾರಿ ಪ್ರೌಢಶಾಲೆ ಮತ್ತು ವಿಜ್ಞಾನ ಕೇಂದ್ರ ಹಾಗು ವಿಜ್ಞಾನ ಉದ್ಯಾನವನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್.ಆರ್. ಮೀಸೆ ಅವರು ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ” ವಿಷಯ ಕುರಿತು ಉಪನ್ಯಾಸ ನೀಡುವರು.

ಮಧ್ಯಾಹ್ನ 12.15 ಗಂಟೆಗೆ” ನಮ್ಮಪರಿಸರ ಮತ್ತು ಪ್ಲಾಸ್ಟಿಕ್ ಮಾಲಿನ್ಯ”.ವಿಷಯ ಕುರಿತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸಕ್ತಿ ಯುಳ್ಳ ಶಾಲೆಗಳು ಅಥವಾ ಕಾಲೇಜುಗಳು 2025ರ ಜೂನ್ 2 ರ ಸಂಜೆ 5 ಗಂಟೆಯೊಳಗೆ ಇಮೇಲ್ dscgeducation@gmail.com) ಅಥವಾ WhatsApp ಮೂಲಕ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472 – 270608 ಅಥವಾ ಮೊಬೈಲ್ ಸಂಖ್ಯೆ 9788078048 / 9447541616 ಗಳಿಗೆ ಸಂಪರ್ಕಿಸಬಹುದು.

Share post:

spot_imgspot_img

Popular

More like this
Related

ಕಲಬುರಗಿ| ಅಕ್ರಮ ಗಾಂಜಾ ಮಾರಾಟ; 48 ಸಾವಿರ ಮೌಲ್ಯದ 3 ಕೆಜಿ ಗಾಂಜಾ ಜಪ್ತಿ

ಕಲಬುರಗಿ: ಮಹಾರಾಷ್ಟ್ರದ ಮೂಲದಿಂದ ಅಕ್ರಮ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ...

ಕಲಬುರಗಿ| ಟಾಟಾ ವಾಹನ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

ಕಲಬುರಗಿ: ರಸ್ತೆ ದಾಟುತ್ತಿದ್ದಾಗ ಐಚರ್‌ ನಮೂನೆಯ ಟಾಟಾ ವಾಹನ ಡಿಕ್ಕಿ ಹೊಡೆದು...

ಕಲಬುರಗಿ| ಕಾರಿಗೆ ಡಿಕ್ಕಿಯಾದ ಬೈಕ್; ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲಬುರಗಿ: ಇನ್ನೋವಾ ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ...

ಕಲಬುರಗಿ| ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಲಬುರಗಿ: ವಿದ್ಯುತ್‌ ಸ್ಥಾವರದ ಬೇಲಿ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ...