ಕಲಬುರಗಿ: ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ಅವರನ್ನು ನಕ್ಸ್ ಲಿಯರ್ ಗುಂಪು ಅಣುವಸ್ತ್ರ (ಬಾಂಬು) ಇಡುವ ಮುಖಾಂತರ ತಮಿಳುನಾಡಿನ ಶ್ರೀ ಪೆರುಬಂದರಿನಲಿ ಹತ್ಯೆ ಮಾಡಲಾಗಿತ್ತು. ಅದರ ಸಂಕೇತವಾಗಿ ಅವರು ಹುತಾತ್ಮರಾದ ಸ್ಥಳದಿಂದ ಇಡೀ ದೇಶಾದ್ಯಂತ ಅವರಿಗೆ ಗೌರವ ನಮನ ಸಲ್ಲಿಸಲು ರಾಜೀವ್ ಗಾಂಧಿ ಜ್ಯೋತಿ ಸದ್ಭಾವನ ಯಾತ್ರೆ ಮಾಡಲಾಗುತ್ತದೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ 34ನೇ ಜ್ಯೋತಿ ಯಾತ್ರೆಯು ದೇಶದ ಎಲ್ಲಾ ರಾಜ್ಯಗಳ ಮುಖಾಂತರ ನವದೆಲಿಗೆ ತಲುಪುತ್ತದೆ. ಈ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲೆಗೆ ತಲುಪಿರುವ ಪ್ರಯುಕ್ತ ಈ ಯಾತ್ರೆಯೂ ಕಲಬುರಗಿಯಿಂದ ಬೀದರ ಜಿಲ್ಲೆಯ ಮಾರ್ಗವಾಗಿ ನವದೆಹಲಿಗೆ ತಲುಪುತ್ತದೆ. ಈ ಜ್ಯೋತಿ ಯಾತ್ರೆಗೆ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಾತ್ರಿಯ ನೇತೃತ್ವ ವಹಿಸಿರುವ ಆರ್ ದೊರೈ, ಕಿಶೋರ್ ಪ್ರಸಾದ್, ಪಿ ಶ್ರೀನಿವಾಸಪ್ಪ ಮಾಣಿಕ್ ರೆಡ್ಡಿ, ವಿಕ್ಕಿ ರಾಲಪ್ಪ, ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯ ಕಾರ್ಯದರ್ಶಿಯಾದ ಶಿವರಾಜ ಕೊಳಕೂರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವಾನಂದ ತೂರವಿ, ತುಕಾರಾಮ ಕೊಳೋರ, ಪ್ರಕಾಶ್ ಗುಲ್ಲಬಾಡಿ, ದೇವರಾಜ್ ಕೊಳೋರ, ರೋಹಿತ್ ಗುಲ್ಲಬಾಡಿ ಸೇರಿದತೆ ಇನ್ನಿತರರು ಉಪಸ್ಥಿತರಿದ್ದರು.