ಕಲಬುರಗಿ: ವಸತಿ ಶಾಲೆಯೊಂದರಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುವ ದಲಿತ ಮಹಿಳಾ ಸಿಬ್ಬಂದಿಯಿಂದ ಮುಖ್ಯ ಶಿಕ್ಷಕಿಯೋರ್ವಳು ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿರುವ ಕಸ್ತೂರ್ ಬಾ ಬಾಲಕಿಯರ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ವಿಜಯಶ್ರೀ ಪಾಟೀಲ್ ಮಸಾಜ್ ಮಾಡಿಸಿಕೊಂಡಿರುವ ಶಿಕ್ಷಕಿ ಎಂದು ತಿಳಿದುಬಂದಿದೆ.
ಹೊರಗುತ್ತಿಗೆ ನೌಕರರ ಬಡತನವೇ ಬಂಡವಾಳವಾಗಿಸಿಕೊಂಡು ದಲಿತ ಸಿಬ್ಬಂದಿಯಿಂದ ವಿಜಯಶ್ರೀ ಪಾಟೀಲ್ ಮಸಾಜ್ ಮಾಡಿಕೊಂಡು ತಮ್ಮ ಕರಾಳ ಮುಖವನ್ನು ತೋರಿಸಿದ್ದಾರೆ. ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಶ್ರವಣಕುಮಾರ ನಾಯಕ ಅವರು ಆಗ್ರಹಿಸಿದ್ದಾರೆ
ವಿಡಿಯೋ ವೈರಲ್ ಆಯುತ್ತಿದ್ದಂತೆಯೇ ಮುಖ್ಯ ಶಿಕ್ಷಕಿಯ ವರ್ತನೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.