ಕಲಬುರಗಿ: ಅಹಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆ ಕೊಡಬೇಕು ಎಂದು ಸಚಿವ ಈಶ್ಚರ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ವಿಮಾನ ದುರಂತ ಘಟನೆಗೆ ಕೇಂದ್ರ ಸರ್ಕಾರ ಹೊಣೆಹೊತ್ತು ಕೂಡಲೇ ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆ ನೀಡಬೇಕು. ಇದು ಒಂದು ಅತಿದೊಡ್ಡ ದುರಂತವಾಗಿದೆ, ಅತ್ಯಂತ ನೋವಿನ ಸಂಗತಿಯಾಗಿದೆ.
ಇಂತಹ ದುರಂತ ನಡೆಯದಂತೆ ಸರ್ಕಾರ ಕ್ರಮ ಜರುಗಿಸಬೇಕು, ಹೀಗಾಗಿ ಈ ದುರಂತದ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆಯಾಗಿ ಆ ವರದಿ ಜನರ ಮುಂದೆ ಇಡಬೇಕು ಎಂದರು.
ಇನ್ನೂ, ಟಾಟಾ ಗ್ರೂಪ್ ಸಮೂಹದಿಂದ 1 ಕೋಟಿ ಪರಿಹಾರ ಘೋಷಿಸಿದೆ ಆದರೆ ಆ ಪರಿವಾರದವರಿಗೆ ಏಷ್ಟು ಕೋಟಿ ಕೊಟ್ಟರು ಕಡಿಮೆಯೆ ಎಂದು ಹೇಳಿದರು.
ಕಾಲ್ತುಳಿತ ಪ್ರಕರಣಕ್ಕೆ ರಾಜೀನಾಮೆ ಕೊಡಬೇಕು ಎನ್ನುವ ಬಿಜೆಪಿಗರು ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಕಾಲ್ತುಳಿತಕ್ಕೆ ರಾಜೀನಾಮೆ ಕೇಳುವವರು ಕುಂಭಮೇಳದಲ್ಲಿ ಘಟನೆ ಕುರಿತಾಗಿಯೂ ರಾಜೀನಾಮೆ ಕೇಳಬೇಕು, ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದರು.