ಕಲಬುರಗಿ| ವಿಶ್ವ ಜನಸಂಖ್ಯಾ ದಿನ : 2050 ರಲ್ಲಿ ಜಗತ್ತು ಹೇಗಿರುತ್ತದೆ ?

Date:

Share post:

ಕಲಬುರಗಿ: ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಈ ಜನಸಂಖ್ಯಾ ಹೆಚ್ಚಳದಿಂದಾಗಿ ಉಂಟಾಗುತ್ತಿರುವ ಜಾಗತಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನವು ಹೊಂದಿದೆ. ಜುಲೈ 11, 1987 ರಲ್ಲಿ ವಿಶ್ವದ ಜನಸಂಖ್ಯೆ (500 ಕೋಟಿ) ಐದು ಬಿಲಿಯನ್ ದಾಟಿದ ಸಂದರ್ಭದ ಕುರುಹಾಗಿ ಈ ವಿಶೇಷ ದಿನದ ಆಚರಣೆ ಪ್ರಾರಂಭಿಸಲಾಯಿತು.

ಡಾ. ಕೆ.ಸಿ. ಜಕರಿಯಾ ಅವರು ವಿಶ್ವಜನಸಂಖ್ಯಾ ದಿನದ ಕಲ್ಪನೆಯನ್ನು ಸೂಚಿಸಿದರು. ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ ‘ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯು.ಎ£.ï‌ಡಿ.ಪಿ ) ಮಂಡಳಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯಿAದಾಗಿ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ೧೯೮೯ ರಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಸ್ಥಾಪಿಸಿತು. ಜುಲೈ 11, 1990ರಂದು, 90 ಕ್ಕೂ ಹೆಚ್ಚು ದೇಶಗಳು ವಿಶ್ವ ಜನಸಂಖ್ಯಾ ದಿನದ ಮೊದಲ ಆಚರಣೆಗೆ ಸಾಕ್ಷಿಯಾದವು.

ವಿಶ್ವ ಸಂಸ್ಥೆಯು 2025ರ ವಿಶ್ವ ಜನಸಂಖ್ಯಾ ದಿನದ ಥೀಮ್ ಅನ್ನು ಯುವಜನರಿಗೆ ಅವರು ಬಯಸುವ ಕುಟುಂಬಗಳನ್ನು ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ರಚಿಸಲು ಅಧಿಕಾರ ನೀಡುವುದು” ಎಂದು ಘೋಷಿಸಿದೆ. ಈ ಥೀಮ್ ಯು.ಎನ್ ಸಂಸ್ಥೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ಇದು ವಿಶ್ವದ ಅತಿದೊಡ್ಡ ಯುವಪೀಳಿಗೆಯನ್ನು ಎತ್ತಿತೋರಿಸುತ್ತದೆ.

ಇದು ಸರ್ಕಾರಗಳು ಮತ್ತು ಸಮಾಜಗಳು ಗುಣಮಟ್ಟದ ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯೋಗ ಮತ್ತು ಸಮಗ್ರ ಕುಟುಂಬ ಯೋಜನಾ ಸೇವೆಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತದೆ, ಇದರ ಸಹಾಯದಿಂದ ಯುವ ಜನರು ಆರ್ಥಿಕ ಅನಿಶ್ಚಿತತೆ, ಹವಾಮಾನ ಬದಲಾವಣೆ ಮತ್ತು ಜನಸಂಖ್ಯಾ ಪರಿವರ್ತನೆಗಳ ನಡುವೆಯೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬಹುದು. ಮದುವೆ ಮತ್ತು ಪೋಷಕರಾಗುವಂತಹ ವಿಷಯಗಳ ಬಗ್ಗೆ ಯುವ ಜನರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡುವುದರಿಂದ ಮುಂದಿನ ಪೀಳಿಗೆಗೆ ನ್ಯಾಯ, ಸುಸ್ಥಿರತೆ ಮತ್ತು ಭರವಸೆ ಸಿಗುತ್ತದೆ.

ಕಳೆದ ಕೆಲವು ತಿಂಗಳುಗಳಲ್ಲಿ ಜನಸಂಖ್ಯೆಗೆ ಸಂಬoಧಪಟ್ಟoತೆ ಕೆಲವೊಂದು ಮೈಲುಗಳನ್ನು ನಾವು ನೋಡಿದಾಗ ಜಾಗತಿಕ ಜನಸಂಖ್ಯೆಯು 2022ನವೆಂಬರ ತಿಂಗಳಿನಲ್ಲಿ ಎಂಟು ಶತಕೋಟಿ ಜನರನ್ನು ತಲುಪಿತು ಮತ್ತು ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟçವಾಯಿತು.

ಜನಸಂಖ್ಯಾ ಹೆಚ್ಚಳ ಕೇವಲ ಚೀನಾ, ಭಾರತವಷ್ಟೇ ಅಲ್ಲ ವಿಶ್ವಕ್ಕೆ ದೊಡ್ಡ ಪಿಡುಗು. ಒಂದು ಅಂದಾಜಿನ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 8.5 ಶತಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ.

ಪ್ರಪಂಚವು ಪ್ರಸ್ತುತ ಸುಮಾರು ೮ ಶತಕೋಟಿ ಜನಸಂಖ್ಯೆಯನು ಹೊಂದಿದೆ. ಆದಾಗ್ಯೂ, ಮುಂದಿನ 30 ವರ್ಷಗಳಲ್ಲಿ, ಇದು 2050ರವೇಳೆಗೆ ಸುಮಾರು 9.7 ಶತಕೋಟಿ ಜನರನ್ನು ತಲುಪುತ್ತದೆ ಎಂದು ವಿಶ್ವಸಂಸ್ತೆಯ ಜನಸಂಖ್ಯಾ ವಿಭಾಗ ಅಂದಾಜಿಸಿದೆ.

ವೇಗವಾಗಿ ಬೆಳೆಯುತ್ತಿರುವ ವಿಶ್ವದ ಜನಸಂಖ್ಯೆ :

ಯುಎನ್ ನ ಅಂದಾಜಿನ ಪ್ರಕಾರ , ಪ್ರತಿ ವರ್ಷ ಸುಮಾರು ೮೩ ಮಿಲಿಯನ್ ಜನರು ವೇಗವಾಗಿ ಬೆಳೆಯುತ್ತಿರುವ ವಿಶ್ವದ ಜನಸಂಖ್ಯೆಗೆ ಸೇರ್ಪಡೆಯಾಗುತ್ತಾರೆ. ಇದರೊಂದಿಗೆ, ಜಾಗತಿಕ ಜನಸಂಖ್ಯೆಯು 2030 ರವೇಳೆಗೆ 8.5 ಶತಕೋಟಿ, 2050 ರಲ್ಲಿ 9.7 ಶತಕೋಟಿ ಮತ್ತು 2100 ರವೇಳೆಗೆ 11.2 ಶತಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

70 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯು ಹೇಗೆ ಮೂರುಪಟ್ಟು ಹೆಚ್ಚಾಗಿದೆ. ವಿಶ್ವದಲ್ಲಿ 1955 ರಲ್ಲಿ, 2.8 ಬಿಲಿಯನ್ ಜನರಿದ್ದರು. ಪ್ರಸ್ತುತ ಅದು ಭಾರತ ಮತ್ತು ಚೀನಾದ ಜನಸಂಖ್ಯೆ ಸಮವಾಗಿದೆ. 1950 ರಲ್ಲಿ 2.5 ಶತಕೋಟಿ ಜನರಿಂದ 2022 ರಲ್ಲಿ 8 ಶತಕೋಟಿಗೆ ಮೂರುಪಟ್ಟು ಹೆಚ್ಚಾಯಿತು ಎಂಬುದನ್ನು ಯುಎನ್ ಜನಸಂಖ್ಯಾ ವಿಭಾಗದಿಂದ ತಿಳಿದುಕೊಳ್ಳಬಹುದು. ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗದ ಅಂದಾಜಿನ ಪ್ರಕಾರ, 2050 ರವೇಳೆಗೆ ಪ್ರಪಂಚವು ಸುಮಾರು 9.7 ಶತಕೋಟಿ ಜನರನ್ನು ತಲುಪುತ್ತದೆ.

2050 ರವೇಳೆಗೆ ಭಾರತ ಮತ್ತು ಚೀನಾದ ನಂತರ ನೈಜೇರಿಯವು ವಿಶ್ವದ ಮೂರನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ಯುಎನ್ ಜನಸಂಖ್ಯಾ ವಿಭಾಗ ಅಂದಾಜಿಸಿದೆ. ನಂತರದ ಸ್ಥಾನಗಳನ್ನು ಕ್ರಮವಾಗಿ ಯುನೈಟೆಡ್ ಸ್ಟೇಟ್ಸ್, ಪಾಕಿಸ್ತಾನ, ಇಂಡೋನೇಷ್ಯಾ, ಬ್ರೆಜಿಲ್, ಕಾಂಗೋ, ಇತೋಪಿಯ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಪಡೆಯಲಿವೆ.

2050 ಹೊತ್ತಿಗೆ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು : ಯುಎನ್ (2022) ಅಂದಾಜಿನ ಪ್ರಕಾರ 2050 ರವೇಳೆಗೆ ವಿಶ್ವದ ಜನಸಂಖ್ಯೆಯು 9.7 ಬಿಲಿಯನ್ ತಲುಪುವ ನೀರಿಕ್ಷೆ ಇದೆ. ಅದೆ ರೀತಿಯಾಗಿ ಭಾರತ 1.67 ಬಿಲಿಯನ್, ಚೀನಾ 1.31 ಬಿಲಿಯನ್, ನೈಜೀರಿಯಾ 377 ಮಿಲಿಯನ್, ಯುಎಸ್ಎ 375 ಮಿಲಿಯನ್, ಪಾಕಿಸ್ತಾನ 367 ಮಿಲಿಯನ್, ಇಂಡೋನೇಷ್ಯಾ 317 ಮಿಲಿಯನ್, ಬ್ರೆಜಿಲ್ 230 ಮಿಲಿಯನ್, ಈಥೋಪಿಯ 214 ಮಿಲಿಯನ್ ಹಾಗೂ ಬಾಂಗ್ಲಾದೇಶ 203 ಮಿಲಿಯನ್ ಜನಸಂಖ್ಯೆ ತಲುಪುವ ನಿರೀಕ್ಷೆ ಇದೆ.

 

ಜನಸಂಖ್ಯೆಯನ್ನು ನಿರ್ಧರಿಸುವ ಅಂಶಗಳು:

ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯು ಮೂರು ಪ್ರಮುಖವಾದ ಅಂಶಗಳಿoದ ನಿರ್ಧಾರವಾಗುತ್ತದೆ. ಜನನದರ, ಮರಣದರ, ವಲಸೆದರ (ದೇಶವನ್ನು ಪ್ರವೇಶಿಸುವ ಮತ್ತು ತೊರೆಯುವ ಜನರು) ಜನನ ದರ ಮತ್ತು ವಲಸೆ (ದೇಶವನ್ನು ಪ್ರವೇಶಿಸುವ ಜನರ) ಸಂಖ್ಯೆಯು ಮರಣದರ ಮತ್ತು ವಲಸೆ (ದೇಶವನ್ನು ತೊರೆಯುವ ಜನರ ಪ್ರಮಾಣ) ಸಂಖ್ಯೆಯನ್ನು ಮೀರಿದರೆ ದೇಶದ ಜನಸಂಖ್ಯೆಯು ಬೆಳೆಯುತ್ತದೆ ಹಾಗು ಇದಕ್ಕೆ ವಿರುದ್ಧವಾಗಿ ಸಂಭವಿಸಿದರೆ ಜನಸಂಖ್ಯೆಯು ಕುಸಿಯುತ್ತದೆ.

ವಿಶ್ವ ಜನ ಸಂಖ್ಯೆಯ ಶತಕೋಟಿ ಮೈಲಿಗಲ್ಲುಗಳು:

ಜಾಗತಿಕ ಜನಸಂಖ್ಯೆಯು 1800 ರಿಂದ ಎಂಟು ಪಟ್ಟು ಹೆಚ್ಚಾಗಿದೆ, 1804 ರಲ್ಲಿ ಅಂದಾಜು ಒಂದು ಶತಕೋಟಿಯಿಂದ 2022 ರಲ್ಲಿ ಎಂಟು ಶತಕೋಟಿಗೆ ಏರಿದೆ. ಈ ಬೆಳವಣಿಗೆಗೆ ಹೆಚ್ಚಾಗಿ ಆಧುನಿಕ ಔಷಧದ ಅಭಿವೃದ್ಧಿ ಮತ್ತು ಜಾಗತಿಕ ಆಹಾರ ಸರಬರಾಜುಗಳನ್ನು ಹೆಚ್ಚಿಸಿದ ಕೃಷಿಯ ಕೈಗಾರಿಕೀಕರಣವೇ ಕಾರಣ ಎಂದು ಹೇಳಬಹುದು.

ಒಂದು ದೇಶವು ಪ್ರಗತಿ ಯಾಗಬೇಕಾದರೆ ಅದಕ್ಕೆ ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಮಾನವ ಸಂಪನ್ಮೂಲವು ಅತ್ಯಗತ್ಯ. ಆದರೆ ದೇಶದ ಅಭಿವೃದ್ಧಿ ದರಕ್ಕಿಂತ ಜನಸಂಖ್ಯೆಯ ಬೆಳವಣಿಗೆ ದರ ಹೆಚ್ಚಾದರೆ ಗಂಭೀರ ಸಮಸ್ಯೆಗಳು ಎದುರಾಗುತ್ತದೆ. ಆದ್ದರಿಂದ ರಾಷ್ಟ್ರದ ಪ್ರಗತಿಗೆ ಜನಸಂಖ್ಯಾ ಬೆಳವಣಿಗೆ ದರ ಯಾವಾಗಲೂ ಅಭಿವೃದ್ಧಿ ದರಕ್ಕಿಂತ ಕಡಿಮೆ ಇರಬೇಕು. ಪ್ರಸ್ತುತ ದಿನಗಳಲ್ಲಿ ಜಾಗತಿಕ ಜನಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.

ಈ ಜನಸಂಖೆ ್ಯ ಹೆಚ್ಚಳವು ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸುವುದು ಮಾತ್ರ ಖಂಡಿತ. ಜನಸಂಖ್ಯಾ ಹೆಚ್ಚಳದಿಂದ ಪರಿಹರಿಸಲಾಗದ ಹಲವಾರು ತೊಂದರೆಗಳು ಇಡೀ ವಿಶ್ವಕ್ಕೆ ಎದುರಾಗುತ್ತದೆ. ಹೀಗಾಗಿ ಎಲ್ಲ ದೇಶಗಳು ಈ ಬಗ್ಗೆ ಎಚ್ಚೆತ್ತುಕೊಂಡು ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಹೀಗೆ ಜನಸಂಖ್ಯೆ ಏರಿಕೆಯಾಗುತ್ತ ಹೋದರೆ ಜನಸಂಖ್ಯೆಯನ್ನು ನಿಯಂತ್ರಿಸುವುದು ಕಷ್ಟವಾಗುವುದಂತೂ ಖಂಡಿತ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ.

_ಡಾ.ಸಿದ್ಧಲಿಂಗರೆಡ್ಡಿ
_ಡಾ.ಸಿದ್ಧಲಿಂಗರೆಡ್ಡಿ

-ಡಾ.ಸಿದ್ಧಲಿಂಗರೆಡ್ಡಿ

(ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಮಹಾವಿದ್ಯಾಲಯ, ಕಲಬುರಗಿ)

Share post:

spot_imgspot_img

Popular

More like this
Related

ಕಲಬುರಗಿ| ಬಿ.ಇಡಿ ಪದವಿ ಹೊಂದದ ಉಪನ್ಯಾಸಕರಿಗೆ ವೇತನ ಸಹಿತ ಬಿ.ಇಡಿ ವ್ಯಾಸಂಗಕ್ಕೆ ಸರ್ಕಾರ ಅನುಮತಿ: ನಮೋಶಿ ಹರ್ಷ

ಕಲಬುರಗಿ: ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 04-02-2008ರ ನಂತರ ನೇಮಕಗೊಂಡು...

ಕಲಬುರಗಿ| ವಿವಿಧ ಕ್ರಿಯಾ ಯೋಜನೆಗಳಿಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ

ಕಲಬುರಗಿ: 2025-26ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ...

ಕಲಬುರಗಿ| ಕೋಲಿ-ಕಬ್ಬಲಿಗ ಜನಾಂಗ ಎಸ್.ಟಿ(ST) ಪಟ್ಟಿಗೆ ಸೇರ್ಪಡೆ ಸಂಬಂಧ ಸಿಎಂ ಭೇಟಿ: ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಕೋಲಿ, ಕಬ್ಬಲಿಗ.ಬೆಸ್ತ, ಅಂಬಿಗ, ಬಾರಕಿ ಜನಾಂಗಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ...

ಕಲಬುರಗಿ| ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರ ಕಲಬುರಗಿ ಪ್ರವಾಸ

ಕಲಬುರಗಿ: ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ...