ಕಲಬುರಗಿ: ವಕ್ಫ್ ಆಸ್ತಿ ದಾನದ ರೋಪವಾಗಿದೆ, ಅಲ್ಲಹಾನ ಆಸ್ತಿಯಾಗಿದೆ ಇದರ ಮೇಲೆ ಯಾವುದೇ ಕಾಯ್ದೆ ಕಾನೂನು ತರಬಾರದು ಎಂದು ಒತ್ತಾಯಿಸಿ ಕೇಂದ್ರ ಸರಕಾರದ ನೂತನ ವಕ್ಫ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಶುಕ್ರವಾರ ನಗರ ಜಿಲ್ಲಾಧಿಕಾರಿ ಕಚೇರಿ ಮುಂದಿದೆ ಮಹಿಳಾ ಏಕತಾ ಮಂಚ್ ವತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆ 2025 ದೇಶದ ಸಂವಿಧಾನಕ್ಕೆ ವಿರುದ್ದವಾಗಿದೆ, ಈ ಕರಾಳ ಕಾನೂನು ಜಾರಿಗೆ ಬಂದ ನಂತರ ವಕ್ಷ ಆಸ್ತಿಗಳು ಮುಸ್ಲಿಂರ ಕೈಯಿಂದ ಹೊಗುತ್ತದೆ. ಮುಸ್ಲಿಮರು ವಿವಿಧ ಉತ್ತಮ ಕಾರ್ಯಗಳಿಗೆ ವಕ್ಷ ನೀಡುತ್ತಿದ್ದಾರೆ. ಸಿದಿಗಳು, ಈದ್ಗಾ, ಖಬರಿಸ್ತಾನ ಮತ್ತು ಆಶುರ ಖಾನಾ ಮತ್ತು ದರ್ಗಗಳ, ಅನಾಥ ಆಶ್ರಮಗಳು, ಬಡವರ ಮನೆಗಳನ್ನು ನಿರ್ಮಿಸಲು ಕೂಡಾ ಭೂಮಿಯನ್ನು ಕೊಟ್ಟಿದಾರೆ ರೋಗಿಗಳಿಗೆ ಮತ್ತು ಅಂಗವಿಕಲರಿಗೆ ಮತ್ತು ಪ್ರಾಣಿಪಕ್ಷಿಗಳಿಗೂ ರಕ್ಷಣೆ ಮಾಡಲು ವಕ್ಷ ಆಸ್ತಿಯನ್ನು ಸಮರ್ಪಪಿಸಿದ್ದಾರೆ.
ದತ್ತಿ ಭೂಮಿಗಳು ವಕ್ಷ ಕಾನೂನು ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರಕಾರ ಮುಸ್ಲಿಂರಿಗೆ ಅನ್ಯಾಯಮಾಡಿದ್ದು ಇದು ನಮಗೆ ಸ್ವಿಕಾರ ಇಲ್ಲ. ವಕ್ಫ್ ಶರಿಯಾ ಮತ್ತು ಮುಸ್ಲಿಂರ ಮೇಲೆ ಪರಿಣಾಮ ಬಿರುವುದಲ್ಲದೆ ವಕ್ಷ ಆಸ್ತಿಗಳನ್ನು ಮುಸ್ಲಿಂರ ಕೈಯಿಂದ ತೆಗೆದು ಹಾಕಲಾಗಿದೆ. ವಕ್ಷ ಕಾಯ್ದೆ 2025ರ ಅನುಷ್ಟಾನದ ನಂತರ ಆಸ್ತಿಗಳಿಗೆ ರಕ್ಷಣೆ ಮಾಡುವುದು ಕಷ್ಟವಾಗುತ್ತದೆ ಮತ್ತು ಹಳೆಯ ಆಸ್ತಿಗಳಿಗೂ ದಕ್ಕೆ ಆಗುತ್ತದೆ. ಈ ಒಂದು ವಕ್ಷ ಕಾಯ್ದೆ ಕರಾಳ ಕಾನೂನು ರದ್ದು ಮಾಡಬೇಕೆಂದು ಈ ಸಂದರ್ಭದಲ್ಲಿ ಧರಣಿ ನಿರತ ಮಹಿಳೆಯರು ಆಗ್ರಹಿಸಿದರು.
ಸಂಘಟನೆಯ ಅಧ್ಯಕ್ಷರಾದ ಶೇಖ್ ಸಮ್ರೀನ್, ಉಪಾಧ್ಯಕ್ಷ ಸಾಯಿರಾ ಬಾನು, ಸೈಯದಾ ತಹೆನಿಯತ್ ಫಾತಿಮಾ, ಕಾರ್ಯಧ್ಯಕ್ಷ ಸಲಹೆಗಾರತಿ ಜೇಬಾ, ಅವರ ನೇತೃತ್ವದಲ್ಲಿ ಸತ್ಯಾಗ್ರಹ ಧರಣಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಜರತ್ ಸೈಯದ್ ಮುಕ್ತಾರ್ ಪಾಷಾ, ಶರಣ ಅಲ್ಲಮಪ್ರಭು ಪಾಟೀಲ್, ಮುಸ್ಲಿಂ ಪರಸ್ನಾಲ್ ಕಾನೂನು ಮಂಡಳಿಯ ಸಂಚಾಲಕ ಅಸ್ಗರ್ ಚುಲ್ಬುಲ್, ಗುರ್ಮಿತ್ ಸಿಂಗ್ , ಡಾ. ಫಾರೂಕ್ ಮಣ್ಣೂರ್ , ಮೌಲನಾ ಫಕ್ರೋದ್ದೀನ್, ಮುಷ್ತಾಕ್ ಅಹಮದ್, ಶೇಖ್ ಹುಸೇನ್ ಮಹಾನಗರ ಪಾಲಿಕೆ ಸದಸ್ಯರು, ಅಜೀಂ ಶಿರ್ನಿಫರೋಶ್, ರಹೀಂ ಮಿರ್ಚಿ, ಆದಿಲ್ ಸುಲೇಮಾನ್ ಸೇಠ್ , ವಕೀಲರಾದ ಜಬ್ಬಾರ್ ಗೋಲಾ, ಹೈದರ್ ಅಲಿ ಬಾಗ್ಬನ್, ಮಹೇಶ್ ರಾಠೋಡ್ , ಬಾಬು ಕೂಡಿ, ಇಬ್ರಾಹಿಂ ಪಟೇಲ್ ಯಳವಾರ, ನಜೀರದ್ದೀನ್ ಮುತವಲ್ಲಿ, ಮೌಲಾ ಮುಲ್ಲಾ , ಅಜೀಂ ಶೇಖ್ , ಆಲಂದಾರ ಜೈದಿ, ಗೀತಾ ಮುದಗೋಳ, ನವಾಬ್ ಖಾನ್ , ಮುಜೀಬ್ ಖಾನ್, ಶಬೀರ್ ಬಿಲ್ಡರ್, ರೈಯಿಸ್ ಭಾಯಿ, ಜಗತ್ ಸಿಂಗ್ , ತಜ್ಮುಲ್ ಯಾದಗೀರ್, ಉಮರ್ ಜುನೈದಿ, ಹರೂನ್ ಖುರೇಷಿ , ಫರೀದ್ ಸಹಾಬ್, ಅಮೀನಾ ಪಟೇಲ್, ಶಾಹೀನ್ ಬೇಗಂ, ಖೈರುನಿಸ್ಸಾ ಬೇಗಂ, ಫೌಜಿಯಾ, ಪರ್ವೀನ್ ಮೇಡಂ, ಫರ್ಜಾನಾ ಮೇಡಂ, ಮಹಿಬೂಬ್ ಶಾಹಾ, ಬಾಬಾ, ಜೀಲಾನ್ ಗುತ್ತೇದಾರ್, ಅಲಿ ರಜಾ, ದಾದೆ ಪಟೇಲ್, ಬಾಬಾ ಫಕ್ರೋದ್ದೀನ್ ಅನ್ಸಾರಿ, ಮುನ್ನಿ ಆಪಾ, ಮೊದಿನ್ ಪಟೇಲ್ ಅಣಬಿ, ಪ್ರತಿಭಟನೆಯಲ್ಲಿ ಅನೇಕ ಮಹಿಳೆಯರು,bಗಣ್ಯ ವ್ಯಕ್ತಿಗಳು, ರಾಜಕೀಯ ಧುರೀಣರು, ಸಾಮಾಜಿಕ ಕಾರ್ಯಕರ್ತರು, ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.